ದಲಿತ ಸಂರಕ್ಷ ಸಮಿತಿಯ ನೂತನ ಪದಾಧಿಕಾರಿಗಳ ಆಯ್ಕೆ
ಮಸ್ಕಿ : ಪಟ್ಟಣದಜಿಲ್ಲಾ ಸಮಿತಿಯಿಂದ ಸರ್ಕೀಟ್ ಹೌಸ್ ನಲ್ಲಿ ಸಭೆಯನ್ನುಏರ್ಪಡಿಸಲಾಗಿತ್ತು ಈ ಸಭೆಯಲ್ಲಿ ನೂತನ ತಾಲ್ಲೂಕು ಅಧ್ಯಕ್ಷರ ನೇಮಕಾತಿ ಮತ್ತು ತಾಲ್ಲೂಕಿನ ಸಮಸ್ಯೆಗಳ ಬಗ್ಗೆ ಚರ್ಚಿಸಲಾಯಿತು. ಈ ಸಂಧರ್ಭದಲ್ಲಿ ಎಲ್ಲರ ಒಪ್ಪಿಗೆ ಮೇರೆಗೆ ಮಸ್ಕಿ ತಾಲ್ಲೂಕ ಅಧ್ಯಕ್ಷರನ್ನು ಮತ್ತು ಇತರ ಪದಾದಿಕಾರಿಗಳನ್ನು ಸಂಘದ ಒಕ್ಕೋರಲಿನಿಂದ ನೇಮಕ ಮಾಡಲಾಯಿತು.
ಸರ್ಕೀಟ್ ಹೌಸ್ ನಲ್ಲಿ ಸಭೆಯನ್ನು ಏರ್ಪಡಿಸಿ ದಲಿತ ಸಂರಕ್ಷ ಸಮಿತಿಯ ನೂತನ ಪದಾಧಿಕಾರಿಗಳನ್ನು ಈ ಕೆಳಕಂಡಂತೆ ಆಯ್ಕೆ ಪ್ರಕ್ರಿಯೆ ಜರುಗಿತು.
ಮಸ್ಕಿ ತಾಲೂಕ ಅಧ್ಯಕ್ಷರಾಗಿ ಮರಿಸ್ವಾಮಿ ಬೆನಕನಾಳ, ಗೌರವಾಧ್ಯಕ್ಷರಾಗಿ ಶಿವಪ್ಪ ಸಂತೆಕೆಲ್ಲೂರ,ಕಾರ್ಯಾಧ್ಯಕ್ಷರಾಗಿ ವಿಜಯಕುಮಾರ ಹರ್ವಾಪೂರ,ಉಪಾಧ್ಯಕ್ಷರಾಗಿ ಲಕ್ಷ್ಮಣ ಕಡುಬೂರ, ಉಪಾಧ್ಯಕ್ಷರಾಗಿ ರವಿ ತೋರಣದಿನ್ನಿ,ಉಪಾಧ್ಯಕ್ಷರಾಗಿ ಹನುಮಂತ ಡಬ್ಬೇರಮಡು,ಉಪಾಧ್ಯಕ್ಷರು ಹುಲಗಪ್ಪ ನಂಜಲದಿನ್ನಿ, ಪ್ರಧಾನ ಕಾರ್ಯದರ್ಶಿಯಾಗಿ ಆಂಜನೇಯ ಮುರಾರಿಸಂ ಕಾರ್ಯದರ್ಶಿಯಾಗಿ ಗಾಬ್ರಿಯಲ್ಕಾರ್ಯದರ್ಶಿಯಾಗಿ ಭೀಮೇಶ ಜಿನ್ನಾಪೂರ,ಸಂ- ಕಾರ್ಯದರ್ಶಿಯಾಗಿ ಆನಂದ ತೋರದಿನ್ನಿ,ಸಂ ಕಾರ್ಯದರ್ಶಿಯಾಗಿ ರವಿ ಹೆಸರೂರ,ಖಜಾಂಚಿಯಾಗಿ ರಾಘವೇಂದ್ರ ವೆಂಕಟಾಪೂರ,
ಮಸ್ಕಿ ನಗರ ಘಟಕದ ಅಧ್ಯಕ್ಷರಾಗಿ ವೆಂಕಟೇಶ ಮುರಾರಿ,ಮೆದಿಕಿನಾಳ ಹೋಬಳಿ ಅಧ್ಯಕ್ಷರರಾಗಿ ಸುರೇಶ ನಾಗರಬೆಂಚಿಯನ್ನು ಸಂಘದ ಒಮ್ಮತದಿಂದ ಆಯ್ಕೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಹಿರಿಯ ದಲಿತ ಹೋರಾಟಗಾರ ರಾಜ್ಯ ಸಂಘಟನೆಯ ಉಪಾಧ್ಯಕ್ಷರು ಭೀಮರಾಯ ಬಳಗಾನೂರ. ರಾಜ್ಯ ಕಾನೂನು ಸಲಹೆಗಾರರು ಮಲ್ಲಪ್ಪ ನಾಗರಬೆಂಚಿ. ಜಿಲ್ಲಾ ಅಧ್ಯಕ್ಷರು ಬಾಲಸ್ಬಾಮಿ ಜಿನ್ನಾಪೂರ. ಉಪಾಧ್ಯಕ್ಷರು ಮೌನೇಶ ಬಳಗಾನೂರ, ಸಿದ್ದಪ್ಪ ಹೂವಿನ ಭಾವಿ, ಅಮರಪ್ಪ ಡಬ್ಬೇರಮಡು, ಉಮೇಶ ಜವಳಗೇರಾ, ಚನ್ನಬಸವ ಕುಣೇಕೆಲ್ಲೂರ ಇನ್ನೂ ಮುಂತಾದವರು ಉಪಸ್ಥಿತರಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ