ಬೆಳೆಗಳಿಗೆ ನೀರು ಬಿಡಿ ಇಲ್ಲ ರಾಜೀನಾಮೆ ನೀಡಿ ಕೆ ಆರ್ ಎಸ್ ಪಕ್ಷದ ನಿರುಪಾದಿ ಕೆ ಗೊಮರ್ಸಿ ಒತ್ತಾಯ

ಸಿಂಧನೂರು : ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ವತಿಯಿಂದ ಸಿಂಧನೂರು ತಾಲೂಕ ತಹಶೀಲ್ದಾರ್ ಕಚೇರಿ ಮುತ್ತಿಗೆ ಹಾಕವ ಯತ್ನ ನಡೆಯಿತು. ಶಾಸಕರು ಹಾಗೂ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿ ಕೆ ಆರ್ ಎಸ್ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷ ನಿರುಪಾದಿ ಕೆ ಗೊಮರ್ಸಿ ಮಾತನಾಡಿ

ತಾಲೂಕಿನಲ್ಲಿ ಪ್ರಸ್ತುತ 2023-24 ನೇ ಸಾಲಿನಲ್ಲಿ ಮುಂಗಾರು ಸಂಪೂರ್ಣವಾಗಿ ಕೈಕೊಟ್ಟಿದ್ದರಿಂದ ಜೋಳ ಹತ್ತಿ ಕಡಲೆ ತೊಗರಿ ಸೇರಿದಂತೆ ಇನ್ನಿತರ ಬೆಳೆಗಳು ಒಣಗಿದ್ದು ಸಾಗುವಳಿದಾರರಿಗೆ ಖರ್ಚು ಮಾಡಿದ ಮೊತ್ತ ಕೂಡ ರೈತರಿಗೆ ಹಿಂದಕ್ಕೆ ಬಾರದಂತ ಸ್ಥಿತಿ ಉಂಟಾಗಿದೆ. ಇನ್ನು ಕಾಲುವೆ ವಿಷಯವಾಗಿ ನೀರಾವರಿ ಇಲಾಖೆ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಕಾಲುವೆಯಲ್ಲಿ ನೀರಿನ ಹರಿವು ಸಮರ್ಪಕವಾಗಿರುವುದಿಲ್ಲ,

ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ, ಗೇಜ್ ಸರಿಯಾಗಿ ಇರುವುದಿಲ್ಲ, ಅಲ್ಲದೆ ನೀರನ್ನು ಮಾರಾಟ ಮಾಡಿಕೊಳ್ಳುತ್ತಿರುವ ವಿಷಯಗಳು ಕೂಡ ಕೇಳಿ ಬರುತ್ತವೆ. ನಮಗೆ ತಿಳಿದ ಪ್ರಕಾರ ಕಾಲುವೆ ಮಧ್ಯ ಮತ್ತು ಕೊನೆಯ ಭಾಗದ ಜಮೀನುಗಳಿಗೆ ಕಳೆದ ದಶಕದಿಂದಲೂ ಕಾಲುವೆ ನೀರು ಹೋಗುತ್ತಿಲ್ಲ ಈ ಕುರಿತಂತೆ ಕೆಳಭಾಗದ ರೈತರು ಹಲವಾರು ಹೋರಾಟಗಳನ್ನ ಮಾಡಿದರು ಪ್ರಯೋಜನವಾಗಿರುವುದಿಲ್ಲ.

ತಾಲೂಕಿನಲ್ಲಿ ನಕಲಿ ಬೀಜಗಳ ಪೂರೈಕೆಯಿಂದಾಗಿ ರೈತರು ತತ್ತರಿಸಿ ಹೋಗಿದ್ದಾರೆ ಬೆಳೆದ ಭತ್ತಕ್ಕೆ ಬೆಂಬಲ ಬೆಲೆ ಇಲ್ಲ ರಾಸಾಯನಿಕ ಕ್ರಿಮಿ ನಾಶಕಗಳ ಬೆಲೆ ಗಗನಕ್ಕೆರಿದ್ದು ಈ ಸಾಲಿನಲ್ಲಿ ಇಳುವರಿ ಕೂಡ ಬಂದಿರುವುದಿಲ್ಲ.ತೆನೆ ಹಾಲು ಕಟ್ಟುವ ಮೊದಲೇ ಜೊಳ್ಳುಗುತ್ತಿವೆ

ಇನ್ನು ಕೃಷಿ ಇಲಾಖೆಯವರು ಮಲಗಿ ಗೊರಕೆ ಹೊಡೆಯುತ್ತಿದ್ದಾರೆ. ಈವರೆಗೂ ರೈತರಿಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ರಾಜ್ಯ ಮತ್ತು ಕೇಂದ್ರ ಸರ್ಕಾರದ ಸೌಲಭ್ಯಗಳ ಕುರಿತಂತೆ ರೈತರಿಗೆ ಯಾವುದೇ ಮಾಹಿತಿ ಇರುವುದಿಲ್ಲ ಹೋಗಿ ಕೇಳಿದರೆ ಬೇಜವಾಬ್ದಾರಿ ಉತ್ತರ ದೊರೆಯುತ್ತದೆ ಹಾಗಾದರೆ ರೈತರು ಏನ್ ಮಾಡಬೇಕು ಎಂಬುದು ಇಲ್ಲಿ ಯಕ್ಷ ಪ್ರಶ್ನೆಯಾಗಿರುತ್ತದೆ ಫಸಲ್ ಭೀಮಾ ಯೋಜನೆ ಕುರಿತಂತೆ ಯಾವುದೇ ರೀತಿಯ ಅರಿವು ಮತ್ತು ತಿಳುವಳಿಕೆ ಕಾರ್ಯಕ್ರಮ ಹಮ್ಮಿಕೊಳ್ಳದೆ ಇರುವುದರಿಂದ ಈ ಯೋಜನೆಯಿಂದ ರೈತರು ವಂಚಿತರಾಗುತ್ತಿದ್ದಾರೆ

ಈಗಾಗಲೇ ನಮ್ಮ ತಾಲೂಕಿನಲ್ಲಿ ರೈತರು ಆತ್ಮಹತ್ಯೆಗೆ ಶರಣಾಗಿರುವುದು ಕೂಡ ವರದಿಯಾಗಿದೆ ಅಲ್ಲದೆ ಸಾಕಷ್ಟು ರೈತರು ಗುಳೆ ಹೋಗಿದ್ದಾರೆ ಇನ್ನೂ ಕೂಡ ಹೋಗುತ್ತಿದ್ದಾರೆ ಈಗಾಗಲೇ ಹಲವಾರು ಸಂಘಟನೆಗಳು ಈ ಕುರಿತಂತೆ ತಮಗೆ ಮನವಿ ಪತ್ರಗಳನ್ನು ಸಲ್ಲಿಸಿದ್ದು ಕೂಡ ನಮ್ಮ ಪಕ್ಷದ ಗಮನಕ್ಕೆ ಬಂದಿದ್ದು ಆದರೆ ಈವರೆಗೂ ಈ ವಿಷಯವಾಗಿ ಅಧಿಕಾರಿಗಳು ಕ್ರಮ ಜರುಗಿಸಿರುವುದಿಲ್ಲ ಎಂಬುದು ಮಾತ್ರ ಸತ್ಯದ ಸಂಗತಿಯಾಗಿದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಪಕ್ಷದ ತಾಲೂಕ ಅಧ್ಯಕ್ಷ ಚನ್ನಬಸವ ಸೋಮಲಾಪೂರ, ಉಪಾಧ್ಯಕ್ಷ ಶರಣಪ್ಪ ಹಂಚಿನಾಳ, ನಗರ ಅಧ್ಯಕ್ಷ ಕೃಷ್ಣ ಸುಕಾಲ ಪೇಟೆ,ಶರಣಪ್ಪ ಗೊರೆಬಾಳ,ಜಗದೀಶ್ ಸುಲ್ತಾನಪುರ ಶರಣಪ್ಪ ಬೇರಗಿ,ಶ್ರೀನಿವಾಸ ಬೆಳಗುರ್ಕಿ, ವೀರೇಶ್ ಕೋಟೆ ,ಹುಸೇನಪ್ಪ ಬಾದರ್ಲಿ,ಹನುಮಂತ ಸುಕಾಲ್ ಪೇಟೆ, ವೆಂಕಟೇಶ ಮಾನ್ವಿ,ಸಣ್ಣ ಬಸವ ಹಾಗೂ ಪಕ್ಷದ ಮುಖಂಡರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ