ದೇಶ ಒಡೆಯುವವರ ಬಗ್ಗೆ ಎಚ್ಚರ ವಹಿಸಿರಿ:ಮೋದಿ
ಬ್ಯುರೊ:ಜಾತಿ, ಧರ್ಮದ ಆಧಾರದಲ್ಲಿ ದೇಶವನ್ನು ಒಡೆಯುವ, ತಾರತಮ್ಯ ಬಿತ್ತುವವರಿಂದ ದೂರ ಮತ್ತು ಎಚ್ಚರದಿಂದ ಇರಿ ಎಂದು ಪ್ರಧಾನಿ ನರೇಂದ್ರ ಮೋದಿ ಕರೆನೀಡಿದ್ದಾರೆ
ದೆಹಲಿಯ ದ್ವಾರಕದಲ್ಲಿ ಹಮ್ಮಿಕೊಂಡಿದ್ದ ದಸರಾ ಕಾರ್ಯಕ್ರಮ ಉದ್ಘಾಟಿಸಿ, ಮಾತನಾಡಿದ ಅವರು, ಶತಮಾನಗಳಿಂದ ಕಾದು ನಾವು ಇಂದು ರಾಮನ ಜನ್ಮಸ್ಥಳದಲ್ಲಿ ರಾಮ ಮಂದಿರ ನಿರ್ಮಾಣ ಮಾಡುತ್ತಿದ್ದೇವೆ. ಇದು ಭಾರತೀಯರಾದ ನಮಗೆ ಇರುವ ತಾಳ್ಮೆಯ ಸಂಕೇತ ಆಗಿದೆ ಎಂದರು.
ನಾವು ಆಯುಧಗಳನ್ನು ಮರ್ಯಾದೆಗಾಗಿ(ರಾಮನ ಹಾಗೆ) ಮಾತ್ರ ಬಳಸಬೇಕು. ನಮ್ಮ ಗಡಿ, ನಮ್ಮವರ ರಕ್ಷಣೆಗೆ ಬಳಸಬೇಕು ಎಂಬುದನ್ನು ಅರಿತಿದ್ದೇವೆ. ಯಾರನ್ನೂ ಸೋಲಿಸಲು ಅಲ್ಲ ಎಂಬುದು ನಮಗೆ ಮನವರಿಕೆ ಆಗಿದೆ ಎಂದರು.
ಮುಂದಿನ ವರ್ಷದ ದಸರ ರಾಮಮಂದಿರದಲ್ಲೇ ನಡೆಯಲಿದೆ. ರಾಮನ ಆಶೀರ್ವಾದ ಇಡೀ ಜಗತ್ತಿಗೆ ಸಿಗಲಿದೆ. ಇದರಲ್ಲಿ ಯಾವುದೇ ಅನುಮಾನ ಇಲ್ಲ. ರಾಮಚರಿತ ಮಾನಸದಲ್ಲಿ ಹೇಳಿದ ಹಾಗೆ ಇದು ರಾಮನ ಆಗಮನದ ಸಮಯ ಎಂದರು.
ಹಾಲಿ ಭಾರತ ಪ್ರಪಂಚದ ೫ನೇ ದೊಡ್ಡ ಆರ್ಥಿಕತೆ ಆಗಿದೆ. ಪ್ರಪಂಚದ ಅತಿ ದೊಡ್ಡ ಪ್ರಜಾಪ್ರಭುತ್ವ ರಾಷ್ಟçವಾಗಿ ಹೊರಹೊಮ್ಮಿದೆ. ನಾವು ಮುಂದಿನ ೨೫ ವರ್ಷಗಳಲ್ಲಿ ರಾಮ ಕಂಡ ರಾಜ್ಯದ ಪರಿಕಲ್ಪನೆಯನ್ನು ವಾಸ್ತವದಲ್ಲಿ ತರಬೇಕಿದೆ ಎಂದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ