ಪದವೀಧರ ಮತದಾರರು ನೊಂದಣಿ ಮಾಡಿಸಲು ಜಾಗೃತಿ ಜಾಥಾ
ಕೊಟ್ಟೂರು:ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ದಿನಾಂಕ: 01.11.2020ಕ್ಕಿಂತ ಹಿಂದೆ ಪದವಿಯನ್ನು ಪೂರ್ಣಗೊಳಿಸಿದ ತಾಲೂಕಿನಲ್ಲಿರುವ ಪದವೀಧರ ಮತದಾರರು ಮತದಾರರ ಪಟ್ಟಿಗೆ ಹೆಸರು ನೊಂದಾಯಿಸಲು ಜಾಗೃತಿ ಜಾಥವನ್ನು ನಡೆಸಲಾಯಿತು. ದಿನಾಂಕ: 06.11.2023 ರಂದು ಕೊನೆಯ ದಿನವಾಗಿದ್ದು, ಇಂದು ವಿಶೇಷ ನೊಂದಣಿ ಅಭಿಯಾನವಾಗಿರುತ್ತದೆ. ಹಾಗೂ 30.10.2023 ರಂದು ವಿಶೇಷ ನೊಂದಣಿ ಅಭಿಯಾನ ದಿನವಾಗಿರುತ್ತದೆ. ಕಾರಣ ಅರ್ಹ ಪದವೀಧರರು ನಮೂನೆ-18 ರಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಪದವಿ ಮುಗಿಸಿದ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಚುನಾವಣೆ ಎಪಿಕ್ ಕಾರ್ಡ್ ಗಳನ್ನು ದೃಢೀಕರಿಸಿ ಸಲ್ಲಿಸಲು ತಿಳಿಸಿದರು.
ಜಾಥದಲ್ಲಿ ವೈ ರವಿಕುಮಾರ್, ಕಾರ್ಯನಿರ್ವಾಹಕ ಅಧಿಕಾರಿಗಳು, ನಸರುಲ್ಲಾ ಮುಖ್ಯಾಧಿಕಾರಿಗಳು ಪಟ್ಟಣ ಪಂಚಾಯಿತಿ , ಬಸವರಾಜ ಪ್ರಾಂಶುಪಾಲು ಸರ್ಕಾರಿ ಸಂ ಪ ಪೂ ಕಾಲೇಜ್, ಶಿಕ್ಷಣ ಇಲಾಖೆಯ ಇಸಿಒ ನಿಂಗಪ್ಪ, ಶಶಿಧರ ಮೈದೂರು ಸ್ವೀಪ್ ಅಧಿಕಾರಿ, ಅಜ್ಜಪ್ಪ ಸಿ, ಶಿವಕುಮಾರ್ ಡಿ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ