ಕಾಂಗ್ರೇಸ್ ಸರ್ಕಾರದ ವಿರುದ್ಧ ಬಿಜೆಪಿ ಕಾರ್ಯಕರ್ತರಿಂದ ಪ್ರತಿಭಟನೆ
ಮಸ್ಕಿ : ಪಟ್ಟಣದಲ್ಲಿ ಬಿಜೆಪಿ ಪಕ್ಷದ ವತಿಯಿಂದ ಕಾಂಗ್ರೆಸ್ ಸರ್ಕಾರದ ರೈತ ವಿರೋಧಿ ನೀತಿ ಹಾಗೂ ಭ್ರಷ್ಟಾಚಾರ ಖಂಡಿಸಿ ಮಂಗಳವಾರ ಪ್ರತಿಭಟನೆ ನಡೆಸಿ ಶಿರಸ್ತೆದಾರರಾದ ಸೈಯದ್ ಅಖ್ತರ್ ಅಲಿ ರವರ ಮೂಲಕ ರಾಜ್ಯದ ರಾಜ್ಯಪಾಲರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ನಂತರ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಮಾತನಾಡಿ ರಾಜ್ಯದ ಜನರಿಗೆ ಬಿಟ್ಟಿ ಭಾಗ್ಯಗಳ ಆಸೆ ತೋರಿಸಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್ ಈಗ ಜನರಿಗೆ ವಿದ್ಯುತ್ ಬರೆ ಎಳೆದಿದೆ. ಕಾಂಗ್ರೇಸ್ ಸರ್ಕಾರ ಬಡವರ ರೈತರ ರಕ್ತ ಹೀರುತ್ತಿದೆ. ರಾಜ್ಯದ ಜನರ ನಿರೀಕ್ಷೆಯನ್ನು ಕುಸಿಗೊಳಿಸಿದ್ದಾರೆ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಜನರು ಉತ್ತರಿಸಲಿದ್ದಾರೆ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಗ್ಯಾರಂಟಿಗಳ ನಿಜ ಬಣ್ಣ ಬಯಲಾಗಲಿದೆ ಎಂದರು.
ನಂತರ ಮುಖಂಡರಾದ ಬಸವಂತರಾಯ ಕುರಿ ಮಾತನಾಡಿ ಕಾಂಗ್ರೆಸ್ ನವರು ಅಧಿಕಾರಕ್ಕೆ ಬಂದಿರುವುದೇ ಲೂಟಿ ಹೊಡೆಯುವುದಕ್ಕಾಗಿ ಇದಕ್ಕೆ ಉದಾಹರಣೆ ಎಂಬಂತೆ ಇತ್ತೀಚೆಗೆ ಐಟಿ ದಾಳಿಯಲ್ಲಿ ಸಿಕ್ಕ 100 ಕೋಟಿ ಹಣ ಆದ್ದರಿಂದ ರಾಜ್ಯದ ಜನರು ಎಚ್ಚೆತ್ತುಕೊಂಡು ಕಾಂಗ್ರೆಸ್ ಪಕ್ಷಕ್ಕೆ ಬುದ್ಧಿ ಕಲಿಸಿ ಎಂದರು.
ನಂತರ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಅಪ್ಪಾಜಿಗೌಡ ಪಾಟೀಲ್ ಮಾತನಾಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರು ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಮೋದಿಯವರಿಗೆ ಬೆಂಬಲಿಸಬೇಕೆಂದರು.
ರ್ಯಾಲಿ : ಮಸ್ಕಿ ಪಟ್ಟಣದ ಬಸವೇಶ್ ನಗರದ ಬಿಜೆಪಿ ಕಚೇರಿಯಿಂದ ಹಳೆ ಬಸ್ ನಿಲ್ದಾಣದವರೆಗೆ ಬೈಕ್ ರ್ಯಾಲಿ ನಡೆಸಿದರು. ನಂತರ ಮಾಜಿ ಶಾಸಕ ಪ್ರತಾಪ್ ಗೌಡ ಪಾಟೀಲ್ ಹಾಗೂ ಮುಖಂಡರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಪ್ರತಿಭಟನೆ ನಡೆಸಿದರು.
ಇದೇ ಸಂದರ್ಭದಲ್ಲಿ ಮೌನೇಶ್ ಮುರಾರಿ, ಮೌನೇಶ್ ನಾಯಕ್, ಸೂಗಣ್ಣ ಬಾಳೆಕಾಯಿ, ನಾಗರಾಜ್ ಯಂಬಲದ್, ರಮೇಶ್ ಉದ್ಬಾಳ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ