ಬಿ.ಡಿ.ಸಿ.ಸಿ. ಬ್ಯಾಂಕ್ ನಿ.ಗೆ ನಿರ್ದೇಶಕರಾಗಿ ಐ.ದಾರುಕೇಶ್ ಗೆಲುವು

ಕೊಟ್ಟೂರು ತಾಲ್ಲೂಕು ಪ್ರಾಥಮಿಕ ಕೃಷಿ ಪತ್ತಿ ಸಹಕಾರ ಸಂಘಗಳ ಮತಕ್ಷೇತ್ರದಿಂದ ಬಳ್ಳಾರಿ ಜಿಲ್ಲಾ ಸಹಕಾರಿ ಕೇಂದ್ರ ಆಡಳಿತ ಮಂಡಳಿಯ ನಿರ್ದೇಶಕರಾಗಿ ಐ.ದಾರುಕೇಶ್ ಆಯ್ಕೆಯಾಗಿದ್ದಾರೆ. ಪ್ರತಿಸ್ಪರ್ಧಿ ಭರಮರೆಡ್ಡಿ ಮತ್ತು ಐ.ದಾರುಕೇಶ್ ಇವರಿಗೆ ತಲಾ ಐದೈದು ಮತಗಳು ಬಿದ್ದಿದ್ದು, ಸಮಾಂತರವಾಗಿ ಮತಗಳು ಬಿದ್ದು ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು, ನಂತರ ಚೀಟಿ ಎತ್ತುವುದರ ಮೂಲಕ ಐ.ದಾರುಕೇಶ್ ಆಯ್ಕೆಯಾಗಿದ್ದಾರೆಂದು ಚುನಾವಣಾಧಿಕಾರಿಗಳಾದ ಹೊಸಪೇಟೆ ತಹಶೀಲ್ದಾರರು ಘೋಷಿಸಿದ್ದಾರೆ. ಗೆಲುವಿನ ನಗೆ ಬೀರಿದ ಐ.ದಾರುಕೇಶ್ ಮಾತನಾಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಹಿತವನ್ನು ಕಾಯಲು ಸೂಕ್ತ ನಿರ್ದೇನಗಳನ್ನು ನೀಡಿ ಸಂಘದ ಏಳ್ಗೆಗೆ ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದು ಪತ್ರಿಕೆಗೆ ತಿಳಿಸಿದರು. ಈ ಸಂದರ್ಭದಲ್ಲಿ ಕೆ.ಪಿ.ಸಿ.ಸಿ. ಸದಸ್ಯರಾದ ಗೂಳಿ ಮಲ್ಲಿಕಾರ್ಜುನ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಅಡಕಿ ಮಂಜುನಾಥ್, ಚಿರಿಬಿ ಕೊಟ್ರೇಶ್, ಪ.ಪಂ. ಸ್ಥಾಯಿ ಸಮಿತಿ ಅಧ್ಯಕ್ಷರಾದ ತೋಟದ ರಾಮಣ್ಣ, ಕಾಂಗ್ರೆಸ್ ಮುಖಂಡರಾದ ಆಚೆಮನಿ ಮಲ್ಲಿಕಾರ್ಜುನ, ಅಶೋಕ್, ಶಿವಕುಮಾರ ಗೌಡ ಹ್ಯಾಳ್ಯಾ ಬಡಿಗೇರ್ ಕೊಟ್ರೇಶ್ ಮುಂತಾದವರು ಗೆಲುವಿನ ನಗೆಯಲ್ಲಿ ಸಂಭ್ರಮಿಸಿದರು.

ಕಾಮೆಂಟ್‌ಗಳು

  1. ಕೊಟ್ಟೂರು ತಾಲೂಕಿನ ಕೊಟ್ಟೂರು ಪಟ್ಟಣದ ಸನ್ಮಾನ್ಯ ಶ್ರೀ ಐ .ದಾರುಕೇಶ್ ಅವರು ಬಿಡಿಸಿಸಿ ಬ್ಯಾಂಕಿಗೆ ನಿರ್ದೇಶಕರಾಗಿ ಆಯ್ಕೆ ಆಗಿದ್ದಕ್ಕೆ ಅವರಿಗೆ ತುಂಬಾ ತುಂಬಾ ಅಭಿನಂದನೆಗಳು .ಇಂತಿ ತಮ್ಮ ವಿಶ್ವಾಸಿ ,ವೀರಭದ್ರ ಅಂಬೇಡ್ಕರ್ ನಗರ ಕೊಟ್ಟೂರು ವಿಜಯನಗರ ಜಿಲ್ಲೆ ,ಜೈ ಭೀಮ್ ,ಜೈ ಮಾದಿಗ .

    ಪ್ರತ್ಯುತ್ತರಅಳಿಸಿ

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ