ಪದವೀಧರರು ಮತದಾರರ ಪಟ್ಟಿಯಲ್ಲಿ ನೊಂದಾಯಿಸಲು ಕರೆ – ಗುಡ್ಡಪ್ಪ, ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು, ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ,
ಕೊಟ್ಟೂರು :- ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರದ ಚುನಾವಣೆ-2024 ಕ್ಕೆ ಸಂಬಂಧಿಸಿದಂತೆ ಈಗಾಗಲೇ ಪದವೀಧರರಿಂದ ಮತದಾರರ ಪಟ್ಟಿಯಲ್ಲಿ ಹೆಸರನ್ನು ನೊಂದಾಯಿಸುವ ಪ್ರಕ್ರಿಯೆ ಪ್ರಾರಂಭವಾಗಿದ್ದು, ದಿನಾಂಕ: 01.11.2020ಕ್ಕಿಂತ ಹಿಂದೆ ಪದವಿಯನ್ನು ಪೂರ್ಣಗೊಳಿಸಿದ ತಾಲೂಕಿನಲ್ಲಿರುವ ಪದವೀಧರರು ಯಾವುದೇ ಕಾರಣಕ್ಕೂ ಮತದಾನದಿಂದ ವಂಚಿತರಾಗದೇ ಇರಲು ಕಡ್ಡಾಯವಾಗಿ ನವಂಬರ್-06 2023 ರ ಒಳಗೆ ನಮೂನೆ-18ರ ಅರ್ಜಿ ಹಾಗೂ ಪದವಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಓಟರ್ ಐ.ಡಿ. 2 ಭಾವಚಿತ್ರದೊಂದಿಗೆ ದಾಖಲೆಗಳನ್ನು ಅಂತಿಮ ದಿನದವರೆಗೆ ಕಾಯದೇ ಕೂಡಲೇ ದೃಢೀಕರಿಸಿ ಸಲ್ಲಿಸುವಂತೆ ಕೋರಿದರು.
ಗ್ರಾಮ ಪಂಚಾಯಿತಿ ಹಾಗೂ ಪಟ್ಟಣ ಪಂಚಾಯಿತಿ ವ್ಯಾಪ್ತಿಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪ್ರಚಾರವನ್ನು ಕೈಗೊಂಡು ನೊಂದಣಿಗೆ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಅಕ್ಟೋಬರ್-26 ಹಾಗೂ ಅಕ್ಟೋಬರ್-30 ರ ವಿಶೇಷ ಮತದಾರರ ನೊಂದಣಿಯ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದ್ದು, ಎಲ್ಲರೂ ಜಾಗೃತಿ ಮೂಡಿಸಿ ನೊಂದಾಯಿಸಲು ಶ್ರೀ ಗುಡ್ಡಪ್ಪ, ಜಿಲ್ಲಾ ಮಟ್ಟದ ನೋಡಲ್ ಅಧಿಕಾರಿಗಳು, ಕರ್ನಾಟಕ ಈಶಾನ್ಯ ಪದವೀಧರ ಕ್ಷೇತ್ರ, ಕೊಟ್ಟೂರು ತಾಲೂಕು ಹಾಗೂ ಉಪನಿರ್ದೇಶಕರು, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ, ಹೊಸಪೇಟೆ ಇವರು ಸಭೆಯಲ್ಲಿ ಮಾಹಿತಿಯನ್ನು ನೀಡಿದರು.
ತಹಶೀಲ್ದಾರರಾದ ಕಾರ್ತಿಕ್ ವಿ ಇವರು ಎಲ್ಲಾ ಗ್ರಾಮ ಲೆಕ್ಕಿಗರು ಹಾಗೂ ಪಿಡಿಒಗಳು ತಮ್ಮ ತಮ್ಮ ಗ್ರಾಮಗಳಲ್ಲಿ ಪದವಿದಾರ ಮತದಾರರ ಮಾಹಿತಿಯನ್ನು ಸಂಗ್ರಹಿಸಿ ಅವರಿಂದ ನಮೂನೆ-18ರ ಅರ್ಜಿಯನ್ನು ಭರ್ತಿಮಾಡಿಸಿ ಅರ್ಜಿಗಳ ಸಂಗ್ರಹಿಸಿ ಕಛೇರಿಗೆ ಸಲ್ಲಿಸಲು ಹಾಗೂ ತಾಲೂಕಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಧಿಕಾರಿ/ಸಿಬ್ಬಂದಿಯವರು ಪದವಿ ಮುಗಿಸಿದ್ದಲ್ಲಿ ನೊಂದಾಯಿಸಲು ಸೂಚಿಸಿದರು.
ಸದರಿ ಸಭೆಯಲ್ಲಿ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ನಸರುಲ್ಲಾ, ಸಿಡಿಪಿಒ ಕಛೇರಿಯ ಮೇಲ್ವಿಚಾರಕರು, ಶಿಕ್ಷಣ ಇಲಾಖೆಯ ಇಸಿಒ ನಿಂಗಪ್ಪ, ಅಜ್ಜಪ್ಪ ಸಿ, ಸ್ವೀಪ್ ಅಧಿಕಾರಿಗಳು, ಗ್ರಾಮ ಪಂಚಾಯಿತಿ ಪಿಡಿಒಗಳು, ಗ್ರಾಮ ಆಡಳಿತ ಅಧಿಕಾರಿಗಳು, ಕಂದಾಯ ನಿರೀಕ್ಷಕರು ಹಾಜರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ