ಪತ್ರಕರ್ತನ ದೇಹದ ರಕ್ತದಿಂದ ಸಹಿ ಮಾಡಿ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಸಿದ್ದರಾಮಯ್ಯರಿಗೆ ಪತ್ರ
ಲಿಂಗಸಗೂರು-ಕರ್ನಾಟಕ ರಾಜ್ಯದ ಪತ್ರಿಕೆ ಮಾಧ್ಯಮದಲ್ಲಿ ಇತಿಹಾಸ ಸೃಷ್ಟಿಸಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಸಂಸ್ಥಾಪಕರು ಹಾಗೂ ರಾಜ್ಯಾಧ್ಯಕ್ಷರಾದ ಬಂಗ್ಲೆ ಮಲ್ಲಿಕಾರ್ಜುನ್ ಅವರ ಆದೇಶದ ಮೇರೆಗೆ
ಪತ್ರಕರ್ತರ ವಿವಿಧ ಬೇಡಿಕೆಗಾಗಿ ಸಾಕಷ್ಟು ಮನವಿ ಪತ್ರ ಹೋರಾಟ ಮಾಡಿದರು ಕೂಡ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನೋ ರೀತಿಯಲ್ಲಿ ಪತ್ರಕರ್ತರನ್ನು ಉಪಯೋಗಿಸುವಂತಹ ಜನಪ್ರತಿನಿಧಿಗಳು. ಹಾಗಾಗಿ ಮಾಧ್ಯಮ ಲೋಕದಲ್ಲಿ ಪತ್ರಕರ್ತರು ರಕ್ತದ ಮುಖಾಂತರ ಪತ್ರ ಬರೆದು ಸಹಿಗಳನ್ನು ಹಾಕಿ ಕರ್ನಾಟಕ ಸರ್ಕಾರದ ಸನ್ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಇವರಿಗೆ ಪತ್ರಕರ್ತರ ಹಲವಾರು ಬೇಡಿಕೆಗಳನ್ನು ಈಡೇರಿಸಬೇಕೆಂದು ಲಿಂಗಸುಗೂರು ತಾಲೂಕಿನ ಸಹಾಯಕ ಆಯುಕ್ತರ ಮುಖಾಂತರ ಮನವಿಯನ್ನು ಸಲ್ಲಿಸಲಾಯಿತು.
ಕರ್ನಾಟಕ ರಾಜ್ಯದ 14 ಬಾರಿ ಬಜೆಟ್ ಮಂಡನೆ ಮಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಹಿಂದೆ ಬೆಳಗಾವಿ ಅಧಿವೇಶನದಲ್ಲಿ ಧರಣಿ ಮಾಡಿ ಮನವಿ ಪತ್ರ ಸಲ್ಲಿಸಲಾಗಿದೆ.ನಂತರ ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಪತ್ರಕರ್ತರ ಬೇಡಿಕೆಗಳಿಗಾಗಿ ಪ್ರತಿಭಟನೆ ಧರಣಿ ಮಾಡುತ್ತಾ ಅಲ್ಲಿಯೂ ಸಹ ಮನವಿ ಪತ್ರವನ್ನು ಸಲ್ಲಿಸಲಾಯಿತು. ಇದುವರೆಗೆ ತಮ್ಮ ಸರಕಾರದಿಂದ ಪತ್ರಕರ್ತರ ಮನವಿಗೆ ಸ್ಪಂದಿಸದ ಮತ್ತು ನಮ್ಮ ಬೇಡಿಗಳನ್ನು ಈಡೇರಿಸಿದ ಕಾರಣ.
ನಮ್ಮ ದೇಹದಿಂದ ರಕ್ತವನ್ನು ತೆಗೆದು ಪತ್ರ ಬರೆದು ಸಹಿ ಹಾಕುವ ಮೂಲಕ ನಿಮಗೆ ಮನವಿ ಪತ್ರವನ್ನು ಸಲ್ಲಿಸಿದ್ದೇವೆ ಕೂಡಲೇ ಈ ಮನವಿ ಪತ್ರಕ್ಕೆ ಸ್ಪಂದಿಸಿ ರಾಜ್ಯದ ಎಲ್ಲಾ ಪತ್ರಕರ್ತರ ಬೇಡಿಕೆಗಳನ್ನು ಈಡೇರಿಸಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘಟನೆಯ ಲಿಂಗಸಗೂರು ತಾಲೂಕ ಅಧ್ಯಕ್ಷರಾದ ಶ್ರೀನಿವಾಸ್ ಮಧುಶ್ರೀ ಹಟ್ಟಿ ಚಿನ್ನದ ಗಣಿ ನೇತೃತ್ವದಲ್ಲಿ. ಉಪಾಧ್ಯಕ್ಷರಾದ ಕುಬೇರ್ ನಗನೂರು. ಖಜಂಚಿಯದ ಅಬ್ದುಲ್ ರಶೀದ್.ವಿಘ್ನೇಶ್ ನಗನೂರು.ಯೋಗಪ್ಪ ದೊಡ್ಮನಿ. ಈ ಎಲ್ಲಾ ಪತ್ರಕರ್ತರು ಸೇರಿ ಲಿಂಗಸುಗೂರ ಸಹಾಯಕ ಆಯುಕ್ತರ ಮೂಲಕ ತಮಗೆ ಮನವಿಯನ್ನು ಸಲ್ಲಿಸಿದ್ದೇವೆ ಕೂಡಲೇ ಮಾನ್ಯ ಮುಖ್ಯಮಂತ್ರಿಗಳು ನಮ್ಮ ಬೇಡಿಕೆಯನ್ನು ಈಡೇರಿಸುವರೆಂದು ಕಾಯುತ್ತಿರುವ ರಾಜ್ಯದ ಎಲ್ಲಾ ಪತ್ರಕರ್ತರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ