ಕೂಡ್ಲಿಗಿ ಯಲ್ಲಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ



ವಿಜಯನಗರ ಜಿಲ್ಲೆ ಕೂಡ್ಲಿಗಿ: ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಪಟ್ಟಣದ ಶ್ರೀ ರಾಮಲಿಂಗಶ್ವರ ದೇವಸ್ಥಾನದ ಶ್ರೀ ಮಹರ್ಷಿ ವಾಲ್ಮೀಕಿ ದೇವಸ್ಥಾನ ದಲ್ಲಿ ಪೂಜೆಯನ್ನು ಮಾನ್ಯ ಶಾಸಕರಾದ ಎನ್. ಟಿ.ಶ್ರೀನಿವಾಸ್ ಹಾಗೂ ತಾಲೂಕು ತಹಸೀಲ್ದಾರ್ರಾದ ಶ್ರೀಮತಿ ರೇಣುಕಾ, ಪರಿಶಿಷ್ಟ ವರ್ಗಗಳ ಇಲಾಖೆ ಅಧಿಕಾರಿಗಳಾದ ಮೆಹಬೂಬ್ ಬಾಷ, ಡಿವೈಎಸ್ ಪಿ ಮಲ್ಲೇಪ್ಪ ಮಲ್ಲಾಪುರ, ಸಿಪಿಐ.ಸುರೇಶ ತಳವಾರ ಹಾಗೂ ಶ್ರೀ ವಾಲ್ಮೀಕಿ ಮಹಾಸಭಾ ಸಂಘದ ಅಧ್ಯಕ್ಷರು ಎಸ್. ಸುರೇಶ, ವಾಲ್ಮೀಕಿ ಸಮುದಾಯದ ಮುಖಂಡರು ಕಾವಲಿ ಶಿವಪ್ಪ ನಾಯಕ,ಹಾಗೂ ವಾಲ್ಮೀಕಿ ಸಮುದಾಯದ ಪ್ರಮುಖ ಮುಖಂಡರು ಗಳಿಂದ ಪೂಜೆ ಸಲ್ಲಿಸಿ ಶ್ರೀ ವಾಲ್ಮೀಕಿ ಭಾವಚಿತ್ರದ ಟ್ರಾಕ್ಟರನ್ನು ಮಾನ್ಯ ಶಾಸಕರು ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಹಾಗೆ ಈ ಸಂರ್ಭದಲ್ಲಿ ಮೆರವಣಿಗೆ ಯಲ್ಲಿ ಭಾವಹಿಸಿದ್ದ ಎಲ್ಲಾ ಯುವಕರು ಹಾಗೂ ಸಮುದಾಯದ ಮುಖಂಡರುಗಳ ಜೊತೆಗೆ ಶಾಸಕರು ಡಿಜೆ ಸಾಂಗ್ ಗೆ ಸ್ಟೆಪ್ ಹಾಕಿ ಎಲ್ಲರಿಗೂ ಜಯಂತಿಯನ್ನು ಉತ್ಸಾಹದಿಂದ ಮೆರವಣಿಗೆ ಸಾಗುವಂತೆ ಮೆರಗು ಬರುವಂತೆ ಶಾಸಕರು ಎಲ್ಲರ ಜೊತೆಗೆ ಸ್ಟೆಪ್ ಹಾಕುವುದರೊಂದಿಗೆ ಪ್ರೋತ್ಸಾಹ ನೀಡಿದರು. ಹಾಗೂ ಕೂಡ್ಲಿಗಿಯ ಪ್ರಮುಖ ಬೀದಿಗಳಲ್ಲಿ ಜಯಂತಿ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯು ಬಹಳ ವಿಜೃಂಭಣೆ ಯಿಂದ ನೆಡೆಯಿತು.

ಪಟ್ಟಣ ಪಂಚಾಯ್ತಿ ಎಲ್ಲಾ ಸದಸ್ಯರು ಕಾರ್ಯಕ್ರಮದ ಮೆರವಣಿಗೆ ಭಾಗವಸಿದ್ದರು.ಈ ಸಂರ್ಭದಲ್ಲಿ ಭೀಮೇಶ್, ದಾಣಿ ರಾಘವೇಂದ್ರ, ಕಡ್ಡಿ ಮಂಜುನಾಥ್, ಕಾಟೇರ ಹಾಲೇಶ್, ಪೆಟ್ರೋಲ್ ಬಂಕ್ ನಿಂಗಪ್ಪ, ಸಿರಿಬಿ ಮಂಜುನಾಥ್,ಆಟೋ ಕುಮಾರ,ನಿವೃತ್ತ ಇಒ ಬಸಣ್ಣ, ಕೆ ಈಶಪ್ಪ , ಬಾಸು ನಾಯ್ಕ,ಗುನ್ನಳ್ಳಿ ನಾರಾಯಣ, ಬಿ. ರಾಘವೇಂದ್ರ, ಹಾಗೂ ನೂರಾರು ಯುವಕರು ಪಟ್ಟಣದ ಮುಖಂಡರು ಸೇರಿದಂತೆ ಮತ್ತಿತರರು. ಪಟ್ಟಣ ಸೇರಿದಂತೆ ತಾಲೂಕಿನ ವಾಲ್ಮೀಕಿ ಸಮಾಜದ ಮುಖಂಡರು, ವಿವಿದ ಸಂಘ ಸಂಸ್ಥೆ ಪದಾಧಿಕಾರಿಗಳು. ನಾಗರೀಕರು ಹಾಗೂ ಗಣ್ಯರು, ಮೆರವಣಿಗೆಯಲ್ಲಿ ಭಾಗವಹಿಸಿದ್ದರು.

*ವರದಿ ರಾಘವೇಂದ್ರ ಸಾಲುಮನೆ ಕೂಡ್ಲಿಗಿ*

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ