"ಟಿಕೆಟ್ ಕೊಡಿಸುವಂತೆ ನಂಬಿಸಿ 2 ಕೋಟಿ 3 ಲಕ್ಷ ವಂಚನೆ ಆರೋಪಿಯ ವ್ಯಕ್ತಿ ಬಂಧನ"

ರೇವಣಸಿದ್ದಪ್ಪ ಆರೋಪಿಯನ್ನು ಬಂಧಿಸುವಲ್ಲಿ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿಬಾಬು ತಂಡ ಯಶಸ್ವಿ 

ಕೊಟ್ಟೂರು:ಚೈತ್ರ ಕುಂದಾಪುರ ಪ್ರಕರಣ ತರಹದಂತೆ ಹಗರಿಬೊಮ್ಮನಹಳ್ಳಿ ವಿಧಾನ ಸಭಾ ಕ್ಷೇತ್ರದ 2023ರ ಚುನಾವಣೆಯ ಬಿಜೆಪಿ ಟಿಕೆಟ್ ಕೊಡಿಸುವಂತೆ ನಂಬಿಸಿ 2ಕೋಟಿ 3 ಲಕ್ಷ ರೂಪಾಯಿ ಹಣ ಪಡೆದುಕೊಂಡು ವಂಚನೆ ಮಾಡಿದ ಪ್ರಮುಖ ಆರೋಪಿ ಬೆನಕನಹಳ್ಳಿ ರೇವಣಸಿದ್ದಪ್ಪ ಎಂಬ ವ್ಯಕ್ತಿ ವಿರುದ್ಧ ವಂಚನೆಗೊಳಗಾದ ನಿವೃತ್ತ ಇಂಜಿನಿಯರ್ ಶಿವಮೂರ್ತಿ ರವರು ಕೊಟ್ಟೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದರು ಇದರ ಸಂಬಂಧ ಆರೋಪಿಯು ತಲೆಮಾರಿಸಿಕೊಂಡು ಪರಾರಿಯಾಗಿದ್ದನು ಈತನನ್ನು ಭೇದಿಸುವಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶ್ರೀ ಹರಿಬಾಬು ಹಾಗೂ ಕೂಡ್ಲಿಗಿ ಪೊಲೀಸ್ ಸರ್ಕಲ್ ಇನ್ಸ್ಪೆಕ್ಟರ್ ಸುರೇಶ್ ತಳವಾರ, ನೇತೃತ್ವದಲ್ಲಿನ ಸಬ್ ಇನ್ಸ್ಪೆಕ್ಟರ್ ಪ್ರಕಾಶ (ಗುಡೇಕೋಟೆ ) ಧನಂಜಯ (ಕೂಡ್ಲಿಗಿ ) ಕೊಟ್ಟೂರು ಪೊಲೀಸ್ ಠಾಣೆಯ ಪೇದೆಗಳಾದ ಬಸವರಾಜ್, ವಿರುಪಾಕ್ಷ ಗಡ್ಡಿ, ವಿರೇಶ್, ಆರಾಧ್ಯ, ಈ ತಂಡವು ಕಳೆದ ವಾರದಿಂದಲೂ ನಿರಂತರವಾಗಿ ಸಂಚಾರ ಕೈಗೊಂಡು ಆರೋಪಿ ರೇವಣಸಿದ್ದಪ್ಪ ನವರು  ಖಚಿತ ಮಾಹಿತಿ ಮೇರೆಗೆ ಶುಕ್ರವಾರ ರಾತ್ರಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ