ಪಟ್ಟಣ ಪಂಚಾಯಿತಿ ವತಿಯಿಂದ" ಮನೆ ಬಾಗಿಲಿಗೆ" ಕಾರ್ಯಕ್ರಮ

ಕೊಟ್ಟೂರು ಪಟ್ಟಣ ಪಂಚಾಯಿತಿ ವತಿಯಿಂದ ದಿನಾಂಕ: 26.10.2023 ರಂದು ಬೆಳಿಗ್ಗೆ 9.00 ಗಂಟೆಯಿಂದ ಸಂಜೆ 5.30 ರವರೆಗೆ ಬಸವೇಶ್ವರ ನಗರದ ಈಶ್ವರ ದೇವಸ್ಥಾನದಲ್ಲಿ ಪಟ್ಟಣ ಪಂಚಾಯಿತಿ ಮನೆ ಬಾಗಿಲಿಗೆ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡು, ಆಸ್ತಿ ತೆರಿಗೆ, ನೀರಿನ ತೆರಿಗೆ, ಪಟ್ಟಣ ಪಂಚಾಯಿತಿ ವಾಣಿಜ್ಯ ಮಳಿಗೆ ಮಾಸಿಕ ಬಾಡಿಗೆ ಶುಲ್ಕ, ಉದ್ದಿಮೆ ಪರವಾನಿಗೆ ಮತ್ತು ನವೀಕರಣ ಶುಲ್ಕ ಪಾವತಿಕೊಳ್ಳಲಾಯಿತು. ಮಾನ್ಯ ಯೋಜನಾ ನಿರ್ದೇಶಕರು , ಜಿಲ್ಲಾ ನಗರಾಭಿವೃದ್ಧಿ ಕೋಶ, ವಿಜಯನಗರ ರವರು ಸದರಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರ್ಯಕ್ರಮ ಯಶಸ್ವಿಗೊಳಿಸಿದರು, 

ಅದರಂತೆ ಆಸ್ತಿ ತೆರಿಗೆ ರೂ.3.10 ಲಕ್ಷ ಹಾಗೂ ನೀರಿನ ತೆರಿಗೆ 0.42 ಲಕ್ಷ ವಸೂಲಿ ಮಾಡಲಾಯಿತು. ನಂತರ ಮಾನ್ಯ ಜಿಲ್ಲಾಧಿಕಾರಿಗಳು ನಮೂನೆ-3 ಗಳನ್ನು ಆಸ್ತಿ ಮಾಲೀಕರ ಮನೆಗೆ ತಲುಪಿಸುವಂತೆ ಸೂಚಿಸಿದ ಪ್ರಕಾರ ಪಟ್ಟಣದ ಸ್ಲಮ್ ಏರಿಯಾ ಇಂದಿರಾ ನಗರ ಕಾಲೋನಿಯ ಒಟ್ಟು 25 ಆಸ್ತಿ ಮಾಲೀಕರ ಮನೆಗಳಿಗೆ ಮಾನ್ಯ ಯೋಜನಾ ನಿರ್ದೇಶಕರು, ಜಿಲ್ಲಾ ನಗರಾಭಿವೃದ್ಧಿ ಕೋಶ, ವಿಜಯನಗರ ಮತ್ತು ಮುಖ್ಯಾಧಿಕಾರಿಗಳು , ಪಟ್ಟಣ ಪಂಚಾಯಿತಿ ಕೊಟ್ಟೂರು ಇವರು ಖುದ್ದು ಬೇಟಿ ನೀಡಿ ನಮೂನೆ-3 (ಖಾತಾ ನಕಲು) ನ್ನು ವಿತರಿಸಲಾಯಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ