ಮದಕರಿ ನಾಯಕರ ಆಡಳಿತಾವಧಿಯಲ್ಲಿ ಏಳಿಗೆಗೆ ಒತ್ತು
ಕಾನ ಹೊಸಹಳ್ಳಿ: ಚಿತ್ರದುರ್ಗದ ಪಾಳೇಗಾರರಾಗಿದ್ದ ಮದಕರಿ ನಾಯಕರು ತಮ್ಮ ಆಡಳಿತಾವಧಿಯಲ್ಲಿ ನಾಯಕರ ಏಳಿಗೆಗೆ ಒತ್ತು ನೀಡಿದ್ದರು. ಅಂತಹವರನ್ನು ಸ್ಮರಿಸುತ್ತಿರುವುದು ಸಂತಸದ ವಿಚಾರ ಎಂದು ಶ್ರೀ ಶರಣಬಸವೇಶ್ವರ ಪ್ರೌಢಶಾಲಾ ಮುಖ್ಯಶಿಕ್ಷಕ ಎಸ್.ಬೊಮ್ಮಯ್ಯ ಹೇಳಿದರು. ಇಲ್ಲಿನ ಕಾನಹೊಸಹಳ್ಳಿ ಮದಕರಿ ವೃತ್ತದಲ್ಲಿ ವಾಲ್ಮೀಕಿ ಯುವಕರ ಸಂಘದಿಂದ ಶುಕ್ರವಾರ ಆಯೋಜಿಸಿದ್ದ ಮದಕರಿ ನಾಯಕ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಚಿತ್ರದುರ್ಗದ ನಾಯಕರ ಕಲ್ಲಿನ ಕೋಟೆ, ಉಕ್ಕಿನ ದೇಹವನ್ನು ಹೊಂದಿದಂತ ರಾಜಾಧಿ ರಾಜರುಗಳಲ್ಲಿ ಶ್ರೀ ರಾಜಾ ವೀರ ಮದಕರಿ ನಾಯಕರು ಅತ್ಯಂತ ಬಲಿಷ್ಠನು ಹಾಗೂ ಉತ್ತಮ ರಾಜನಾಗಿದ್ದನು, ಹೈದರಾಲಿಯ ವಿರುದ್ಧ ಹೋರಾಡಿ ಕೆಚ್ಚೆದೆಯ ವೀರರು ಅವರು ಎಂದು ಹೇಳಿದರು.
ಈ ವೇಳೆ ಗ್ರಾ.ಪಂ ಅಧ್ಯಕ್ಷ ಎ.ಸಿ. ಚೇತನ್, ಉಪಾಧ್ಯಕ್ಷರಾದ ನೇತ್ರಾವತಿ ಮಂಜುನಾಥ್, ಪಿ ಎಸ್ ಐ ಎರಿಯಪ್ಪ ಅಂಗಡಿ, ಎ.ಎಸ್. ಐ ಗೋವಿಂದಪ್ಪ, ಹಿರಿಯ ಮುಖಂಡರಾದ ಬಿ . ಪಿ. ಚಂದ್ರಮೌಳಿ, ಕೆಂಚಪ್ಪ, ಮುಖ್ಯ ಗುರುಗಳಾದ ಬೊಮ್ಮಯ್ಯ, ಕೆ.ಜಿ. ನಾಗರಾಜ್, ಕುಲುಮೆಹಟ್ಟಿ ವೆಂಕಟೇಶ್, ಕಿಟ್ಟಪ್ಪರ ವೀರೇಶ್, ಯು. ನಾಗೇಶ್, ನಿಜಲಿಂಗಪ್ಪ, ವಿಭೂತಿ ಸಿದ್ದಪ್ಪ, ಗುರುಸಿದ್ದಯ್ಯ, ತೋಪಿನ ಬೊಮ್ಮಯ್ಯ, ಕತ್ತೇರು ಬೋರಪ್ಪ, ತಿಪ್ಪೆರುದ್ರಪ್ಪ, ಕತ್ತೇರು ನಾಗರಾಜ್, ರಾಕೇಶ್ ವಾಲ್ಮೀಕಿ, ಅಮಲಾಪುರದ ಅಂಜಿನಪ್ಪ, ಶಾಮಿಯಾನ ಹನುಮಂತಪ್ಪ ಸೇರಿದಂತೆ ವಾಲ್ಮೀಕಿ ಸಮಾಜದ ಮುಖಂಡರು, ಸಾರ್ವಜನಿಕರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ