"ಕರ್ನಾಟಕ ಈಶಾನ್ಯ ಪದವೀಧರರ ನೊಂದಣಿಯ ಅಭಿಯಾನ"
ಕೊಟ್ಟೂರು:ಕರ್ನಾಟಕ ಈಶಾನ್ಯ ಪದವೀಧರರ ಮತಕ್ಷೇತ್ರದ ಮತದಾರರ ನೊಂದಣಿ ಕಾರ್ಯಕ್ರಮ ಈಗಾಗಲೇ ಪ್ರಾರಂಭವಾಗಿದ್ದು, ಮಾನ್ಯತೆ ಪಡೆದ ವಿಶ್ವವಿದ್ಯಾಯದಿಂದ ದಿನಾಂಕ: 01.11.2020 ಕ್ಕಿಂತ ಹಿಂದೆ ಪದವೀಧರರಾಗಿರುವವರು ನಮೂನೆ-18ರ ಅರ್ಜಿಯನ್ನು ಭರ್ತಿ ಮಾಡಿ
2 ಭಾವಚಿತ್ರ, ಪದವಿಯ ಅಂಕಪಟ್ಟಿ, ವಿಳಾಸದ ಗುರುತಿನ ಚೀಟಿ, ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿಯ(ವೋಟರ್ ಐಡಿ) ದಾಖಲೆಗಳನ್ನು ಸ್ವಯಂ ದೃಢೀಕರಿಸಿ ಹಾಗೂ ಗೆಜಿಟೆಡ್ ಅಧಿಕಾರಿಗಳಿಂದ ದೃಢೀಕರಿಸಿ ದಿನಾಂಕ: 06.11.2023 ರೊಳಗೆ ತಹಶೀಲ್ದಾರರು ಹಾಗೂ ಸಹಾಯಕ ಮತದಾರರ ನೊಂದಣಾಧಿಕಾರಿಗಳು, ಕೊಟ್ಟೂರು ಇವರಿಗೆ ಸಲ್ಲಿಸಬಹುದಾಗಿದೆ.
ಹಾಗೂ ದಿನಾಂಕ: 17.10.2023, 26.10.2023 ಹಾಗೂ 30.10.2023 ರಂದು ಕರ್ನಾಟಕ ಈಶಾನ್ಯ ಪದವೀಧರ ಮತಕ್ಷೇತ್ರದ ಮತದಾರರ ನೊಂದಣಿಯ ವಿಶೇಷ ಅಭಿಯಾನವನ್ನು ಹಮ್ಮಿಕೊಂಡಿದ್ದು, ಅರ್ಹ ಪದವೀಧರರು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮತದಾರರ ನೊಂದಣಿ ಮಾಡಿಸಿಕೊಳ್ಳುವಂತೆ ಹಾಗೂ ತಾಲೂಕಿನಲ್ಲಿ ಯಾವುದೇ ಪದವೀಧರ ಮತದಾರರು ನೊಂದಣಿಯಿಂದ ವಂಚಿತರಾಗದೇ ನೊಂದಾಯಿಸಿಕೊಳ್ಳುವಂತೆ ಕೊಟ್ಟೂರು ತಹಶೀಲ್ದಾರರಾದ ಕಾರ್ತಿಕ ವಿ ಇವರು ಪದವೀಧರ ಮತದಾರರಲ್ಲಿ ಈ ಮೂಲಕ ಕೋರಿರುತ್ತಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ