"ಉಜ್ಜಿನಿಯಲ್ಲಿ ಶ್ರೀ ಕಾಳಿಕಾದೇವಿ ವಿಶೇಷ ಅಲಂಕಾರ"

ಕೊಟ್ಟೂರು: ಶ್ರೀ ಕಾಳಿಕಾದೇವಿ ದೇವಸ್ಥಾನ ಉಜ್ಜಯಿನಿ ಭಾನುವಾರ ಬೆಳಗ್ಗೆ ಶ್ರೀ ಕಾಳಿಕಾ ದೇವಸ್ಥಾನದಲ್ಲಿ ಬೆಳಗ್ಗೆ ದೇವಿಗೆ ವಿಶೇಷ ಅಲಂಕಾರ ಅಭಿಷೇಕ ಪೂಜೆ ನೆರವೇರಿಸಿದರು.

ಧ್ವಜಾರೋಹಣ ನಂತರ ಗಣಪತಿ ಹೋಮದ ನಂತರ ಗಂಗಾ ಪೂಜೆ ಹಾಗೂ ಶ್ರೀ ಮರುಳಸಿದ್ದೇಶ್ವರ ದೇವಸ್ಥಾನದಿಂದ ಗ್ರಾಮದೇವಿ ವನಿತಾದೇವಿ ದೇವಸ್ಥಾನ ಮಾರ್ಗವಾಗಿ ರಥಭೇದಿ ಮುಖಾಂತರ ಶ್ರೀ ಕಾಳಿಕಾದೇವಿ ದೇವಸ್ಥಾನದವರೆಗೆ ಆದಿಶಕ್ತಿಯ ವಿಗ್ರಹದೊಂದಿಗೆ ಶೋಭಾಯಾತ್ರೆ ಯು ಜರುಗಿತು,

ನಂತರ ಅನ್ನಸಂತರ್ಪಣೆ ನೆರವೇರಿತು ಸಾಯಂಕಾಲ 6-30ಕ್ಕೆ ಸರಿಯಾಗಿ 44ನೇ ವರ್ಷದ ಶೋಭಾಕ್ಕೃತ್ ನಾಮ ಸಂವತ್ಸರದ ಶರನ್ನವರಾತ್ರಿ ಹಾಗೂ ದಸರಾ ಮಹೋತ್ಸವ ಮತ್ತು ಶ್ರೀದೇವಿ ಪುರಾಣ ಪ್ರವಚನ ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ನಿಂಗಮ್ಮ ಮಾರಪ್ಪ ಗ್ರಾಮ ಪಂಚಾಯತಿ ಅಧ್ಯಕ್ಷರು ಉಜ್ಜಯಿನಿ ಇವರು ನೆರವೇರಿಸಿಕೊಟ್ಟರು .

ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾನ್ಯ ಶ್ರೀ ನರೇಂದ್ರ ಗೌಡ ಹೃದಯ ರೋಗ ತಜ್ಞರು, ಉಜ್ಜಿನಿ ಇವರು ಮಾತನಾಡಿ ಮನಸ್ಸಿನ ನೆಮ್ಮದಿಗೆ ಆರೋಗ್ಯಕ್ಕೆ ಪುರಾಣ ಪ್ರವಚನ ಅವಶ್ಯಕತೆ ಹಾಗೂ ಹಲವಾರು ಕಾರಣಗಳಿಂದ ದಸರಾ ಉತ್ಸವವನ್ನು ಆಚರಿಸಲಾಗುತ್ತದೆ ಎಂದು ತಿಳಿಸಿದರು ಹಾಗೂ ಮಾನ್ಯ ಶ್ರೀ ಜಗದೀಶ ಚಂದ್ರ ಬೋಸ್ ಇವರು ಪುರಾಣ ಪ್ರವಚನದಿಂದ  ಮನಸ್ಸಿನ ಕೊಳೆಯನ್ನ ನಿವಾರಿಸಿಕೊಳ್ಳಬಹುದು ಎಂದು ತಿಳಿಸಿದರು 

ಈ ಕಾರ್ಯಕ್ರಮದಲ್ಲಿ  ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಶ್ರೀಮತಿ ಪುಷ್ಪಾವತಿ ರೇವಣ್ಣ ಬಾಬಣ್ಣ ಶೆಟ್ರು ತಿಮ್ಮಣ್ಣ ವಿಎಸ್ಎಸ್ ಅಧ್ಯಕ್ಷರು ಬಿ ಲೋಕೇಶ್ ಡಾಕ್ಟರ್ ವೆಂಕಟೇಶ್ ಆಚಾರ್ಯ ಉಪಸ್ಥಿತರಿದ್ದರು ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಿರ್ವಹಣಾ ಸಮಿತಿಯ ಅಧ್ಯಕ್ಷರಾದ ಶ್ರೀ ಬಿ ಯೋಗೀಶ್ ಆಚಾರ್ಯ ವಹಿಸಿದ್ದರು.

ಹಾಗೆ ದೇವಿ ಪುರಾಣ ಪ್ರವಚನಕಾರರಾದ ವಿದ್ವಾ ವಿದ್ವಾನ್ ಶ್ರೀ ಡಾII ಕೆ ವೃಷಭೇನ್ರಾಚಾರ್ಯಅವರು ದೇವಿ ಪುರಾಣ ಪ್ರವಚನ ಪ್ರಾರಂಭಿಸಿದರು ಹಾರ್ಮೋನಿಯಂ ವಾದಕರಾದ ವೀರೇಶ್ ಆಚಾರ್ಯ ತಬಲ ಬಿ ಈಶ್ವರಾಚಾರ್ಯ ಉಪಸ್ಥಿತರಿದ್ದರು. ಕಾರ್ಯಕ್ರಮದ ನಿರ್ವಹಣೆಯನ್ನು ಪುರೋಹಿತ್ ಸಿದ್ದೇಶ್ ಶರ್ಮ ನಡೆಸಿದರು ಕೊನೆಯಲ್ಲಿ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಕೊನೆಗೊಂಡಿತು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ