ಉದ್ಯೋಗ ಖಾತ್ರಿ ಯೋಜನೆಯಡಿ ಮೇವು ಸಂಗ್ರಹಿಸುವಂತೆ: ರೈತ ಜಿ ಮಲ್ಲಿಕಾರ್ಜುನ್ ಆಗ್ರಹ
ಕೊಟ್ಟೂರು ತಾಲ್ಲೂಕು ವ್ಯಾಪ್ತಿ 14 ಗ್ರಾ.ಪಂ. ಹಾಗೂ ಕೊಟ್ಟೂರು ಕಂದಾಯ ಗ್ರಾಮದ ವ್ಯಾಪ್ತಿಯಲ್ಲಿ ಮುಂಗಾರು ಬಿತ್ತನೆಗಾಗಿ ಮೆಕ್ಕೆಜೋಳವನ್ನು 30.600 ಎಕ್ಟರ್ ಬಿತ್ತನೆ ಮಾಡಿದ ರೈತರು ಸಕಾಲದಲ್ಲಿ ಮಳೆಬಾರದೇ ಹಸಿ ಬರಗಾಲದಿಂದ ಸಂಪೂರ್ಣವಾಗಿ ಬೆಳೆ ಬಾರದೇ ಇದ್ದು ರಾಜ್ಯ ಸರ್ಕಾರ ಕೊಟ್ಟೂರು ತಾಲ್ಲೂಕನ್ನು ಬರಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡಿದ್ದು, ಮುಂದಿನ ವರ್ಷ ಮುಂಗಾರು ಮಳೆಯಾಗುವವರೆಗೆ ಜಾನುವಾರುಗಳಿಗೆ ಮೇವಿನ ತೊಂದರೆ ಆಗುವುದರಿಂದ ರೈತಾಪಿ ವರ್ಗದ ಎತ್ತು-ಆಕಳು-ಎಮ್ಮೆ ರಾಸುಗಳಿಗೆ ಮೇವು ಪೂರೈಕೆ ಮಾಡದೇ ತಮ್ಮ ಜೀವನಕ್ಕೂ ತೊಂದರೆ ಇರುವುದರಿಂದ ಕಸಾಯಿಖಾನೆಗಳಿಗೆ ಮಾರಾಟ ಮಾಡುವುದನ್ನು ತಪ್ಪಿಸಲು ಈ ಭಾಗದ ಶಾಸಕರು ಕೂಡಲೇ ಸರ್ಕಾರದ ಗಮನ ಸೆಳೆದು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸಗಾರರಿಗೆ ಮೇವು ಕಟಾವು ಮಾಡಿಸಿ ರಾಸು ಸಾಕಾಣಿಕೆ ಮಾಡುವವರಿಗೆ ಮೇವು ಪೂರೈಕೆ ಮತ್ತು ಆಯಾ ಗ್ರಾ.ಪಂ. ವ್ಯಾಪ್ತಿಯಲ್ಲಿ ಮೇವು ಸಂಗ್ರಹಾಗಾರ ಮಾಡಿದಲ್ಲಿ ಮಾತ್ರ ರಾಸುಗಳು ಹೈನುಗಾರಿಕೆ ಮಾಡುವವರಿಗೆ ಅನುಕೂಲ ಮಾಡಿದಂತಾಗುತ್ತದೆ.ಎಂದು ಕಮ್ಯುನಿಸ್ಟ್ ಪಾರ್ಟಿ ಸಿಪಿಎಂಎಲ್ ತಾಲೂಕು ಕಾರ್ಯದರ್ಶಿ ಜಿ ಮಲ್ಲಿಕಾರ್ಜುನ್ ಹೇಳಿದರು.
ರಾಜ್ಯ ಬಿ.ಜೆ.ಪಿ. ಘಟಕ ಆಯಾ ಜಿಲ್ಲಾ ಘಟಕಗಳ ಅಧ್ಯಕ್ಷರು ಹಲಾಲ್-ಜಟ್ಕಾ-ಗೋವು ಸಂರಕ್ಷಣೆ ಅಂತಾ ಬೊಬ್ಬೆ ಹೊಡೆಯುವುದು ಬಿಟ್ಟು ಲೋಕಸಭಾ ಸದಸ್ಯರುಗಳ ಅನುದಾನದಡಿ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಗ್ರಾ.ಪಂ. ಮಟ್ಟದಲ್ಲಿ ಮೇವು ಸಂಗ್ರಹಕ್ಕೆ ಆಯಾ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡುವ ಮೂಲಕ ಗೋವುಗಳ ಮೇಲಿನ ಪ್ರೀತಿ ಸಾಬೀತು ಮಾಡಲಿ ಎಂದು ಆಗ್ರಹಿಸಿದರು.
Super super idea
ಪ್ರತ್ಯುತ್ತರಅಳಿಸಿ