ನಾಡ ಹಬ್ಬ ದಸರಾ ಆಚರಣೆ ನವರಾತ್ರಿಯ ಎರಡನೆಯದಿನ ಸಂಭ್ರಮ
ವರದಿ -- ಮಂಜುನಾಥ ಕೋಳೂರು ಕೊಪ್ಪಳ.
ಕೊಪ್ಪಳ ಅ 17 : - ನಾವು ಆರಾಧಿಸುವ ಹಿಂದೂ ಧರ್ಮದ ಪವಿತ್ರ ನವರಾತ್ರಿ ಹಬ್ಬವನ್ನು ಕೊಪ್ಪಳ ಇನ್ನರ್ ವೀಲ್ ಕ್ಲಬ್ ಪದಾಧಿಕಾರಿಗಳ ಮಹಿಳೆಯರು ಸೇರಿ ಸಂಭ್ರಮದಿಂದ ನವರಾತ್ರಿ ಹಬ್ಬವನ್ನು ಆಚರಿಸಿದರು. ಪಶ್ಚಿಮ ಬಂಗಾಳದಲ್ಲಿ ನವರಾತ್ರಿ ಹಬ್ಬವನ್ನು ದುರ್ಗಾ ಪೂಜೆ ಎಂದು ಆಚರಿಸಲಾಗುತ್ತಿದ್ದು , ನವರಾತ್ರಿ ಅಂದರೆ 9 ನವರಾತ್ರಿಗಳು ದೇವಿಯ ಒಂಬತ್ತು ವಿಧದ ರೂಪಗಳನ್ನು ಆರಾಧಿಸಲಾಗುತ್ತದೆ. ಹತ್ತನೇ ದಿನದಂದು ವಿಜಯದಶಮಿ ಆಚರಿಸುವ ನವರಾತ್ರಿ ಹಬ್ಬ ಇದಾಗಿದೆ ಎಂದು ಕೊಪ್ಪಳ ವಿನ್ನರ್ ವೀಲ್ ಕ್ಲಬ್ ಅಧ್ಯಕ್ಷರಾದ ವಿಜಯಲಕ್ಷ್ಮಿ ಹಂಚಾಟೆ ತಿಳಿಸಿದರು. ಅವರು ಕೊಪ್ಪಳದಲ್ಲಿ ಏರ್ಪಡಿಸಲಾಗಿದ್ದ ನವರಾತ್ರಿ ಹಬ್ಬದ ಪ್ರಯುಕ್ತ ಇನ್ನರ್ ವೀಲ್ ಕ್ಲಬ್ ಪದಾಧೀಕಾರಿಗಳೊಂದಿಗೆ ಬಣ್ಣ ಬಣ್ಣದ ವಸ್ತ್ರ ಗಳನ್ನು ಧರಿಸಿ ಸಂಭ್ರಮ ಸಡಗರದಿಂದ ಆಚರಿಸುವ ಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದರು. ವಿಜಯದಶಮಿ ಈ ದಿನ ಶಮಿ ( ಬನ್ನಿ)ವೃಕ್ಷಕ್ಕೆ ಪೂಜೆಯನ್ನು ಸಲ್ಲಿಸಿ ಶಮಿ (ಬನ್ನಿ)ಯನ್ನು ವಿನಿಯೋಗ ಮಾಡುವುದು ನಮ್ಮ ನಾಡಿನ ಆಚರಣೆಯ ಪದ್ಧತಿಯಾಗಿದೆ ಹಾಗೆ ನವರಾತ್ರಿಯಲ್ಲಿ ದೇವಿಯ ಅವತಾರಗಳು ಒಂಬತ್ತು ಬಣ್ಣಗಳಿಂದ ದೇವಿಯನ್ನು ಆರಾಧಿಸುತ್ತೇವೆ .ಈ ದಿನ ತಾಯಿ ಬ್ರಹ್ಮಚಾರಿಣಿಯಾಗಿ ಪೂಜಿಸಲ್ಪಡುತ್ತಾಳೆ ಹಾಗಾಗಿ ಬಿಳಿಯ ವಸ್ತ್ರಧಾರಣಿಯಾಗಿ ಪೂಜಿಸುವುದರಿಂದ ಈ ದಿನದ ಬಣ್ಣ ಬಿಳಿ ಎಂದು ವಿಜಯಲಕ್ಷ್ಮಿ ಹಂಚಾಟೆ ಹೇಳಿದರು. ಈ ಸಂದರ್ಭದಲ್ಲಿ ಇನ್ನರ ವೀಲ್ ಕ್ಲಬ್ ಪದಾಧಿಕಾರಿಗಳಾದ ಕಾರ್ಯದರ್ಶಿ ಸವಿತಾ ಸವಡಿ, ಉಪಾಧ್ಯಕ್ಷೆ ಉಮಾ ತಂಬ್ರಳ್ಳಿ , ಖಜಾಂಚಿ ಅನಿತಾ ಬಜಾರ್ ಮಠ್, ಸಂಪಾದಕರಾದ ಮಮತಾ ಶೆಟ್ಟರ್, ಮಾಜಿ ಅಧ್ಯಕ್ಷಣಿಯರಾದ ತ್ರಿಶಾಲ ಸುರೇಂದ್ರ ಪಾಟೀಲ್ , ಸುಧಾ ಶೆಟ್ಟರ್ ಸದಸ್ಯರುಗಳಾದ ಶೋಭಾ ಹಮ್ಮಿಗೆ ಸೇರಿದಂತೆ ಅನೇಕರು ಪಾಲ್ಗೊಂಡು ಹಬ್ಬವನ್ನು ಸಡಗರ ಸಂಭ್ರಮದಿಂದ ದೇವಿಗೆ ಪೂಜೆ ನೈವೇದ್ಯ ನೆರವೇರಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ