ನೂತನ ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷರಾಗಿ ನಾಗೇಶ್ ಜಂಗಮರ ಹಳ್ಳಿ ಆಯ್ಕೆ
ಮಸ್ಕಿ : ಪಟ್ಟಣದ ಹೊರ ವಲಯದಲ್ಲಿರುವ ಸರ್ಕ್ಯೂಟ್ ಹೌಸ್ ನಲ್ಲಿ ಮಸ್ಕಿ ತಾಲೂಕಿನ ದಲಿತ ಸಾಹಿತ್ಯ ಪರಿಷತ್ ನ ನೂತನ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ವಿವಿಧ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ದಲಿತ ಸಾಹಿತ್ಯ ಪರಿಷತ್ ರಾಜ್ಯಾಧ್ಯಕ್ಷರ ಆದೇಶದ ಮೇರೆಗೆ ಪಟ್ಟಣದ ಸರ್ಕ್ಯೂಟ್ ಹೌಸ್ ನಲ್ಲಿ ಮುಖಂಡರು ಒಮ್ಮತದಿಂದ ನೂತನ ಅಧ್ಯಕ್ಷರನ್ನಾಗಿ ನಾಗೇಶ್ ಜಂಗಮರ ಹಳ್ಳಿ,ಉಪಾಧ್ಯಕ್ಷರಾಗಿ -ಹನುಮಂತ ನಾಯಕ ರಂಗಾಪುರ, ಸಿದ್ದಪ್ಪ ಉದ್ಬಾಳ್ ಉಪನ್ಯಾಸಕರು, ಗೌರವಸಲಹೆಗಾರರಾಗಿ - ನಿಂಗಪ್ಪ ಉಪನ್ಯಾಸಕರು, ಹನುಮಂತ ಶಿಕ್ಷಕರು,
ಕಾರ್ಯಧ್ಯಕ್ಷರಾಗಿ - ಮಂಜುನಾಥ ಮುಖ್ಯ ಗುರುಗಳು ಹಾಲಾಪೂರ, ಪ್ರಧಾನ ಕಾರ್ಯದರ್ಶಿಯಾಗಿ ಹನುಮಂತ ಕಡಬೂರು ಉಪನ್ಯಾಸಕರು, ಸಹ ಕಾರ್ಯದರ್ಶಿಗಳಾಗಿ - ಲಕ್ಷ್ಮಣ್ ಮೇಟಿ ಶಿಕ್ಷಕರು ಮಸ್ಕಿ, ಶಿವ ಗ್ಯಾನಪ್ಪ ಉಪನ್ಯಾಸಕರು ಮಸ್ಕಿ, ಖಜಾಂಚಿಯಾಗಿ - ಈಶಪ್ಪ ಶಿಕ್ಷಕರು,
ನಿರ್ದೇಶಕರಾಗಿ - ರಾಮನಗೌಡ ಶಿಕ್ಷಕರು ಮಸ್ಕಿ, ಶಿವಪ್ಪ ಹಸಮ ಕಲ್ ಶಿಕ್ಷಕರು, ಪರಪ್ಪ ಭಂಡಾರಿ ಉಪನ್ಯಾಸಕರು, ಅನಿಲ್ ಕುಮಾರ್ ಕೆಇಬಿ ಮಸ್ಕಿ, ಕಾನೂನು ಸಲಹೆಗಾರರಾಗಿ - ಅಜಿತ್ ಜಾಲವಾಡಗಿ, ಪತ್ರಿಕಾ ಸಲಹೆಗಾರರಾಗಿ - ಗ್ಯಾನಪ್ಪ ಮೆದಿಕಿನಾಳ ಪತ್ರಕರ್ತರು, ಸಾಹಿತಿಕ ಸಲಹೆಗಾರರಾಗಿ - ದಾನಪ್ಪ ಸಿ ನಿಲೋಗಲ್, ಬಾಲ ಸ್ವಾಮಿ ಮುಖ್ಯ ಗುರುಗಳು ಮಸ್ಕಿ, ಅಬ್ದುಲ್ ಗನಿ ಸಾಹಿತ್ಯ,
ಪ್ರಕಾಶನ ಸಲಹೆಗಾರರು - ದೇವರಾಜ್ ಗಂಟೆ, ಶಾಂತಪ್ಪ ನಗನೂರು, ಜಯಪ್ಪ ಶಿಕ್ಷಕರು,ಮಹಿಳಾ ಪ್ರತಿನಿಧಿ - ಶ್ರೀಮತಿ ಮೋಕ್ಷಮ್ಮ ಗಂಡ ರಾಯಪ್ಪ ಸಮಾಜ ಸೇವೆ,
ಕಾರ್ಯಕಾರಿ ಸಮಿತಿ ಸದಸ್ಯರಾಗಿ - ರಮೇಶ್ ಉದ್ಬಾಳ್ ಶಿಕ್ಷಕರು, ಚಾಂದ್ ಪಾಷಾ ಬುದ್ದಿನ್ನಿ, ಶಶಿಧರ್ ಶಿಕ್ಷಕರು, ಸೋಮನಾಥ ಜಿನ್ನಾಪುರ, ಬಸಪ್ಪ ತುಗ್ಗಲದಿನ್ನಿ ಇವರನ್ನು ಮಸ್ಕಿ ತಾಲೂಕಿನ ನೂತನ ದಲಿತ ಸಾಹಿತ್ಯ ಪರಿಷತ್ ಸಮಿತಿಯ ಪದಾಧಿಕಾರಿಗಳನ್ನಾಗಿ ಆಯ್ಕೆ ಮಾಡಿ ಆದೇಶಿಸಲಾಗಿದೆ.
ಇದೇ ಸಂದರ್ಭದಲ್ಲಿ ದಲಿತ ಸಾಹಿತ್ಯ ಪರಿಷತ್ ಮುಖಂಡರು,ಸಾಹಿತ್ಯ ಅಭಿಮಾನಿಗಳು, ಪತ್ರಿಕಾ ಬಳಗದವರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ