ಹಿರೇನಗನೂರಿನ ಫಾತಿಮಾ ಮಾತೆಯ ವಾರ್ಷಿಕ ಮಹೋತ್ಸವ.ಸುದೀರ್ಘ 94 ವರ್ಷಗಳ ಇತಿಹಾಸ.ಭಕ್ತಿಯಲ್ಲಿ ಮಿಂದೆದ್ದ ಭಕ್ತಗಣ.
ಲಿಂಗಸುಗೂರು : ತಾಲೂಕಿನ ಹಟ್ಟಿ ಚಿನ್ನದ ಗಣಿ ಸಮೀಪದ. ಹಿರೇನಗನೂರು ಗ್ರಾಮದ. ಪಾಲಕಿಯಾದ ಫಾತಿಮಾ ಮಾತೆಯ ವಾರ್ಷಿಕ ಮಹೋತ್ಸವಕ್ಕೆ ತುಂಬು ಹೃದಯದಿಂದ ಧರ್ಮ ಕೇಂದ್ರದ ಗುರುಗಳಾದ ಒಂದನೆಯ ಸ್ವಾಮಿ ಜೋಬ್ ಟಿ ಶುಭ ಕೋರಿದರು.
ಹಿರೇನಗನೂರು ಧರ್ಮಕೇಂದ್ರದ 1928 ರಿಂದ 2023 ವರಗೆ ನಡೆದು ಬಂದ ಹಾದಿ.ಧರ್ಮಕೇಂದ್ರದ ಕರಣ್ ಕುಮಾರ್ ಕಡೆಮನಿ ಹಿರೇನಗನೂರು ಧರ್ಮ ಕೇಂದ್ರದ ಸಂಕ್ಷಿಪ್ತ ಇತಿಹಾಸವನ್ನು ಪರಿಚಯಿಸಿದರು
ನಮ್ಮ ಈ ಧರ್ಮ ಕೇಂದ್ರ ಕ್ರಿಸ್ತಶಕ 1928ರಲ್ಲಿ. ಹಿರೇನಗನೂರು ಗ್ರಾಮದ ಸುಮಾರು 40 ಜನ ಹಿರಿಯರು ಒಟ್ಟುಗೂಡಿ ಒಮ್ಮತದಿಂದ ತೀರ್ಮಾನಕ್ಕೆ ಬಂದು. ಅಂದಿನ ದಿನಗಳಲ್ಲಿ ಮುದುಗಲ್ ನಲ್ಲಿ ನೆಲೆಸುತ್ತಿದ್ದ ಧರ್ಮ ಕೇಂದ್ರದ ಗುರುಗಳಾದ. ಪೂಜ್ಯ ಫಾದರ್ ಮೈಕಲ್ ಇವರನ್ನು ಭೇಟಿ ಮಾಡಿ. ನಮ್ಮೂರಿಗೆ ಬಂದು ರಕ್ಷಕರಾಗಿರುವ ಪ್ರಭು ಏಸುಕ್ರಿಸ್ತರನ್ನು ಪರಿಚಯಿಸಿ ತಮ್ಮನ್ನು ಕ್ರೈಸ್ತ ವಿಶ್ವಾಸದಲ್ಲಿ ನಡೆಸಬೇಕೆಂದು ವಿನಂತಿಸಿ ಕೊಂಡಾಗ. ಪೂಜಾ ಗುರುಗಳು ಒಪ್ಪಿಗೆ ಸೂಚಿಸಿ ನಿಗದಿತ ದಿನದಂದು ವಿಧಿವತ್ತಾಗಿ ಧರ್ಮ ಉಪದೇಶವನ್ನು ಪ್ರಾರಂಭಿಸಿದರು.
ಪ್ರಥಮವಾಗಿ ಸುಮಾರು 50ಕ್ಕೂ ಹೆಚ್ಚು ಜನರು ದೀಕ್ಷ ಸ್ಥಾನವನ್ನು ಪಡೆದು ರಕ್ಷಣೆ ಹಾದಿಯನ್ನು ಹಿಡಿದರು.
ಕ್ರಿಸ್ತಶಕ 1941 ರಲ್ಲಿ ಹಿರೇನಗನೂರನ್ನು ಸ್ವತಂತ್ರ ಧರ್ಮ ಪ್ರಚಾರಕ ಘಟಕವನ್ನಾಗಿ ಮಾಡಿ.ಪೂಜ್ಯ ಫಾದರ್ ಮೈಕಲ್ ರವರು ಇದೇ ಗ್ರಾಮದಲ್ಲಿ ವಾಸ್ತವ್ಯ ಹೂಡಿದರು.ಮತ್ತು ಇಲ್ಲಿಂದಲೇ ಹಟ್ಟಿ ಕ್ರೈಸ್ತ ಭಕ್ತರ ಪಾಲನಾ ಸೇವೆ ಮಾಡುತ್ತಿದ್ದರು.ಕ್ರಿಸ್ತಶಕ 1951 ರಲ್ಲಿ ಪೂಜಾ ಫಾದರ್ ಅಂತೋನಿ ಪುತಂಗಲ್ ಧರ್ಮ ಕೇಂದ್ರದ ಗುರುಗಳಾಗಿದ್ದಾಗ. ಧರ್ಮಧ್ಯಕ್ಷರಾದ ಪರಮಪೂಜ್ಯ ಜಾನ್ ಫಾರೆಸ್ಟ್ ಉಗನ್. ರವರು. ಹಿರೇನಗನೂರು ನಲ್ಲಿ ಕ್ರೈಸ್ತ ದೇವಾಲವನ್ನು ನಿರ್ಮಿಸಿ ಉದ್ಘಾಟನೆ ಮಾಡಿದರು.
ಸುದೀರ್ಘವಾಗಿ 94 ವರ್ಷಗಳ ಇತಿಹಾಸವಿರುವ ಹಿರೇನಗನೂರು ಧರ್ಮ ಕೇಂದ್ರದ ಭಕ್ತಾದಿಗಳಾದ ನಾವು ನಿಮ್ಮೆಲ್ಲರೊಡನೆ ಒಂದುಗೂಡಿ ನಮ್ಮ ಧರ್ಮ ಕೇಂದ್ರದ ಪಾಲಕಿಯದ ಫಾತಿಮಾ ಮಾತೇಯನ್ನು ವಂದಿಸುತ್ತ ನಮ್ಮ ಕ್ರೈಸ್ತ ವಿಶ್ವಾಸವನ್ನು ಸಂತೋಷದಿಂದ ಆಚರಿಸುತ್ತಿದ್ದೇವೆ.
ಈ ಸಮಯದಲ್ಲಿ ಈ ಧರ್ಮ ಕೇಂದ್ರದ ಬೆಳವಣಿಗೆಗೆ.ಹಿರೇನಗನೂರು ಧರ್ಮ ಕೇಂದ್ರಕ್ಕೆ ಸೇವೆ ಸಲ್ಲಿಸಿದ ಹತ್ತು ಜನ ಧರ್ಮ ಗುರುಗಳನ್ನು ಹಾಗೂ ಇತರೆ ಗುರುಗಳನ್ನು.ಧಾರ್ಮಿಕ ಸೋದರ ಸೋದರಿಯರನ್ನು.
ಉಪದೇಶಿಯರನ್ನು. ತುಂಬು ಹೃದಯದಿಂದ ನಿಮಗೆ ವಂದನೆಯನ್ನು ಸಲ್ಲಿಸುತ್ತೇವೆ. ಹಾಗೂ ಫಾತಿಮಾ ಮಾತೆಯಲ್ಲಿ ಪ್ರಾರ್ಥಿಸುತ್ತೇವೆ.
ಪ್ರತಿ ವರ್ಷ ಅಕ್ಟೋಬರ್ 13 ಮತ್ತು 14ರಂದು ಎರಡು ದಿನಗಳ ಕಾಲ ನಮ್ಮ ಧರ್ಮ ಕೇಂದ್ರದ ಪಾಲಾಕಿ ಫಾತಿಮಾ ಮಾತೆ ವಾರ್ಷಿಕ ಮಹೋತ್ಸವ ಆಚರಣೆ ಹಾಗೂ ಮಾತೆಯ ಆಶೀರ್ವಾದ ಸದಾ ನಮ್ಮ ಮೇಲೆ ಇರಲಿ ಎಂದು ಪ್ರಾರ್ಥಿಸುತ್ತೇವೆ.
ಹಬ್ಬದ ಮುಂಚಿನ ಮೂರು ದಿನಗಳ ಕಾಲ ನವೀನ ಪ್ರಾರ್ಥನೆ ಆದ್ದರಿಂದ ಮೂರು ದಿನಗಳ ಕಾಲ ಗ್ರಾಮದ ಧರ್ಮ ಕೇಂದ್ರದ ಆವರಣದಲ್ಲಿ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಕಾರ್ಯಕ್ರಮದ ಧ್ವಜಾರೋಣ ನೆರವೇರಿಸಲು ಒಂದನೆಯ ಫಾದರ್ ವಿಜಯರಾಜ ಗಂಟೆಯಾಳ ಕವಿತಾಳ ಧರ್ಮ ಕೇಂದ್ರದ ಗುರುಗಳು. ಹಾಗೂ ಎರಡನೆಯ ದಿನದ ಪ್ರಾರ್ಥನೆ ನಡೆಸಿಕೊಟ್ಟವರು ಫಾದರ್ ಸುಧೀರ್ ಕುಮಾರ್ ಮುದ್ದಾಪುರ ವಿಚಾರಣೆ. ಮೂರನೇ ದಿನದ ದಿವ್ಯಪೋಲಿ ಪೂಜಾ ಅರ್ಪಿಸಿದವರು ಫಾದರ್ ಆಲ್ಬರ್ಟ್ ಡಿ ಸಿಲ್ವ.
ಕೆ ಮರಿಯಮ್ಮನಹಳ್ಳಿ.ವಾರ್ಷಿಕ ಮಹೋತ್ಸವದ ದಿನವಾದ
13ನೇ ಅಕ್ಟೋಬರ್ ಫಾತಿಮಾ ಮಾತೆಯ ಹಬ್ಬದ ದಿವ್ಯ ಬಲಿ ಪೂಜೆ ಹಾಗೂ ಪ್ರಬೋಧನೆಯನ್ನು ಪೂಜ್ಯ ಫಾದರ್ ರಾಯಪ್ಪ ಜೆ ಕಂದಳ್ಳಿ. ಕಾರಟಗಿ ಧರ್ಮ ಕೇಂದ್ರದ ಗುರುಗಳು ಇವರು ಹಿರೇನಗನೂರು ಗ್ರಾಮ ಕೇಂದ್ರಕ್ಕೆ ಸೇವೆ ಸಲ್ಲಿಸಿದ. ಎಲ್ಲಾ ಗುರುಗಳನ್ನು. ಕನ್ಯಾಸ್ತ್ರಿಯರನ್ನು. ನೆನೆಯುತ್ತಾ ಹಾಗೂ ಹಿರೇನಗನೂರಿನ ಎಲ್ಲಾ ಭಕ್ತಾರಿಗೋಸ್ಕರ ದಿವ್ಯ ಬಲಿ ಪೂಜೆಯಲ್ಲಿ ಪ್ರಾರ್ಥನೆ ಸಲ್ಲಿಸಿದರು.
ನಂತರ ಸಂಜೆ 7 ಗಂಟೆಗೆ ವಿಶೇಷವಾಗಿ ಐದು ಭವ್ಯ ತೇರುಗಳ ಮೆರವಣಿಗೆ ಗ್ರಾಮದ ಪ್ರಮುಖ ರಸ್ತೆ ಮೂಲಕ ಭಜನೆ ಪೂಜೆ. ಹಾಗೂ ಭಕ್ತಿಯಿಂದ ಜಪಸರ ಮಾಡುತ್ತಾ ದೇವರ ಧ್ಯಾನ ಮಾಡುತ್ತಾ ಭವ್ಯ ರಥೋತ್ಸವದಲ್ಲಿ ಭಾಗವಹಿಸಿ ತಮ್ಮ ಹರಕೆಯನ್ನು ಫಾತಿಮಾ ಮಾತೆಯ ಸನ್ನಿಧಿಗೆ ಸಮರ್ಪಿಸಿದರು.
ಈ ವಾರ್ಷಿಕ ಮಹೋತ್ಸವ ಯಶಸ್ವಿಯಾಗಲು ಶ್ರಮಿಸಿದ.ಹಿರೇನಗನೂರು ವಿಚಾರಣೆಯಗುರುಗಳಾದ ಫಾದರ್ ಜೋಬ್ ಟಿ. ಪಾಲನ ಸಮಿತಿ ಉಪಾಧ್ಯಕ್ಷರು.ಹಾಗೂ ಸದಸ್ಯರು.ಹಾರ್ದಿಕ ಸಮಿತಿ ಸದಸ್ಯರು.ಯುವ ಜನರು. ಹಿರಿಯರು. ಗ್ರಾಮದ ಭಕ್ತ ಜನರು. ಸುತ್ತಮುತ್ತಲಿನ ಗ್ರಾಮದ ಭಕ್ತವಿಶ್ವಾಸಿಗಳು.
ಈ ವಾರ್ಷಿಕ ಮಹೋತ್ಸವದಲ್ಲಿ ಭಾಗಿಯಾಗಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ