ಸ್ವಾತಂತ್ರ್ಯ ಹೋರಾಟಗಾರರ ಸ್ಮರಣೆ ಅತ್ಯಗತ್ಯ ಮಸ್ಕಿ ತಾ.ಪಂ ಇಒ ಉಮೇಶ ಅಭಿಮತ
ಮಸ್ಕಿ : ದೇಶದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನ ಸ್ಮರಿಸಲು ನನ್ನ ಮಣ್ಣು ನನ್ನ ದೇಶ ಅಭಿಯಾನ ನೆರವಾಲಿದೆ ಎಂದು ಮಸ್ಕಿ ತಾಪಂ ಕಾರ್ಯ ನಿರ್ವಾಹಕ ಅಧಿಕಾರಿ ಉಮೇಶ್ ಹೇಳಿದರು.
ಪಟ್ಟಣದ ತಾಪಂ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ನನ್ನ ಮಣ್ಣು ನನ್ನ ದೇಶ ಅಭಿಯಾನದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.
21 ಗ್ರಾ.ಪಂ ಗಳಿಂದ ಸಂಗ್ರಹಿಸಿದ ಮಣ್ಣನ್ನು ಸ್ವಯಂ ಸೇವಕರಿಗೆ ಹಸ್ತಾಂತರಿಸಿದ್ದು, ಅವರು ಇದನ್ನು ದೆಹಲಿಗೆ ತೆಗೆದುಕೊಂಡು ಹೋಗಲಿದ್ದಾರೆ.ಅಲ್ಲಿ ನಿರ್ಮಿಸುವ ಪಂಚವಾಟಿಕ ಉದ್ಯಾನದಲ್ಲಿ ಈ ಮಣ್ಣನ್ನು ಬಳಸಲಾಗುತ್ತದೆ. ಅಜಾದಿ ಕಾ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ದೇಶಾದ್ಯಂತ ವಿವಿಧ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಅಂತಿಮವಾಗಿ ನನ್ನ ಮಣ್ಣು ನನ್ನ ದೇಶ ಅಭಿಯಾನ ಸಮಾರೋಪವಾಗಿದೆ. ಭಾರತ ಇಂದು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದೆ. ದೇಶದ ಐಕ್ಯತೆಗೆ ಪ್ರತಿಯೊಬ್ಬರು ಕೈಜೋಡಿಸಬೇಕು. ಶಾಲಾ ವಿದ್ಯಾರ್ಥಿಗಳು ಈಗಿನಿಂದಲೇ ಉನ್ನತ ಹುದ್ದೆ ಪಡೆಯುವತ್ತ ಗಮನಹರಿಸಿ,ಸತತ ಪರಿಶ್ರಮದಿಂದ ಗುರಿ ಮುಟ್ಟಬೇಕು ಎಂದರು.
ಈ ವೇಳೆ ಸಹಾಯಕ ನಿರ್ದೇಶಕರಾದ (ಗ್ರಾಮೀಣ ಉದ್ಯೋಗ) ಶಿವಾನಂದರಡ್ಡಿ, ತಾ.ಪಂ ಯೋಜನಾ ನಿರ್ದೇಶಕರಾದ ಇಬ್ರಾಹಿಂ ಪಟೇಲ್, ತಾ.ಪಂ ಸಿಬ್ಬಂದಿ ಗಂಗಾಧರ ಮೂರ್ತಿ, ಬಸವರಾಜ್, ಚಂದ್ರಶೇಖರ, ನವೀನ್, ಶರಣಯ್ಯ, ಎನ್ಆರ್ ಎಲ್ಎಂ ವಲಯ ಮೇಲ್ವಿಚಾರಕ ಪ್ರಕಾಶ್, ಅರ್ಜುನ್, ಮಲ್ಲಿಕಾರ್ಜುನ, ಹಿರೇದಿನ್ನಿ ಗ್ರಾ.ಪಂ ಪಿಡಿಒ ವಿನೋದ್, ಲಯನ್ಸ್ ಶಾಲೆಯ ವಿದ್ಯಾರ್ಥಿಗಳು, ವಿವಿಧ ಗ್ರಾ.ಪಂ ಅಧ್ಯಕ್ಷರು ಹಾಗೂ ಸದಸ್ಯರು ಇತರರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ