ಕೊಟ್ಟೂರಿನ ಉಜ್ಜಿನಿ ವೃತ್ತದಲ್ಲಿ ಬೃಹತ್ ವಾಲ್ಮೀಕಿ ಪುತ್ಥಳಿ ಪ್ರತಿಮೆ ಸ್ಥಾಪನೆಗೆ ಭರವಸೆ: ಶಾಸಕ ಕೆ ನೇಮಿರಾಜ್ ನಾಯ್ಕ
ಕೊಟ್ಟೂರಿನಲ್ಲಿ ಬೃಹತ್ ವಾಲ್ಮೀಕಿ ಭವನ ನಿರ್ಮಾಣಕ್ಕೆ: ಶಾಸಕ ನೇಮಿರಾಜ್ ನಾಯ್ಕ ಭರವಸೆ.
ಕೊಟ್ಟೂರು: ಪಟ್ಟಣದಲ್ಲಿ ನಡೆದ ಬೃಹತ್ ವಾಲ್ಮೀಕಿ ಜಯಂತಿ ಮೆರವಣಿಗೆಯ ನಿಮಿತ್ತ ಪ್ರಮುಖ ರಸ್ತೆಗಳಲ್ಲಿ ಡೊಳ್ಳು ವಿವಿಧ ವಾಧ್ಯಗಳ ಮೆರವಣಿಗೆಯಲ್ಲಿ ಕೆಲವೊತ್ತು ಶಾಸಕರು ಭಾಗವಹಿಸಿದ್ದರು.
ನಂತರ ಶನಿವಾರ ಮಹರ್ಷಿ ವಾಲ್ಮೀಕಿ ಜಯಂತಿ ಕಾರ್ಯಕ್ರಮದ ನಿಮಿತ್ತ ಕೊಟ್ಟೂರು ತಾಲೂಕು ವಾಲ್ಮೀಕಿ ಸಂಘ ಆಯೋಜಿಸಿದ್ದ ಮೆರವಣಿಗೆಯಲ್ಲಿದ್ದ ಮಹರ್ಷಿ ವಾಲ್ಮೀಕಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ಪಟ್ಟಣದ ಉಜ್ಜಿನಿ ವೃತ್ತದಲ್ಲಿ ವಾಲ್ಮೀಕಿ ಪುತ್ಥಳಿ ಪ್ರತಿಮೆಯನ್ನು ನಿರ್ಮಿಸಿ ಅಳವಡಿಸಲು ಸೂಕ್ತ ಕ್ರಮವನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳುವುದಾಗಿ ಸಮಾಜ ಬಾಂಧವರು ತಿಳಿಸಿದರು.
ಕೊಟ್ಟೂರು ತಾಲೂಕು ಕೇಂದ್ರದಲ್ಲಿ ಮಹರ್ಷಿ ವಾಲ್ಮೀಕಿ ನೂತನ ಬೃಹತ್ ಭವನ ನಿರ್ಮಾಣಕ್ಕೆ ಸೂಕ್ತ ಬಗೆಯ ಅನುದಾನ ಒದಗಿಸಿಕೊಡುತ್ತ ಎಲ್ಲಾ ಬಗೆಯ ನೆರವು ನೀಡುವೆ ಎಂದು ಶಾಸಕ ಕೆ.ನೇಮಿರಾಜ್‌ನಾಯ್ಕ ಭರವಸೆ ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಲ್ಲಿ ಜಿ.ಪಂ.ಮಾಜಿ ಸದಸ್ಯ ಎಂ.ಎಂ.ಜೆ.ಹರ್ಷವರ್ಧನ, ತಹಶೀಲ್ದಾರ್ ವಿ.ಕಾರ್ತಿಕ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ನಸುರುಲ್ಲಾ ಮತ್ತಿತರರು ಅವರೊಂದಿಗೆ ಇದ್ದರು. ವಾಲ್ಮೀಕಿ ಸಂಘದ ತಾಲೂಕು ಅಧ್ಯಕ್ಷ ಕೆ.ಮಂಜುನಾಥ ಕಾರ್ಯದರ್ಶಿ ನಾಗರಾಜ ಸುಂಕದಕಲ್ಲು, ಉಪಾಧ್ಯಕ್ಷ ಶಶಿಧರ ಕನ್ನಾಕಟ್ಟಿ, ಖಜಾಂಚಿ, ದೀಪಾ ಪ್ರಕಾಶ, ಮುಖಂಡರುಗಳಾದ, ಬಿಎಸ್ಆರ್ ಮೂಗಣ್ಣ, ಎಂ ಶ್ರೀನಿವಾಸ್, ಶಿರಿಬಿ ಕೊಟ್ರೇಶ್,ಕೆಂಚಪ್ಪ, ನಾಗೇಂದ್ರಪ್ಪ ಕೋವಿ, ಪಕ್ಕೀರಪ್ಪ ಹಂಪಾಪಟ್ಟಣ, ಬೆಣ್ಣಿಹಳ್ಳಿ ಅಂಜಿನಪ್ಪ, ನಾಗಣ್ಣ ಉಜ್ಜಿನಿ ಮತ್ತಿತರರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ