ಯುವಜನರ ಬಾಳಿಗೆ ಬೆಳಕು ಆದ ಶ್ರೀ ಬಸವ ಸಂಸ್ಥೆಯ ಯಂಕಪ್ಪ ಎಸ್ ರವರ ಕಾರ್ಯ ಶ್ಲಾಘನೀಯ : ಈಶಪ್ಪ ದೇಸಾಯಿ
ಮಸ್ಕಿ : ಯುವಜನರ ಬಾಳಿಗೆ ಬೆಳಕು ಆದ ಶ್ರೀ ಬಸವ ಸಂಸ್ಥೆಯ ಯಂಕಪ್ಪ ಎಸ್ ರವರು ಕಾರ್ಯ ಶ್ಲಾಘನೀಯ ಎಂದು ಮಸ್ಕಿ ವಕೀಲರ ಸಂಘದ ತಾಲೂಕ ಅಧ್ಯಕ್ಷರಾದ ಈಶಪ್ಪ ದೇಸಾಯಿ ಅವರು ಹೇಳಿದರು.
ಪಟ್ಟಣದ ಗಚ್ಚಿನ ಹಿರೇಮಠ ಸಭಾ ಭವನದಲ್ಲಿ ನೆಡೆದ ಶ್ರೀ ಬಸವ ಸಂಸ್ಥೆ ವತಿಯಿಂದ ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತರಬೇತಿ ಪ್ರಮಾಣ ಪ್ರತ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ
ಬಡತನದಿಂದ ಬಂದು ಚಿಕ್ಕ ವಯಸ್ಸಿನಲ್ಲಿ ಒಂದು ಸಂಸ್ಥೆಯನ್ನು ಹುಟ್ಟುಹಾಕಿ ನೂರಾರು ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ನೀಡುವುದಲ್ಲದೆ ಕಾನೂನಿನ ಅರಿವು ಮತ್ತು ನೆರವು ಕಾರ್ಯಕ್ರಮ ಮಾಡುವುದರ ಮೂಲಕ ಯುವಜನರ ಬಾಳಿಗೆ ಬೆಳಕಾಗಿದ್ದಾರೆ .ಎಂದರು.
ಅದೇ ರೀತಿ ನಂತರ ಮಾತನಾಡಿದ ಶಿವಕುಮಾರ್ ಮ್ಯಾಗಳಮನಿ ವಕೀಲರು ಜಿಲ್ಲಾ ನ್ಯಾಯಾಲಯ ರಾಯಚೂರು ಇವರು ಭಾರತೀಯರಾದ ಪ್ರತಿಯೊಬ್ಬ ನಾಗರಿಕರು ಉಚಿತವಾಗಿ ಯಾವ ರೀತಿ ಕಾನೂನು ಪಡೆದುಕೊಳ್ಳಬೇಕು ಎಂದು ಸ್ವ ವಿಸ್ತಾರವಾಗಿ ಸಿವಿಲ್ ಮತ್ತು ಕ್ರಿಮಿನಲ್ ವಾದಗಳ ವ್ಯತ್ಯಾಸ ಹಾಗೂ ಕಾನೂನಿನ ವಿಶೇಷ ಉಪನ್ಯಾಸವನ್ನು ನೆರೆದ ವೀಕ್ಷಕರ ಮನಮುಟ್ಟುವ ರೀತಿಯಲ್ಲಿ ಸಲಹೆ ನೀಡಿದರು.
ಸಂಸ್ಥೆಯ ಸಂಸ್ಥಾಪಕ ವೆಂಕಪ್ಪ ಎಸ್ ಅವರು ಮಾತನಾಡಿ ನಾನು ತೀರ ಬಡತನ ಕಷ್ಟದಿಂದ ವಿದ್ಯಾಭ್ಯಾಸ ಮುಂದುವರಿಸಿ ಇಂದು ಉನ್ನತ ಇಂಜಿನಿಯರ್ ಆಗಿ ಈ ಬಸವ ಸಂಸ್ಥೆಯ ಸಂಸ್ಥಾಪಕನಾಗಿ ಯಾವುದೇ ಸರಕಾರಿ ಹುದ್ದೆ ಬಯಸದೆ , ನನ್ನಂತೆಯೇ ಬಡತನದಿಂದ ಬರುವಂತಹ ವಿದ್ಯಾರ್ಥಿಗಳಿಗೆ ಉಚಿತ ಕಂಪ್ಯೂಟರ್ ತರಬೇತಿ ಮತ್ತು ಕಾನೂನು ಅರಿವಿನ ಸಲಹೆ ಪಡೆಯುವ ಮೂಲಕ ವಿದ್ಯಾರ್ಥಿಗಳು ಉನ್ನತ ಮಟ್ಟದ ಮತ್ತು ಶಿಕ್ಷಣ ಪಡೆದು ಸರಕಾರಿ ಮಟ್ಟದ ಉನ್ನತ ಹುದ್ದೆಯಲ್ಲಿ ಕೆಲಸ ಮಾಡಬೇಕು ನೀವು ಕೂಡ ಬಡವರ ಪರ ಸಾಮಾಜಿಕ ಕಾರ್ಯಗಳಲ್ಲಿ ತೊಡಗುವುದರ ಜೊತೆಗೆ ನಿಮ್ಮ ತಂದೆ ತಾಯಿ ಮತ್ತು ಈ ಶ್ರೀ ಬಸವ ಸಂಸ್ಥೆಯ ಹೆಸರು ತರಬೇಕು ಎನ್ನುವುದೇ ನನ್ನ ಆಶಯ ಎಂದು ಭಾವುಕರಾಗಿ ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಶ್ರೀ ವರ ರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳು ಗಚ್ಚಿನ ಹಿರೇಮಠ,ರಮೇಶ್ ಎನ್ ಫಾಸ್ಟರ್ ರಹೋಬಥ ಜಿಪ್ಸಿ ಚರ್ಚ್ ಲಿಂಗಸುಗೂರು, ರಿಯಾಜ್ ಖಾಜಿ ಮುಸ್ಲಿಂ ಧರ್ಮ ಗುರುಗಳು,
ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಘಟಕದ ಅಧ್ಯಕ್ಷರು ಹನುಮಂತಪ್ಪ ಮುದ್ದಾಪುರ್, ಮಲ್ಲಪ್ಪ ಗೋನಾಳ್ ದಲಿತ ಹಿರಿಯ ಮುಖಂಡರು, ರತ್ನಾ ಕಟ್ಟಿಮನಿ ಸಾಮಾಜಿಕ ಹೋರಾಟದ ಮುಖಂಡರು, ಎಸ್ಎಫ್ಐ ಸಂಘದ ತಾಲೂಕ ಅಧ್ಯಕ್ಷ ಬಸವಂತ ಕಡಬೂರು ಹನುಮಂತಪ್ಪ ಪರಾಪುರ, ಅಶೋಕ ಕಟ್ಟಿಮನಿ ಸಿ.ಎಂ.ಎಸ್.ಎಸ್. ಮಸ್ಕಿ,
ವೆಂಕಟೇಶ್ ಬಿರಾದರ್ ಪಾಟೀಲ್ ನಿರ್ದೇಶಕರು ಮಾಸಂಗಿಪುರ ಸೌಹಾರ್ದ ಸಹಕಾರಿ ಸಂಘ ಮಸ್ಕಿ, ಮೌನೇಶ್ ತುಗ್ಗಲದಿನ್ನಿ ಪ್ರಧಾನ ಕಾರ್ಯದರ್ಶಿ ತಾಲೂಕ ಗುತ್ತೇದಾರರು ಸಂಘ ಮಸ್ಕಿ ಸೇರಿದಂತೆ ಮುಖಂಡರು ಸೇರಿದಂತೆ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.



ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ