ನೂತನ ಮಿನಿ ವಿಧಾನಸೌಧ ಕಟ್ಟಡÀ ನಿರ್ಮಾಣಕ್ಕೆ ತಜ್ಞರಿಂದ ಮಣ್ಣು ಪರೀಕ್ಷೆ
ಮಾನ್ವಿ: ಪಟ್ಟಣದ ನೀರಾವರಿ ಇಲಾಖೆಯ ಆವರಣದಲ್ಲಿ ಅಂದಾಜು ೧೦ಕೋಟಿ ಅನುದಾನದಲ್ಲಿ ಕಂದಾಯ ಇಲಾಖೆಯ ನೂತನ ಆಡಳಿತ ಭವನ ನಿರ್ಮಾಣಕ್ಕಾಗಿ ನಿಗದಿಪಡಿಸಿರುವ ನಿವೇಶನವನ್ನು ತಹಸೀಲ್ದಾರ್ ರಾಜುಪಿರಂಗಿ ಪರಿಶೀಲನೆ ನಡೆಸಿದರು. ಕಂದಾಯ ಇಲಾಖೆಗೆ ಸೇರಿದ ಅನೇಕ ಇಲಾಖೆಗಳ ಕಚೇರಿ ಸೇರಿದಂತೆ ಸಾರ್ವಜನಿಕರಿಗೆ ಒಂದೇ ಕಡೆ ವಿವಿಧ ಇಲಾಖೆಗಳ ಸೇವೆ ದೊರೆಯುವಂತೆ ಖಜಾನೆ, ಸರ್ವೆ ಇಲಾಖೆ, ಸೇರಿದಂತೆ ಇತರ ಇಲಾಖೆಯ ಕಚೇರಿಗಳನೊಳಗೊಂಡAತೆ ಮಿನಿ ವಿಧಾನಸೌಧ ಕಟ್ಟಡ ನಿರ್ಮಾಣ ವಾಗಲಿದ್ದು ಇಂದು ನಿವೇಶನದಲ್ಲಿ ಕಟ್ಟಡ ನಿರ್ಮಾಣ ಕಾಮಾಗಾರಿಗಾಗಿ ಮಣ್ಣಿನ ಪರೀಕ್ಷೆ, ಹಾಗೂ ವಿವಿಧ ಕಟ್ಟಡಗಳ ಗುರುತಿಸುವಿಕೆಯನ್ನು ನಡೆಸಲಾಯಿತು.
ಸರ್ವೆ ಕಾರ್ಯ ನಿರ್ವಹಿಸುವ ಸಿಬ್ಬಂದಿಗಳು ಇಂದು ನಿವೇಶನದಲ್ಲಿ ಕಾರ್ಯನಿರ್ವಹಿಸಿ ನಕ್ಷೆಯನ್ನು ಸಿದ್ದಪಡಿಸುವ ಕಾರ್ಯ ನಡೆಸಿದರು.ಉಪತಹಸೀಲ್ದಾರ್ ವಿರುಪಣ್ಣ ಹಾಗೂ ಇತರ ಅಧಿಕಾರಿಗಳು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ