ಸಿಎಂ ಕಪ್ ಖೋ ಖೋ ಕ್ರೀಡಾಕೂಟಕ್ಕೆ ತೆರಳುವ ರಾಯಚೂರು ತಂಡಕ್ಕೆ ಅಭಿನಂದಿಸಿದ ಅಮೇಚೂರು ಕ್ಲಬ್

ಮಸ್ಕಿ, ನಾಡ ಹಬ್ಬ ಮೈಸೂರು ದಸರಾ ನಿಮಿತ್ತ ನಡೆಸಲಾಗುವ ಸಿಎಂ ಕಪ್ ಖೋ ಖೋ ಕ್ರೀಡಾಕೂಟದಲ್ಲಿ ಭಾಗವಹಿಸಲು ತೆರಳುತ್ತಿರುವ ರಾಯಚೂರು ಜಿಲ್ಲೆಯಲ್ಲಿ ಅಮೇಚೂರು ಖೋ ಖೋ ತಂಡಕ್ಕೆ ಶನಿವಾರ ಪಟ್ಟಣದ ಭ್ರಮರಾಂಬ ದೇವಸ್ಥಾನದಲ್ಲಿ ತಂಡಕ್ಕೆ ರಾಯಚೂರು ಜಿಲ್ಲೆಯ ಅಮೇಚೂರು ಸಮಿತಿ ವತಿಯಿಂದ ಶುಭ ಕೋರಿ ಅಭಿನಂದಿಸಿದರು.

ಕ್ರೀಡಾಪಟುಗಳನ್ನು ಉದ್ದೇಶಿಸಿ ಮಾತನಾಡಿದ ಡಾಕ್ಟರ್ ಮಲ್ಲಿಕಾರ್ಜುನ ಇತ್ಲಿ ಮೈಸೂರು ದಸರಾದಲ್ಲಿ ಭಾಗವಹಿಸಲು ತೆರಳುತ್ತಿರುವ ತಂಡವು ಪ್ರಮುಖ ಸ್ಥಾನ ಪಡೆಯುವ ಮೂಲಕ ಐತಿಹಾಸಿಕ ಮಸ್ಕಿಗೆ ಹೆಸರು ತರುವಂತಾಗಲಿ ಎಂದರು. ಅಮೇಚೂರು ಕ್ಲಬ್ ನ ಅಧ್ಯಕ್ಷ ಮೌನೇಶ್ ನಾಯಕ ಮಾತನಾಡಿ ನಮ್ಮ ತಂಡದ ಸದಸ್ಯರು ಮೈಸೂರು ದಸರಾ ಕ್ರೀಡಾಕೂಟದಲ್ಲಿ ಭಾಗವಹಿಸಲು ತೆರಳುತ್ತಿರುವ ನಮ್ಮ ಜಿಲ್ಲೆಯ ಹೆಮ್ಮೆಯ ಸಂಗತಿ ಎಂದರು.

ಇದೇ ಸಂದರ್ಭದಲ್ಲಿ ನಾಗರಾಜ್ ಯಂಬಲದ, ಅಮರೇಶ್ ಬ್ಯಾಳಿ, ಮಸೂದ್ ಪಾಷಾ ಸೇರಿದಂತೆ ಅಮೇಚೂರು ಕ್ಲಬ್ ನ ಸರ್ವ ಸದಸ್ಯರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*