ಬಸರಿ ಮರಕ್ಕೆ ಮರುಜೀವ ನೀಡಲು ಮುಂದಾದ ವನಸಿರಿ ಫೌಂಡೇಶನ್

ಸಿಂಧನೂರು : ತಾಲೂಕಿನ ಮುದ್ದಾಪುರ ಕ್ರಾಸ್ ನ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಚರಂಡಿ ನಿರ್ಮಾಣ ಕಾರ್ಯಕ್ಕೆ ಅಡ್ಡಲಾಗಿದೆ ಎಂದು ಕಿತ್ತು ಹಾಕಲಾಗಿದ್ದ ಬಸರಿ ಮರವನ್ನು ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ಅವರ ನೇತೃತ್ವದಲ್ಲಿ ಹಾರಾಪೂರ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ವನಸಿರಿ ಫೌಂಡೇಶನ್ ಹಾಗೂ ಗ್ರಾಮ ಪಂಚಾಯತಿ ಸದಸ್ಯರು, ಎಸ್ ಡಿ ಎಂ ಸಿ ಸದಸ್ಯರು,ಶಿಕ್ಷಕರು ಹಾಗೂ ಗ್ರಾಮಸ್ಥರ ಸಹಕಾರದಿಂದ ಬಸಿರ ಮರಕ್ಕೆ ಮರುಜೀವ ನೀಡಿ ಪರಿಸರ ಸಂರಕ್ಷಣೆ ಮಾಡಲು ಮುಂದಾದರು. 

ಸಿಂಧನೂರು - ಮಸ್ಕಿ ರಾಷ್ಟ್ರೀಯ ಹೆದ್ದಾರಿಯ ಪಕ್ಕದಲ್ಲಿ ಚರಂಡಿ ವ್ಯವಸ್ಥೆ ನಿರ್ಮಿಸಲಾಗುತ್ತಿದ್ದು ಈ ಚರಂಡಿ ನಿರ್ಮಾಣದ ಕಾರ್ಯಕ್ಕೆ ಅಡ್ಡಲಾಗಿ ಒಂದು ಬೃಹತ್ ಬಸರಿ ಮರವೊಂದು ಹೆಮ್ಮರವಾಗಿ ಬೆಳೆದು ನಿಂತಿತ್ತು ಈ ಮರವನ್ನು ರಾತ್ರೋರಾತ್ರಿ ಕಿತ್ತು ಹಾಕಿದ್ದರು. ಬೆಳಗ್ಗೆ ಅದನ್ನು ನೋಡಿದ ಸ್ಥಳೀಯರು ನಮ್ಮ ವನಸಿರಿ ಫೌಂಡೇಶನ್ ಗೆ ಪೋನ್ ಮೂಲಕ ಕರೆ ಮಾಡಿ ಮರುಜೀವ ಕೊಡಲು ಮನವಿ ಮಾಡಿದಾಗ ತಕ್ಷಣ ವನಸಿರಿ ಫೌಂಡೇಶನ್ ತಂಡ ಸ್ಥಳಕ್ಕೆ ಧಾವಿಸಿ ವೀಕ್ಷಣೆ ಮಾಡಿ ಇದಕ್ಕೆ ಮತ್ತೆ ಮರುಜೀವ ಕೊಡಬಹುದು ಎಂದು ತಿಳಿದು, ಹಾರಾಪೂರ ಸರಕಾರಿ ಪ್ರೌಢ ಶಾಲೆಯ ಮುಖ್ಯ ಶಿಕ್ಷಕರಾದ ಶರಣಪ್ಪ ಅವರನ್ನು ಪರಿಸರ ರಾಜ್ಯ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪುರ ಅವರು ಪೋನ್ ಮುಖಾಂತರ ಬಸರಿ ಮರಕ್ಕೆ ಮರುಜೀವ ನೀಡಲು ಸ್ಥಳಾವಕಾಶ ಕೋರಿದಾಗ ಅಲ್ಲಿನ ಸ್ಥಳೀಯ ಗ್ರಾಮ ಪಂಚಾಯತಿ, ಸದಸ್ಯರು,ಎಸ್ ಡಿ ಎಂ ಸಿ ಸದಸ್ಯರು ಹಾಗೂ ಶಿಕ್ಷಕರು ಚರ್ಚಿಸಿ ಸ್ಥಳಾವಕಾಶ ನೀಡಿದರು. ನಂತರ ಜೆಸಿಬಿ ಮೂಲಕ ತಗ್ಗು ತೋಡಲಾಯಿತು.ಮುದ್ದಾಪೂರ ಕ್ರಾಸ್ ನಿಂದ ಹಾರಾಪೂರ ಸರಕಾರಿ ಪ್ರೌಢ ಶಾಲೆಯ ಆವರಣದವರೆಗೆ ಟ್ರಾಕ್ಟರ್ ಮೂಲಕ ಬಸರಿ ಮರವನ್ನು ಸ್ಥಳೀಯರ ಸಹಕಾರದಿಂದ ತಂದು ಮರಕ್ಕೆ ಸಗಣಿ ಸವರಿ ನೆಡಲಾಯಿತು.ವನಸಿರಿ ಫೌಂಡೇಶನ್ ತಂಡ ಮೊತ್ತೊಂದು ಬಸರಿ ಮರಕ್ಕೆ ಮರುಜೀವ ಕೊಡಲು ಮುಂದಾಗಿರುವುದನ್ನು ಕಂಡ ಸಾರ್ವಜನಿಕರು ಹಾಗೂ ಶಾಲೆಯ ಮುಖ್ಯ ಗುರುಗಳಾದ ಶರಣಪ್ಪ ಅವರು ಈ ಮರ ಮುಂದೊಂದು ದಿನ ವನಸಿರಿ ಸಮೃದ್ಧವಾಗಿ ಮಕ್ಕಳಿಗೆ, ಸಾರ್ವಜನಿಕರಿಗೆ ಮಾದರಿಯಾಗಲಿದೆ ಎಂದು ವನಸಿರಿ ಫೌಂಡೇಶನ್ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪರಿಸರ ಪ್ರಶಸ್ತಿ ಪುರಸ್ಕೃತರು ಹಾಗೂ ವನಸಿರಿ ಫೌಂಡೇಶನ್ ಅಧ್ಯಕ್ಷರಾದ ಅಮರೇಗೌಡ ಮಲ್ಲಾಪುರ, ಶಾಲೆಯ ಮುಖ್ಯೋಪಾಧ್ಯಾಯರಾದ ಶರಣಪ್ಪ,ಟ್ರಾಕ್ಟರ್ ಸೌಲಭ್ಯ ನೀಡಿದ ವೆಂಕನಗೌಡ,ಗ್ರಾಮ ಪಂಚಾಯತಿ ಸದಸ್ಯರಾದ ಚಿದಾನಂದಪ್ಪ, ಎಸ್ ಡಿ ಎಂ ಸಿ ಸದಸ್ಯರಾದ ಸಿದ್ದಪ್ಪ,ಹೊನ್ನಪ್ಪ, ಮುದಿಯಪ್ಪ ಹೊಸಹಳ್ಳಿ ಕ್ಯಾಂಪ್,ಚನ್ನಪ್ಪ ಕೆ.ಹೊಸಹಳ್ಳಿ ಊರಿನ ಹಿರಿಯರು ಯುವಕರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ