ಹಗರಿಬೊಮ್ಮನಹಳ್ಳಿ ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಶಿವಮೂರ್ತಿ ನಿವೃತ್ತಿ ಇಂಜಿನಿಯರ್‌ಗೆ ೨.0೩ ಕೋಟಿ ಲಕ್ಷ ಪಂಗನಾಮ ಹಾಕಿದ ವಂಚಕರು
ಕೊಟ್ಟೂರು: ಕಳೆದ ವಿಧಾನ ಸಭೆ ಚುನಾವಣೆಯ ಹಗರಿಬೊಮ್ಮನಹಳ್ಳಿ ಎಸ್‌ಸಿ ಮೀಸಲಾತಿ ಕ್ಷೇತ್ರಕ್ಕೆ ಟಿಕೆಟ್ ಕೊಡಿಸುವುದಾಗಿ ಶಿವಮೂರ್ತಿ ಎಂಬವರಿಗೆ ಬರೊಬ್ಬರಿ ೨.೩ ಕೋಟಿ ರೂಪಾಯಿಗಳು ವಂಚನೆಗೊಳಿಸಿರುವ ಪ್ರಕರಣ ಇದೀಗ ಬೆಳಕಿಗೆ ಬಂದಿದೆ.
ಈ ಪ್ರಕರಣವು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪ್ರಮುಖ ಆರೋಪಿಗಳಾದ ಬೆನಕನಹಳ್ಳಿ ರೇವಣಸಿದ್ದಪ್ಪ ಹಾಗೂ ಪುತ್ತೂರಿನ ಎನ್.ಪಿ. ಶೇಖರ ಇವರಿಬ್ಬರ ವಿರುದ್ಧ ದೂರು ದಾಖಲಾಗಿರುತ್ತದೆ. ಆದರೆ ಈ ಪ್ರಕಣದಲ್ಲಿ ಇನ್ನೂ ಅನೇಕ ವ್ಯಕ್ತಿಗಳ ಹೆಸರುಗಳು ಸಹ ಕೇಳಿ ಬಂದಿದ್ದು ಬೆಳಕಿಗೆ ಬರೋವುದು ಬಾಕಿ ಇದೆ. ಈ ಪ್ರಕಣದಲ್ಲಿ ಮೊದಲ ಆರೋಪಿಯಾಗಿರುವ ಬೆನಕನಹಳ್ಳಿ ರೇವಣಸಿದ್ದಪ್ಪನು ಹಾಲಿ ವಿಜಯನಗರ ಜಿಲ್ಲೆಯ ಜನಾರ್ದನ ರೆಡ್ಡಿಯ ನೂತನ ಪಕ್ಷದ ಜಿಲ್ಲಾಧ್ಯಕ್ಷನಾಗಿರುತ್ತಾನೆ. ಇನ್ನೊಂದು ಪಕ್ಷದ ಟಿಕೆಟ್ ಕೊಡಿಸುವುದು ಎಷ್ಟರ ಮಟ್ಟಿಗೆ ಸರಿ ಎಂದು ಸಾರ್ವಜನಿಕರಾದ ಪ್ರದೀಪ್ ಪ್ರಶ್ನೆಸಿದರು.
ಕೋಟ್-೦೧:
ಈ ವಂಚನೆ ಪ್ರಕರಣ ಈಗಾಗಲೇ ತನಿಖೆ ಹಂತದಲ್ಲಿದ್ದು, ಆರೋಪಿಗಳಿ ಪತ್ತೆಗಾಗಿ ತಂಡವನ್ನು ರಚಿಸಿದ್ದು, ಅತಿ ಶೀಘ್ರದಲ್ಲಿ ವಂಚಕರನ್ನು ಬಂದಿಸುತ್ತೇವೆ.
ಜಿಲ್ಲಾ ವರಿಷ್ಠಾಧಿಕಾರಿಗಳು, ವಿಜಯನಗರ ಜಿಲ್ಲೆ.
ಕೋಟ್-೦೨
ನನಗಾದ ವಂಚನೆಯ ಪ್ರಕರಣವನ್ನು ಕೊಟ್ಟೂರು ಠಾಣೆಯಲ್ಲಿ ಪ್ರಕರಣವನ್ನು ದಾಖಲು ಮಾಡಿರುತ್ತೇನೆ. ಆದ್ದರಿಂದ ಅತಿ ಶೀಘ್ರದಲ್ಲಿ ವಂಚಕರನ್ನು ಪತ್ತೆ ಮಾಡಿ ನನಗೆ ನ್ಯಾಯ ದೊರಕಿಸಿಕೊಡಬೇಕೆಂದು ಅಧಿಕಾರಿಗಳಲ್ಲಿ ಕೇಳಿಕೊಳ್ಳುತ್ತಿದ್ದೇನೆ.ಹಾಗೂ ನನಗೆ ವಂಚಿಸಿದ ವಂಚಕರಲ್ಲಿ ಒಬ್ಬರಾದ ಪುತ್ತೂರ್ ಶೇಖರ ಕಡಿಯಿಂದ ೯೨ ಲಕ್ಷ ರೂಪಾಯಿಗಳ ಒಟ್ಟು ೦೩ ಚಕ್‌ಗಳನ್ನು ನನಗೆ ನೀಡಿದ್ದು, ಮುಂದಿನ ದಿನಗಳಲ್ಲಿ ಕಾನೂನು ರೀತಿ ಹೋರಾಟವನ್ನು ಮಾಡುತ್ತೇನೆ.
ಶಿವಮೂರ್ತಿ, ನಿವೃತ್ತ ಇಂಜಿನಿಯರ್, ವಂಚನೆಗೆ ಒಳಗಾದವರು
ಕೋಟ್-೦೩
ಕೋಟಿಗಟ್ಟಲೇ ಹಣಕೊಟ್ಟು ಆಯ್ಕೆಯಾಗುವ ಜನಪ್ರತಿನಿಧಿಗಳು, ಮರುಳಿ ಆ ಹಣವನ್ನು ಪಡೆಯದೇ ಇರುತ್ತಾರೆಯೇ? ಇಂದಿನ ದಿನಮಾನಗಳಲ್ಲಿ ರಾಜಕೀಯ ಎನ್ನುವುದು ಜನಗಳ ಸೇವೆಯಾಗಿ ಉಳಿದಿಲ್ಲ. ಕೇವಲ ಪಕ್ಷದ ಟಿಕೆಟ್ ಪಡೆಯುವುದಕ್ಕಾಗಿ ಕೋಟಿ-ಕೋಟಿ ಹಣ ಕೊಡಲು ಸಿದ್ದರಿರುವ ಇವರು? ಇವರ ಆದಾಯ ಎಷ್ಟಿರಬಹುದು? ನೀವೇ ಊಹಿಸಿಕೊಳ್ಳಿ?
ಜಿ.ಮಲ್ಲಿಕಾರ್ಜುನ
ಕಮೂನಿಸ್ಟ್ ಸಿಪಿಎಂಎಲ್ ಪಕ್ಷದ
ಕಾರ್ಯ
ದರ್ಶಿ, ಕೊಟ್ಟೂರು
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ