ಬಂಗಾರದ ಮಡಿಲಲ್ಲಿ ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬ ಆಚರಣೆ
ಹಟ್ಟಿ ಚಿನ್ನದ ಗಣಿ : ಭಾರತ ದೇಶದಲ್ಲಿ ಚಿನ್ನವನ್ನು ಉತ್ಪಾದಿಸುವ ಕೆಲವೇ ಕೆಲವು ಕಂಪನಿಗಳು ಇವೆ. ಅದರಲ್ಲಿ ಹಟ್ಟಿ ಚಿನ್ನದ ಗಣಿ ಕಂಪನಿ ಅತ್ಯಧಿಕ ಚಿನ್ನವನ್ನು ಉತ್ಪಾದಿಸುವ ಚಿನ್ನದ ಗಣಿ ಇದಾಗಿದೆ. ಬಂಗಾರವನ್ನು ತಯಾರಿಸುವ ಕಾರ್ಮಿಕರ ಶ್ರಮ ಬಹಳ ಮುಖ್ಯ ಅದರಲ್ಲೂ ಮಶಿನರಿ (ಆಯುಧ) ಸಾಮಾನುಗಳು ಬಂಗಾರ ತೆಗೆಯುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ.ಇಂಥ(ಆಯುಧ)ಮಶಿನರಿ ಸಾಮಾನುಗಳಿಗೆ ಪೂಜಾ ಸಲ್ಲಿಸುವುದೇ ಆಯುಧ ಪೂಜೆ.
ಬುಧವಾರ ಹಟ್ಟಿ ಚಿನ್ನದ ಗಣಿ ಕಂಪನಿಯಲ್ಲಿ ಕಂಪನಿ ಆಡಳಿತದ ಆದೇಶದ ಮೇರೆಗೆ ಕಂಪನಿಯ ಶಾಫ್ಟ್ ಗಳಾದ ವಿಲೈ ಶಾಫ್ಟ್,ಮಲ್ಲಪ್ಪ ಶಾಫ್ಟ್, ಸೆಂಟ್ರಲ್ ಶಾಫ್ಟ್, ಹಾಗೂ ಸರ್ಕ್ಲರ್ (ಸರಕೆಲರ್)ಶಾಫ್ಟ್,
ಈ ಎಲ್ಲ ಕಡೆಗಳಲ್ಲಿ ಕಾರ್ಮಿಕರು ದೇವಿ ಪೂಜೆ ಮಾಡಿ ನಂತರ ತಮ್ಮ ತಮ್ಮ ಸೆಕ್ಷನ್ ಗಳಾದ ಸಾಗ್&ಬಾಲ್ ಮಿಲ್,ಸೈನೆಡ್ ಸೆಕ್ಷನ್,ಬ್ಯಾಟರಿ ಸೆಕ್ಷನ್,ಎಂ ಎಸ್ ಸಿಂಕಿ ಸೆಕ್ಷನ್, ಎಲ್ ಡಿ ಬಿ ಎಚ್ ಸೆಕ್ಷನ್,ಝೆಡ್.ಐ.ಬಿ.ಸ್ಯಾಂಡ್ ಸ್ಟಾವಿಂಗ್,ಭೂ ಅನ್ವೇಷಣೆ ವಿಭಾಗ, ಲ್ಯಾಬ್,ರಿಫೈನರಿ ಸೆಕ್ಷನ್,ವಿ ಟಿ ಸೆಂಟ್ರಲ್ ತರಬೇತಿ ಕೇಂದ್ರ,
ಹಣಕಾಸು ವಿಭಾಗ,ಮಾನವ ಸಂಪನ್ಮೂಲ ವಿಭಾಗ,ಆಸ್ಪತ್ರೆ ವಿಭಾಗ,ವರ್ಕ್ ಶಾಪ್,ಪ್ಲಾಂಟ್ ಸೆಕ್ಷನ್,ಲೋಡರ್ ಸೆಕ್ಷನ್,ಎಲೆಕ್ಟ್ರಿಕಲ್ ಸೆಕ್ಷನ್,ಅಡುಗೆ ವಿಭಾಗ,ಕ್ರೀಡಾ ಸಂಸ್ಥೆ,ಇನ್ನು ಬೇರೆ ಬೇರೆ ಸೆಕ್ಷನ್ ಗಳಲ್ಲಿ ದೇವಿ ಫೋಟೋ ಪ್ರತಿಷ್ಠಾಪಿಸಿ ನಂತರ ತಮ್ಮ ತಮ್ಮ ಸೆಕ್ಷನ್ ಗಳಲ್ಲಿ ಮಶಿನರಿ ಸಾಮಾನುಗಳನ್ನು (ಆಯುಧ)ಗಳನ್ನೂ ಒಂದು ಕಡೆ ಇಟ್ಟು ಅವುಗಳಿಗೆ ಪೂಜೆ ಸಲ್ಲಿಸುತ್ತಾರೆ ಹಾಗೂ
ಈ ಆಯುಧ ಪೂಜೆಗೆ ಕಂಪನಿಯ ಆಡಳಿತ ಮಂಡಳಿ ಆದೇಶದ ಮೇರೆಗೆ ಸರ್ವಜನಿಕರಿಗೆ ಕಂಪನಿ ನೋಡುವಂಥ ಒಂದು ಅವಕಾಶ ಕೊಟ್ಟಿರುವುದು ಸಂತೋಷದ ವಿಚಾರ ಏಕೆಂದರೆ ಪ್ರತಿ ವರ್ಷ ಆಯುಧ ಪೂಜೆಯ ದಿನದಂದು ಕಾರ್ಮಿಕರು ತಮ್ಮ ಕುಟುಂಬ ಸಮೇತವಾಗಿ ಬಂದು ದೇವಿ ಪೂಜೆ ಮಾಡಿ ನಂತರ ಆಯುಧ ಪೂಜೆಯಲ್ಲಿ ಭಾಗವಹಿಸಿ.ದೇವಿಯ ಪ್ರಸಾದವನ್ನು ಸ್ವೀಕರಿಸಿ ನಂತರ ಕಂಪನಿ ಒಳಗಿರುವ ಹಲವು ಸೆಕ್ಷನ್ ಗಳನ್ನು ವೀಕ್ಷಣೆ ಮಾಡುವುದಕ್ಕೆ ಅನುಕೂಲ ಮಾಡಿಕೊಟ್ಟ ಹಟ್ಟಿ ಚಿನ್ನದ ಗಣಿಯ ಸರ್ವಜನಿಕರು ಹಾಗೂ ಸುತ್ತಮುತ್ತಲಿನ ಹಳ್ಳಿಯ ಜನರು ಹಟ್ಟಿ ಚಿನ್ನದ ಗಣಿಯ ಅಧಿಕಾರಿಗಳಿಗೆ ಹಾಗೂ ಕಾರ್ಮಿಕರಿಗೆ.
ಆಯುಧ ಪೂಜೆ ಹಾಗೂ ವಿಜಯದಶಮಿ ಹಬ್ಬದ ಶುಭಾಶಯಗಳು ತಿಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ