ಬೀಡಿ ಕಾರ್ಮಿಕರ ನಿವೇಶನ ಕಬಳಿಸಲು ಯತ್ನ:ರಾಜಾಸಾಬ್
ದಾವಣಗೆರೆ:ಬಡ ಬೀಡಿ ಕಾರ್ಮಿಕರ ಮನೆ ಮತ್ತು ನಿವೇಶನಗಳು ಕಬಳಿಸಲು ಭೂಗಳ್ಳರು ಯತ್ನಿಸುತ್ತಿದ್ದಾರೆ ಎಂದು ದಾವಣಗೆರೆ ಬೀಡಿ ಕಾರ್ಮಿಕರ ಹಾಗೂ ಅಲ್ಪಸಂಖ್ಯಾತರ ವಿವಿದೋಶ ಕಲ್ಯಾಣ ಸಹಕಾರ ಸಂಘದ ಅಧ್ಯಕ್ಷ ಎಂ.ರಾಜಾಸಾಬ್ ಗಂಭೀರ ಆರೋಪ ಮಾಡಿದ್ದಾರೆ.
ನಮ್ಮ ಸಂಘದ ನಿವೇಶನ ಮತ್ತು ಆರ್.ಸಿ.ಸಿ ಮನೆ ಪಡೆದ ಕೆಲ ಮಹಿಳಾ ಸದಸ್ಯರು ನಮ್ಮ ಕಛೇರಿ ಹತ್ತಿರ ಬಂದು ನಾವು ತಯಾರಿಸಿದ ಬೀಡಿ ಕಾರ್ಮಿಕರ ಬಡಾವಣೆಯಲ್ಲಿ ಆಶ್ರಯ ಯೋಜನೆ ಸಮಿತಿ ದಾವಣಗೆರೆಯ ಕೆಲ ಅಧಿಕಾರಿಗಳು ನಿವೇಶನ ಹಂಚಿಕೆ ಕುರಿತು ಪಟ್ಟಿ ತಯಾರುಸುತ್ತಿದ್ದಾರೆ. ನಮ್ಮ ಸಂಘ ವತಿಯಿಂದ ದೊಡ್ಡ ಬೂದಾಳ್ ಸರ್ವೇ ನಂಬರ್ 45/1.2 ಮತ್ತು 46/2 ಮತ್ತು 47/1ಎ ಹಾಗೂ 47/1ಬಿ ರ ಒಟ್ಟು 8 ಎಕರೆ 23 ಗುಂಟೆ ಜಮೀನು ನಮ ಸಂಘದ ಸದಸ್ಯರ ಹೂಡಿಕೆಯ ಹಣ ದಿಂದ ನಮ್ಮ ಸಂಘದ ಹೆಸರಿನಲ್ಲಿ ಖರೀದಿಸಿ ನಮ್ಮ ಸಂಘದ ಸದಸ್ಯರಿಗೆ ಆರ್.ಸಿ.ಸಿ ಮನೆ ಮತ್ತು ನಿವೇಶನ ಮಾಡಿ ಹಂಚಿಕೆ ಮಾಡಲು 2005/2006 ರಲ್ಲಿ ಸಂಘ ತಿರ್ಮನ ಮಾಡಿದ್ದು ಅದರ ಭಾಗವಾಗಿ ರಾಜೀವ್ ಗಾಂಧಿ ಗ್ರಾಮೀಣ ವಸತಿ ನಿಗಮ ನಿಯಮಿತ ಇವರಿಂದ ಸಾಲ ಹಾಗೂ ಇತರೆ ಸಂಸ್ಥೆಗಳಿಂದಲು ಸಾಲ ಪಡೆಯಲು ನಮಗೆ ಸೇರಿದ 8 ಎಕರೆ 23 ಗುಂಟೆ ಜಮೀನಿನ ಮೇಲೆ ಕೋಟ್ಯಂತರ ರೂಪಾಯಿ ಸಾಲ ಪಡೆಯಲು ತಾಹಸಿಲ್ದಾರ ದಾವಣಗೆರೆ ಇವರ ಹೆಸರಿಗೆ ನಮಗೆ ಸೇರಿದ 8 ಎಕರೆ 23 ಗುಂಟೆ ಜಮೀನನ್ನು ಆಧಾರ ಮಾಡಿರುತ್ತೆವೆ. ಅದರಿಂದ ಜಮೀನಿನ ಪಹಣಿ ತಹಸಿಲ್ದಾರ ದಾವಣಗೆರೆ ಇವರ ಹೆಸರಿಗೆ ಇತ್ತು. ನಮ್ಮ ಸಂಘದ ಆಸ್ತಿ ಮೇಲೆ ಭೂಗಳ್ಳರ ಕಣ್ಣು ಬಿದ್ದು ಬಡವರಿಗೆ ಸೇರ ಬೇಕಾದ ಆಸ್ತಿಯನ್ನು ಕಬಳಿಸಲು ಯತ್ನಿಸುತ್ತಿದ್ದಾರೆ ಎಂದರು.
ಆದರೆ ಇದರ ಲಾಭ ಪಡೆಯಲು ಭೂಗಳ್ಳರು ಖಾಲಿ ನಿವೇಶನ ಮತ್ತು ಕೆಲ ಮನೆ ಗಳಲ್ಲಿ ಅತಿಕ್ರಮಣ ಮಾಡಿದರೆ ಇದು ಕುರಿತು ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿದ್ದು ನಮ್ಮ ಸಂಘ ಹೊರತು ಪಡಿಸಿ ಯಾರು ನಮಗೆ ಸೇರಿದ್ದ ಜಮೀನಲ್ಲಿ ಕಟ್ಟಡ ಹಾಗೂ ಇತರೆ ಯಾವ ಕಾರ್ಯ ಮಾಡಬಾರದು ಎಂದು ನ್ಯಾಯಾಲಯ ಶಾಶ್ವತ ತಡೆಯಾಜ್ಞೆ ನಿಡಿದೆ. ಅದನ್ನು ತಿರಸ್ಕರಿಸಿ ಭೂಗಳ್ಳರು ಮತ್ತು ಕೆಲ ರಾಜಕೀಯ ವ್ಯಕ್ತಿಗಳ ಪ್ರಭಾವ ದಿಂದ ದಾವಣಗೆರೆ ಆಶ್ರಯ ಯೋಜನೆ ಸಮಿತಿ ಅವರು ಹೊಸ ಪಟ್ಟಿ ಮಾಡಿ ನಿವೇಶನ ಹಂಚಿಕೆ ಮಾಡಲು ಪ್ರಯತ್ನ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.
ನಮ್ಮ ಸಂಘ ಈಗಾಗಲೇ ಕೆಲವರಿಗೆ ಆರ್.ಸಿ.ಸಿ ಮನೆ ಕಟ್ಟಿ ಹಂಚಿಕೆ ಮಾಡಿದೆ. ಕೆಲವರಿಗೆ ನಿವೇಶನ ಹಂಚಿಕೆ ಮಾಡಿದೆ. ತಕ್ಷಣ ಜಿಲ್ಲಾಧಿಕಾರಿಗಳು ಮಧ್ಯೆ ಪ್ರವೇಶಿಸಿ ನಮ್ಮ ಸಂಘದ ಸದಸ್ಯರಿಗೆ ನ್ಯಾಯ ಒದಗಿಸಿ ಕೊಡಬೇಕು ಎಂದರು.
ಸಭೆಯಲ್ಲಿ ಟಿ.ಅಸ್ಗರ್. ಕೋರ್ಟ್ ಅಕ್ಬರ್. ಖಾಸಿಂ ಸಾಬ್. ಫೈರೋಜ್. ರಿಯಾಜ್. ಇಬ್ರಾಹಿಂ. ಮಹಮ್ಮದ್ ಅಲಿ ಇತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ