ನವರಾತ್ರಿಯ ಸಪ್ತಮಿಯ ದಿನ ಶ್ರೀ ದುರ್ಗಾದೇವಿ ಮಾತೆಯ "ಕಾಳರಾತ್ರಿ"ಅವತಾರ ವರದಿ -- ಮಂಜುನಾಥ್ ಕೋಳೂರು, ಕೊಪ್ಪಳ ಕೊಪ್ಪಳ ಅ- 22 : - ನವರಾತ್ರಿಯ ಸಪ್ತಮಿಯ ದಿನ ಶ್ರೀ ದುರ್ಗಾದೇವಿ ಮಾತೆಯ "ಕಾಳರಾತ್ರಿ"ಅವತಾರವನ್ನು ಪೂಜಿಸಲಾಗುತ್ತದೆ. ನವರಾತ್ರಿ ಸಪ್ತಮಿ ದಿನದಂದು ನಗರದ 25ನೇ ವಾರ್ಡಿನ ಶ್ರೀ ಗೋವಿಂದರಾಜ್ ಗುಡಿ ಆವರಣದಲ್ಲಿ ಪ್ರತಿಷ್ಠಾಪಿಸಿರುವ ಶ್ರೀ ದುರ್ಗಾ ಮಾತೆಗೆ ಸೀರೆ ಉಡಿಸಿ ,ವಸ್ತ್ರಾಲಂಕಾರ ಮಾಡಿ ದೇವಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ನಗರದ ನಿವಾಸಿಗಳಾದ ರಾಧಾ ಚಲವಾದಿ , ಶಾರದಾ ಗೊಂಡಬಾಳ ನೆರವೇರಿಸಿದರು.

ಕಾಳರಾತ್ರಿಯ ದುರ್ಗಾ ಮಾತೆಗೆ ನೋಡಲು ಭಯಂಕರಿಯಾದರೂ ಭಕ್ತರ ಪಾಲಿಗೆ ಈಕೆ ಶುಭಂಕರಿ. ಜಗದಲ್ಲಿನ ಅಂಧಕಾರವನ್ನು ಕಳೆದು ಬೆಳಕನ್ನು ನೀಡುವವಳು , ದುರ್ಗಾ ದೇವಿಯ 7ನೇ ರೂಪವಾದ ಕಾಳರಾತ್ರಿಯು ಮೂರು ಭಯಾನಕ ಕಣ್ಣುಗಳನ್ನು ಮತ್ತು 4 ಕೈಗಳನ್ನು ಹೊಂದಿದ್ದಾಳೆ. ಈಕೆಯು ತನ್ನ ಮೇಲಿನ ಬಲಗೈ ವರದ ಮುದ್ರೆಯಲ್ಲಿದೆ ಮತ್ತು ಕೆಳಗಿನ ಬಲಗೈ ಅಭಯ ಮುದ್ರೆಯಲ್ಲಿದೆ. ಎಡಭಾಗದಲ್ಲಿರುವವರು ಒಂದು ಕೈಯಲ್ಲಿ ಕಬ್ಬಿಣದ ಮುಳ್ಳುಗಳಂತಿರುವ ಆಯುಧವನ್ನು ಮತ್ತು ಇನ್ನೊಂದು ಕೈಯಲ್ಲಿ ಖಡ್ಗವನ್ನು ಹಿಡಿದುಕೊಂಡು ಕತ್ತೆಯ ಮೇಲೆ ಸವಾರಿ ಮಾಡುತ್ತಾಳೆ. ಘೋರ ಕಪ್ಪು ಮೈಬಣ್ಣವನ್ನು ಹೊಂದಿರುವ ಈಕೆ, ಬಿಚ್ಚಿದ ದಟ್ಟ ತಲೆಕೂದಲು, ಕೊರಳಲ್ಲಿ ರುಂಡ ಮಾಲೆ, ಬಾಯಲ್ಲಿ ಉರಿಯುವ ಬೆಂಕಿಯನ್ನು ಹೊಂದಿದ್ದಾಳೆ. 

ಪುರಾಣಗಳ ಪ್ರಕಾರ, ಕಾಳರಾತ್ರಿ ದೇವಿಯು ಶುಂಭ, ನಿಶುಂಭರನ್ನು ಸಂಹಾರ ಮಾಡಲು ಈ ರೂಪವನ್ನು ತೆಗೆದುಕೊಂಡಳು ಎಂದು ಪುರಾಣಗಳಲ್ಲಿ ಹೇಳಲಾಗುತ್ತದೆ.ಕಾಳರಾತ್ರಿ ದೇವಿಯನ್ನು ಪೂಜಿಸುವುದರಿಂದ ವ್ಯಕ್ತಿಯು ಸಕಲ ಸಿದ್ಧಿಗಳನ್ನು ಹೊಂದುತ್ತಾನೆ ಎನ್ನುವ ನಂಬಿಕೆಯಿದೆ.ತಾಯಿಯ ಮೇಲಿನ ಭಕ್ತಿಯು ದುಷ್ಟರನ್ನು ನಾಶಪಡಿಸುತ್ತದೆ ಮತ್ತು ಎಲ್ಲಾ ರೀತಿಯ ಗ್ರಹಗಳ ಅಡೆತಡೆಗಳನ್ನು ನಿವಾರಿಸುತ್ತದೆ.ತಾಯಿ ಕಾಳರಾತ್ರಿಯ ಮಂತ್ರವನ್ನು ಪಠಿಸುವುದರಿಂದ ನಮ್ಮ ಮನಸ್ಸಿನಲ್ಲಿರುವ ಭಯವು ದೂರವಾಗಿ ಧೈರ್ಯ ತುಂಬಿಕೊಳ್ಳುತ್ತದೆ. ಕಾಳರಾತ್ರಿಯ ಪೂಜಾ ಮಂತ್ರಗಳು ಭಕ್ತರನ್ನು ಕಷ್ಟ ಕಾಲದಲ್ಲಿ ಕಾಪಾಡುತ್ತದೆ. ಮತ್ತು ಯಾವತ್ತೂ ಸೋಲದಂತೆ ಕಾಯುತ್ತದೆ. ಶನಿ ಅಥವಾ ಗ್ರಹ ಪೀಡೆಗಳಿದ್ದರೆ ತಾಯಿ ಕಾಳರಾತ್ರಿಯ ಪೂಜೆಯಿಂದ ನಿವಾರಣೆಯಾಗುತ್ತದೆ. ಭಗವತಿ ಕಾಳರಾತ್ರಿ ದೇವಿಯ ಆಶೀರ್ವಾದದಿಂದ ನಮ್ಮೆಲ್ಲರ ಕುಟುಂಬಕ್ಕೆ ಒಳ್ಳೆಯ ಧೈರ್ಯವನ್ನು ಕರುಣಿಸಲಿ ಮನಸ್ಸಿನಲ್ಲಿರುವ ಭಯಗಳನ್ನು ದೂರ ಮಾಡಿ ಸದಾಕಾಲ ರಕ್ಷಿಸಲಿ ಎಂದು ವಾರ್ಡಿನ ಸದಸ್ಯರಿಂದ ದೇವರಿಗೆ ಪೂಜೆಯನ್ನು ಸಲ್ಲಿಸಲಾಯಿತು .

 ಮಂಗಳವಾರ ಹಾಗೂ ಶುಕ್ರವಾರದಂದು ದೇವಿ ದರ್ಶನಕ್ಕೆ ಬಂದಂತ ಸಾರ್ವಜನಿಕ ಭಕ್ತಾದಿಗಳಿಗೆ ಗೋಧಿ ಹುಗ್ಗಿ -ಸಿರಾ ವಿವಿಧ ರೀತಿಯ ಸಿಹಿ ಪದಾರ್ಥಗಳು ಹಾಗೂ ಪುಳಿಯೋಗರೆ , ಪಲಾವು , ಅನ್ನ- ಸಾಂಬಾರ್ - ಬದನೆಕಾಯಿಪಲ್ಲೆ ಹೀಗೆ ವಿವಿಧ ಕ್ಯಾದೆಗಳ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು . ಪ್ರತಿದಿನ ಸಾಯಂಕಾಲ ದೇವಿ ದರ್ಶನಕ್ಕೆ 9 ದಿನಗಳ ವರೆಗೂ ಬರುವಂತಹ ಭಕ್ತಾದಿಗಳಿಗೆ ಒಂದೊಂದು ತರಹದ ಪ್ರಸಾದವನ್ನು ಭಕ್ತರಿಗೆ ಕೊಡಲಾಗುತಿದ್ದು ನವರಾತ್ರಿ ಹಬ್ಬದ ಎಂಟನೇ ದಿನವಾದ ಇಂದು ಶ್ರೀ ದುರ್ಗಾದೇವಿಯ ಶಾಂತ ರೂಪವಾದ ಮಹಾ ಗೌರಿಯನ್ನು ಪೂಜಿಸಲಾಯಿತು ಹಾಗೂ ಮಧ್ಯಾಹ್ನ ಸಾರ್ವಜನಿಕ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿದ್ದು ಶ್ರೀ ದುರ್ಗಾದೇವಿ ಮಿತ್ರ ಮಂಡಳಿಯ ಸದಸ್ಯರೆಲ್ಲರೂ ಸ್ವಯಂ ಪ್ರೇರಿತರಾಗಿ ದೇವಿಯ ದರ್ಶನಕ್ಕೆ ಬಂದಂತ ಸಾರ್ವಜನಿಕ ಭಕ್ತ ಸಮೂಹಕ್ಕೆ ಉತ್ಸಾಹದಿಂದ ಪ್ಲೇಟು- ಪ್ರಸಾದ -ನೀರು ಹೀಗೆ ಬಂದಂತ ಭಕ್ತಾದಿಗಳಿಗೆ ಯಾವುದೇ ತೊಂದರೆ ಆಗದ ರೀತಿಯಲ್ಲಿ ವಾಲೆಂಟರಿಯಾಗಿ ತಮಗೆ ವಹಿಸಿದ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಿದ್ದಾರೆ

 ಹಾಗೂ ಮಹಿಳಾ ಮುಖಂಡರುಗಳು ತಮಗೆ ವಹಿಸಿರುವ ದಿನನಿತ್ಯದ ನವರಾತ್ರಿಯ ನಾಡ ಹಬ್ಬದ ವಿಶೇಷತೆಯ ಒಂಬತ್ತು ದಿನಗಳು ಬೆಳಿಗ್ಗೆ ದೇವಿಗೆ ಆಯಾ ದಿನಗಳಿಗೆ ಸಂಬಂಧಿಸಿದ ಬೇರೆ ಬೇರೆ ಕಲರಿನ ವರ್ಣರಂಜಿತ ಸೀರೆಗಳನ್ನು ತೊಡಿಸಿ ದೇವಿಗೆ ನೈವೇದ್ಯ ಅರ್ಪಿಸಿ ಪೂಜೆ ವಿಧಿ ವಿಧಾನವನ್ನು ನೆರವೇರಿಸುವುದು ಹಾಗೂ ವಾರ್ಡಿನ ಮಹಿಳಾ ಸುಮಂಗಲಿಯರಿಗೆ ಉಡಿ ತುಂಬುವ ಕಾರ್ಯಕ್ರಮವನ್ನು ಸ್ವಯಂ ಪ್ರೇರಿತರಾಗಿ ಅಚ್ಚುಕಟ್ಟಾಗಿ ನೆರವೇರಿಸುತ್ತಾರೆ. ಈ ಸಮಾರಂಭದಲ್ಲಿ ಮಂಡಳಿಯಿಂದ ನಡೆಸುತ್ತಿದ್ದ ಅನ್ನ ಸಂತರ್ಪಣೆ ಹಾಗೂ ಪ್ರಸಾದ ಕಾರ್ಯಕ್ರಮಕ್ಕೆ ದೇಣಿಗೆ ನೀಡಿರುವಂತಹ ದಾನಿಗಳಿಗೆ ಮಂಡಳಿ ವತಿಯಿಂದ ಸನ್ಮಾನಿಸಲಾಯಿತು. ನವರಾತ್ರಿಯ ಅಂಗವಾಗಿ ಒಂಬತ್ತು ದಿನಗಳವರೆಗೆ ಪುರಾಣ ಪ್ರವಚನಗಳನ್ನು ಏರ್ಪಡಿಸಲಾಗಿದ್ದು 

 ಈ ಕಾರ್ಯಕ್ರಮವನ್ನು ಸಿದ್ದಯ್ಯ ಸ್ವಾಮಿ ಶಾಸ್ತ್ರಿ ಹಿರೇಮಠರವರು ನೆರವೇರಿಸಿ ಕೊಡುತ್ತಿದ್ದಾರೆ . ಈ ಸಮಾರಂಭದಲ್ಲಿ ಶ್ರೀ ದುರ್ಗಾದೇವಿ ಮಿತ್ರ ಮಂಡಳಿಯ ಮುಖಂಡರಾದ , ಅಂಬರೀಶ್ ಪಾಟೀಲ, ಈರಣ್ಣ ಹೂಗಾರ್ ,ವಾರ್ಡಿನ ನಗರಸಭೆ ಸದಸ್ಯ ಅರುಣ್ , ಸಗಮೇಶ್ ದಿಂಡೂರ್ , ಶರಣು ಜವಳಿ , ಶರಣಯ್ಯ ಸ್ವಾಮಿ ಹಿರೇಮಠ ,ಶಿವಪ್ಪ ಲಂಗಟದ, ಸಂಗಯ್ಯ ಸ್ವಾಮಿ ಹಿರೇಮಠ್ , ಪ್ರಕಾಶ್ ದಿಂಡೂರ್, ಅನಿಲ್ ಬೇಲೂರ್, ವಿಜಯ ಜಿಗಜಿನಿ, ಶಿವಾನಂದ ಚೆನ್ನಿನಾಯ್ಕರ್ ,ದಯಾನಂದ್ ಬಣಕಾರ, ಶೇಷಣ್ಣ ಶಹಪುರ್, ಮಂಜುನಾಥ್ ಕೋಳೂರು ಮುಂತಾದವರು ಭಾಗವಹಿಸಿದ್ದರು. ಮಹಿಳಾ ಮುಖಂಡರಾದ ಶಾಂತದಿಂಡುರ್, ಕವಿತಾ ಹಿರೇಮಠ್, ಭವ್ಯ ಹೂಗಾರ್, ಶಕುಂತಲಾ ಹಾದಿಮನಿ , ಕವಿತಾ ಕೋಳೂರು , ಸರೋಜಮ್ಮ ಟೀಚರ್ , ರೇಣುಕಾ ಕೊಳೂರು, ಗಿರಿಜಮ್ಮ ಹೂಗಾರ್ , ರಾಧಾ ಚಲವಾದಿ , ಶಾರದಾ ಗೊಂಡಬಾಳ, ನೇತ್ರಾವತಿ ಹಳ್ಳಿ , ಶಿಲ್ಪ ಮುನ್ನೂರ್, ಸುನಿತಾ ಪರಪ್ ಗೌಡ್ರು , ಸುಮಾ ಚೆನ್ನಿ ನಾಯ್ಕರ್, ಸಾವಿತ್ರಿ ಕರ್ಕಿಹಳ್ಳಿ , ರೇಣುಕಾ ಲಂಗಟದ , ಶಿವಲೀಲಾ ಪಾಟೀಲ್, ಲಕ್ಷ್ಮವ್ವ ಕರ್ಕೆಹಳ್ಳಿ , ಮಂಜುಳಾ ಕವಲೂರ , ಪ್ರತಿಭಾ ಪರಪ್ಪಗೋಳ , ಪವಿತ್ರ ಕರ್ಕಿಹಳ್ಳಿ , ಹಾಗೂ ವಾರ್ಡಿನ ಚಿಕ್ಕ ಮಕ್ಕಳು, ಹಿರಿಯರು, ವೃದ್ಧರು ಮುಂತಾದವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ