ವೃಕ್ಷ ಮಾತೆಯ ಹೆಸರಿನಲ್ಲಿ ಕುಂಭ ಬರೆಸಿದ ಪರಿಸರ ಪ್ರೇಮಿ ಸಿದ್ದಯ್ಯ ಹೆಸರೂರು
ಮಸ್ಕಿ : ಭ್ರಮರಾಂಬಾ ದೇವಿಯ ಪುರಾಣ ಕಾರ್ಯಕ್ರಮ ಹಾಗೂ ದಸರಾ
ಜಂಬೂ ಸವಾರಿ ಕಾರ್ಯಕ್ರಮ ಅಂಗವಾಗಿ ಕುಂಭ ಮೆರವಣಿಗೆಯ ನಿಮಿತ್ತ ಕುಂಭದ ಚೀಟಿಯ ಹೆಸರಿನಲ್ಲಿ ಸಾಲು ಮರದ ತಿಮ್ಮಕ್ಕನ ಹೆಸರನ್ನು ಬರೆಯಿಸುವ ಮೂಲಕ ವಿಭಿನ್ನತೆ ಮೆರೆದಿದ್ದಾರೆ.
ಮಸ್ಕಿ ಪಟ್ಟಣದಾದ್ಯಂತ ಶ್ರೀ ಭ್ರಮರಾಂಬಾ ದೇವಿಯ ಪುರಾಣ ಕಾರ್ಯಕ್ರಮ ಹಾಗೂ ದಸರಾ
ಜಂಬೂ ಸವಾರಿ ಕಾರ್ಯಕ್ರಮ ಅಂಗವಾಗಿ ಕುಂಭ ಮೆರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು,ಮಸ್ಕಿ ತಾಲೂಕಿನ ಪರಿಸರ ಪ್ರೇಮಿಗಳಾದ ಸಿದ್ದಯ್ಯ ಹೆಸರೂರು ಮಸ್ಕಿ ಅವರು ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕನವರು ಇತ್ತೀಚೆಗೆ ಉಸಿರಾಟದ ತೊಂದರೆಯಿಂದ ಬೆಂಗಳೂರಿನ ಅಪೋಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದು ಮಸ್ಕಿಯ ಶ್ರೀ ಬ್ರಮರಾಂಭ ದೇವಿಯ ದೇವಸ್ಥಾನದಲ್ಲಿ ಏರ್ಪಡಿಸಿದ್ದ ಪುರಾಣ ಮಹಾಮಂಗಲ ಕಾರ್ಯಕ್ರಮ ಹಾಗೂ ಮಹಿಳೆಯರಿಂದ ನಡೆಯುವ ರಥೋತ್ಸವ ಕಾರ್ಯಕ್ರಮದ ಅಂಗವಾಗಿ ಕುಂಭ ಮೆರವಣಿಗೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಈ ಕುಂಭ ಮೆರವಣಿಗೆಯ ಹೆಸರಿನಲ್ಲಿ ಸಾಲುಮರದ ತಿಮ್ಮಕ್ಕನವರು ಆದಷ್ಟೂ ಶೀಘ್ರವಾಗಿ ಗುಣಮುಖರಾಗಿ ಆಗಮಿಸಲೆಂದು ಕುಂಭದ ಚೀಟಿಯನ್ನು ಬರೆಯಿಸಿದ್ದಾರೆ. ಇಂದು ಜರುಗಿದ ಬ್ರಮರಾಂಬ ದೇವಿಯ ಜಂಬೂ ಸವಾರಿ ಮೆರವಣಿಗೆಯಲ್ಲಿ ವೃಕ್ಷ ಮಾತೇ ಸಾಲು ಮರದ ತಿಮ್ಮಕ್ಕನ ಹೆಸರಿನಲ್ಲಿ ಕುಂಭವನ್ನು ಮಹಿಳೆ ಹೊತ್ತು ಒಳ್ಳೆಯದಾಗಲಿ ಎಂದು ಕುಂಭ ಹೊತ್ತಿದ್ದಾರೆ.ಪರಿಸರ ಪ್ರೇಮಿ ಸಿದ್ಧಯ್ಯ ಹೆಸರೂರು ಇವರಿಗೆ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ಅವರು ಮತ್ತು ಸುತ್ತಮುತ್ತಲಿನ ಪರಿಸರ ಪ್ರೇಮಿಗಳು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ