"ಆಯುಷ್ಮಾನ್ ಭವ ಆರೋಗ್ಯ ಶಿಬಿರ"
ಕೊಟ್ಟೂರು: ಸಮುದಾಯ ಆರೋಗ್ಯ ಕೇಂದ್ರ ಉಜ್ಜಿನಿಯಲ್ಲಿ ಆಯುಷ್ಮಾನ್ ಭವ ಆರೋಗ್ಯ ಶಿಬಿರವನ್ನು ಆಯೋಜಿಸಲಾಗಿತ್ತು ಶಿಬಿರವನ್ನ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ನಿಂಗಮ್ಮ ಮಾರಪ್ಪ ಇವರು ದೀಪ ಬೆಳಗುವ ಮೂಲಕ ಉದ್ಘಾಟನೆ ನೆರವೇರಿಸಲಾಯಿತು ಕಾರ್ಯಕ್ರಮದಲ್ಲಿ ಪಂಚಾಯಿತಿಯ ಉಪಾಧ್ಯಕ್ಷರಾದ ಪುಷ್ಪಲತಾ ರೇವಣಸಿದ್ದಪ್ಪ ಮಂಜುನಾಥ ಯು ಎಂ ನಾಗೇಂದ್ರಪ್ಪ ಇನ್ನೂ ಅನೇಕ ಗ್ರಾಮ ಪಂಚಾಯಿತಿಯ ಸದಸ್ಯರು ಭಾಗಹಿಸಿದ್ದರು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ತಾಲೂಕು ವೈದ್ಯಾಧಿಕಾರಿಗಳಾಗಿರುವಂತಹ ಡಾಕ್ಟರ್ ಪ್ರದೀಪ್ ಅವರು ಆಯುಷ್ಮಾನ್ ಭವ ಆರೋಗ್ಯ ಶಿಬಿರದಲ್ಲಿ ಸಿಗುವಂತ ಸೌಲಭ್ಯಗಳ ಬಗ್ಗೆ ಮಾಹಿತಿ ಒದಗಿಸಿದರು. ಆಯುಷ್ಮಾನ್ ಅರೋಗ್ಯ ಮೇಳದಲ್ಲಿ ನುರಿತ ವೈದ್ಯಾಧಿಕಾರಗಳಾದ ಡಾ. ನಿರಂಜನ್ ಕೆ ಎಂ ಡಾ. ರವಿಕುಮಾರ್ ಡಾಕ್ಟರ್ ಮನ್ಸುರ್ ಅಹಮದ್ ಡಾ. ರಾಜಶೇಖರ್ ಡಾ. ಲಕ್ಷ್ಮಿ ಡಾ. ರೇಣುಕಾ ಡಾಕ್ಟರ್ ಆಕಾಶ್ ಶಿಬಿರವನ್ನ ಯಶಸ್ವಿಯಾಗಿ ನಡೆಸಿಕೊಡಲು ಸಹಕಾರ ಜೊತೆಗೆ ಸಾರ್ವಜನಿಕರು ಆರೋಗ್ಯ ಸೇವೆಯನ್ನು ತೆಗೆದುಕೊಂಡು ಐದು ನೂರಕ್ಕಿಂತ ಹೆಚ್ಚು ಜನರು ಭಾಗವಹಿಸಿ ಶಿಬಿರವನ್ನು ಯಶಸ್ವಿಗೊಳಿಸಿದರು.
ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಮರುಳಾರಾದ್ಯ ಜೆ ಎಂ ಅವರು ನೆರವೇರಿಸಿದರು. ಕಾರ್ಯಕ್ರಮದಲ್ಲಿ ಆಯುಷ್ಮಾನ ಶಿಬಿರದ ಯಶಸ್ಸಿಗೆ ಕಾರಣರಾದ ಸಾರ್ವಜನಿಕರಿಗೆ ತಾಲೂಕು ವೈದ್ಯಾಧಿಕಾರಿಗಳು ಅಭಿನಂದನೆ ತಿಳಿಸಿದರು. ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಸಮುದಾಯ ಆರೋಗ್ಯ ಕೇಂದ್ರ, ಉಜ್ಜಿನಿ ಯ ಎಲ್ಲಾ ವೈದ್ಯಾಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರು ಶ್ರಮಿಸಿದರು. ಕಾರ್ಯಕ್ರಮ ಅಭೂತ ಪೂರ್ವವಾಗಿ ಯಶಸ್ವಿಯಾಯಿತು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ