ಪಿಂಚಣಿ ಅದಾಲತ್‌ ಸದುಪಯೋಗಕ್ಕೆ ಸಲಹೆ

ಕೂಡ್ಲಿಗಿ: ಕಂದಾಯ ಇಲಾಖೆಯ ಸಹಯೋಗದಲ್ಲಿ ಹೋಬಳಿ ಮಟ್ಟದಲ್ಲಿ ಏರ್ಪಡಿಸುವ ಪಿಂಚಣಿ ಅದಾಲತ್‌ ಸಾಮಾಜಿಕ ಭದ್ರತಾ ಯೋಜನೆಗಳ ಮಂಜೂರಾತಿ ಸೌಲಭ್ಯಗಳ ಸದು ಪಯೋಗವನ್ನು ಅರ್ಹರು ಪಡೆಯುವಂತೆ ಕೂಡ್ಲಿಗಿ ತಹಶೀಲ್ದಾರ್‌ ಟಿ ಜಗದೀಶ್ ಹೇಳಿದರು. ತಾಲೂಕಿನ ಕಾನ ಹೊಸಹಳ್ಳಿ ಎಸ್‌.ಕೆ.ಡಿ.ಡಿ.ವಿ ಪ್ರೌಢಶಾಲೆ ಆವರಣದಲ್ಲಿ ಮಂಗಳವಾರ ಆಯೋಜಿಸಿದ್ದ ಕಂದಾಯ ಇಲಾಖೆ, ಹೊಸಹಳ್ಳಿ ನಾಡ ಕಚೇರಿ ವತಿಯಿಂದ ಹೋಬಳಿ ಮಟ್ಟದ ಪಿಂಚಣಿ ಅದಾಲತ್‌ನಲ್ಲಿ ಫಲಾನುಭವಿಗಳಿಗೆ ಮಂಜೂರಾತಿ ಪತ್ರ ವಿತರಿಸಿ ಅವರು ಮಾತನಾಡಿದರು. ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಸರ್ಕಾರದ ಸವಲತ್ತುಗಳು ತಲುಪಬೇಕು.

ಈ ನಿಟ್ಟಿನಲ್ಲಿ ಜವಾಬ್ದಾರಿಯುತ ಪ್ರತಿಯೊಬ್ಬರು ಕೈ ಜೋಡಿಸಿ ಯೋಜನೆಗಳ ಸಾಕಾರಕ್ಕೆ ಮುಂದಾಗಬೇಕು. ಕಂದಾಯ ಇಲಾಖೆಯಿಂದ 60 ವರ್ಷ ಮತ್ತು ಹಿರಿಯ ನಾಗರಿಕರು ಸರ್ಕಾರದಿಂದ ಬರುವ ಸೌಲಭ್ಯಗಳಾದ ಅಂಗವಿಕಲ, ವಿಧವಾ, ಸಂಧ್ಯಾ ಸುರಕ್ಷಾ ವೇತನ ಮುಂತಾದ ಹಲವು ಪಿಂಚಣಿ ಯೋಜನೆ ಅರ್ಹರಿಗೆ ತಲುಪಿಸಬೇಕು ಎಂದು ಹೇಳಿದರು. ಈ ಕಾರ್ಯಕ್ರಮದಲ್ಲಿ ಉಪ ತಾಹಶಿಲ್ದಾರ್ ಕುಮಾರಸ್ವಾಮಿ, ಕಂದಾಯ ಪರೀಕ್ಷಕ ಮುರಳಿ ಕೃಷ್ಣ, ಕೂಡ್ಲಿಗಿ ಕಂದಾಯ ಪರ್ವೀಕ್ಷಕ ಕುಮಾರಸ್ವಾಮಿ, ಗ್ರಾಮ ಆಡಳಿತ ಅಧಿಕಾರಿಗಳು ಚನ್ನಬಸಯ್ಯ, ಅಜಯ್, ಶ್ರೀನಿವಾಸ ಕೊಂಡಿ, ರಮೇಶ್, ಸಂಪ್ರೀತ, ಚೈತ್ರ, ಅನಿತಾ, ಜ್ಯೋತಿ ಹಾಗೂ ಫಲಾನುಭವಿಗಳು. ಗ್ರಾಮದ ಮುಖಂಡರು. ಗ್ರಾಮ ಸಹಾಯಕರು. ಸೇರಿದಂತೆ ಸಾರ್ವಜನಿಕರು ಇತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*