"ವಿಶ್ವ ಹಿಂದೂ ಪರಿಷತ್-ಬಜರಂಗದಳದಿಂದ ಶೌರ್ಯ ಜಾಗರಣ ರಥಯಾತ್ರೆ"
"ಹಿಂದೂ ಪರಂಪರೆ ಬಗ್ಗೆ ಇಂದಿನ ಪೀಳಿಗೆಗೆ ತಿಳಿಸಬೇಕಿದೆ"
ಕೊಟ್ಟೂರು : ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಸ್ವಾಭಿಮಾನಿಗಳನ್ನಾಗಿ ಹಿಂದೂಗಳನ್ನು ಮಾಡುವ ಕೆಲಸ ಹಿಂದಿನಿಂದಲೂ ಮಾಡುತ್ತಿದೆ, ತ್ಯಾಗದ ಪರಂಪರೆ ನಮ್ಮದು ಎನ್ನುವುದನ್ನು ಇಂದಿನ ಪೀಳಿಗೆಗೆ ತಿಳಿಸಬೇಕಿದೆ.ಎಂದರು
ಪಟ್ಟಣದ ಪ್ರಮುಖ ರಸ್ತೆಗಳು ಮತ್ತು ವೃತ್ತದಲ್ಲಿ ಶೌರ್ಯ ಜಾಗರಣ ರಥಯಾತ್ರೆಗೆ ವಿಶ್ವ ಹಿಂದೂ ಪರಿಷತ್-ಬಜರಂಗದಳದಿಂದ ಹಮ್ಮಿಕೊಂಡ ಶೌರ್ಯ ಜಾಗರಣ ರಥಯಾತ್ರೆಯಲ್ಲಿ ಪಾಲ್ಗೊಂಡು ಡಾಕ್ಟರ್ ರಾಕೇಶ್ ಅವರು ಮಾತನಾಡಿ, ಹಿಂದೂ ಧರ್ಮದ ರಕ್ಷಣೆಗಾಗಿ ಅನೇಕ ಮಹನೀಯರ ತ್ಯಾಗ ಮತ್ತು ಬಲಿದಾನವಿದೆ. ಇದನ್ನೂ ಇಂದಿನ ಪೀಳಿಗೆಗೆ ತಿಳಿಸುವುದು ಆದ್ಯ ಕರ್ತವ್ಯವಾಗಿದೆ. ಹಿಂದೂ ಎಂದರು. ಸಮಾಜದ ಯುವಕರನ್ನು ಬಡಿದೆಬ್ಬಿಸಲು ಶೌರ್ಯ ಜಾಗರಣ ರಥ ಯಾತ್ರೆ ದೇಶಾದ್ಯಂತ ನಡೆಯುತ್ತಿದೆ. ಎಂದರು.
ವಿಶ್ವ ಹಿಂದೂ ಪರಿಷತ್ ಸ್ಥಾಪನೆಯಾಗಿ 2024 ಕ್ಕೆ 60 ವರ್ಷಗಳು ತುಂಬುವುದಕ್ಕೆ ಭಜರಂಗದಳದ ನೇತೃತ್ವದಲ್ಲಿ ಶೌರ್ಯ ರಥಯಾತ್ರೆಯನ್ನು ಕರ್ನಾಟಕದದ್ಯಾಂತ ಹಮ್ಮಿಕೊಂಡ ಹಿನ್ನಲೆಯಲ್ಲಿ ಶುಕ್ರವಾರ ಕೊಟ್ಟೂರು ವಿವಿಧ ಬೀದಿಗಳಲ್ಲಿ ಶೌರ್ಯ ರಥಯಾತ್ರೆ ಯಶಸ್ವಿಯಾಗಿ ನಡೆಸಲಾಯಿತು.
ಕೊಟ್ಟೂರು ಪಟ್ಟಣದ ಪ್ರಮುಖರು ವಿಶ್ವ ಹಿಂದೂ ಪರಿಷತ್-ಬಜರಂಗದಳದಿಂದ ರಥಕ್ಕೆ ಹೂ ಸಮರ್ಪಿಸುವ ಮೂಲಕ ನಾಗರಿಕರು ಸ್ವಾಗತಿಸಿದರು.
ಶ್ರೀರಾಮ್ ಜೈ ಜೈ ಶ್ರೀರಾಮ್, ಬೊಲೋ ಭಾರತ್ ಮಾತಾಕೀ ಜೈ ಘೋಷಣೆಗಳು ಮೊಳಗಿದವು. ರಥಯಾತ್ರೆಯಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳದ ಸದಸ್ಯರು ನೇತೃತ್ವದಲ್ಲಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಪೊಲೀಸರು ಬಂದೋಬಸ್ತ್ ಏರ್ಪಡಿಸಲಾಗಿತ್ತು.

ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ