112 ತುರ್ತು ದೂರವಾಣಿ ಬಗ್ಗೆ ಅರಿವು ಮೂಡಿಸುದ ಪೊಲೀಸ್ ಸಿಬ್ಬಂದಿ ಹೆಚ್ ದುರುಗೇಶ್ ಅವರಿಗೆ ಸಾರ್ವಜನಿಕರು ಮೆಚ್ಚಿಗೆ
*ಪೊಲೀಸ್ ಇಲಾಖೆಯ112 ತುರ್ತು ದೂರವಾಣಿ ಬಗ್ಗೆ ಸಾರ್ವಜನಿಕರಿಗೆ ಅರಿವು*
ಕೊಟ್ಟೂರು :ಪಟ್ಟಣದ ಸಿ ಪಿ ಎಡ್. ಕಾಲೇಜಿನ ಮೈದಾನದಲ್ಲಿ ಪೊಲೀಸ್ ಸಿಬ್ಬಂದಿ ವರ್ಗದವರು ಗುರುವಾರ ಯುವಕರಿಗೆ 112 ತುರ್ತು ದೂರವಾಣಿಯ ಬಗ್ಗೆ ಹೆಚ್ ದುರುಗೇಶ್ ರವರು ಅರಿವು ಮೂಡಿಸಿದರು.
ಈ ಸಮಯದಲ್ಲಿ ಮಾತನಾಡಿದ ಅವರು 112 ತುರ್ತು ದೂರವಾಣಿ ಸಂಖ್ಯೆಯು ಪೊಲೀಸ್, ಅಗ್ನಿಶಾಮಕ ,ಆಂಬುಲೆನ್ಸ್ ಮತ್ತು ವಿಪತ್ತು ಕಂಡುಬಂದರೆ ಯಾವುದೇ ಸಮಯದಲ್ಲಾದರೂ ಕೂಡ ತಲುಪಲು ಸ್ಥಿರ ದೂರವಾಣಿ ಸಂಖ್ಯೆಯಾಗಿರುತ್ತದೆ,
ಹಾಗೂ ನಿಮ್ಮ ಮಿತ್ರನಾಗಿ 24/7 ತುರ್ತು ಪ್ರತಿಕ್ರಿಯೆ ಬೆಂಬಲ ವ್ಯವಸ್ಥೆ ನೀಡುತ್ತದೆ. ನೀವು ಮಾಡಿರುವಂತಹ ಕರೆಯು 15 ಸೆಕೆಂಡಿನಲ್ಲಿ ಸ್ವೀಕರಿಸುತ್ತಾರೆ. ಮತ್ತು ತ್ವರಿತ ಪರಿಹಾರ ವದಗಿಸುತ್ತದೆಯಂದು ಅದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಿ ಹಾಗೂ ನಿಮ್ಮ ಜೊತೆಯಿರುವ ಎಲ್ಲರಿಗೂ ಇದರ ಬಗ್ಗೆ ಅರಿವು ಮೂಡಿಸುವಂತಹ ಕಾಳಜಿ ವಹಿಸಬೇಕೆಂದು.
ಹೆಚ್ ದುರುಗೇಶ್ ರವರು ತನ್ನ ಕಾರ್ಯನಿಷ್ಠೆ ಮೆರೆದು ಮೈದಾನದಲ್ಲಿರುವ ಯುವಕರ ಹಾಗೂ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರರಾದರು.
ಈ ಸಂಧರ್ಭದಲ್ಲಿ ಮೈದಾನದ ಕ್ರೀಡಾ ಆಟಗಾರರು, ಶಿವಕುಮಾರ ಶಿಕ್ಷಕರು ,ಉಪಸ್ಥಿತರಿದ್ದರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ