ಅರಮನೆ ನಗರದಲ್ಲಿ ಎಡದೊರೆ ನಾಡಿನ ಹುಡುಗರು ಮುಡಿಗೇರಿಕೊಂಡ ಮುಖ್ಯಮಂತ್ರಿ ಕಪ್

ಮಸ್ಕಿ : ರಾಯಚೂರು ಜಿಲ್ಲಾ ಪುರುಷರ ಖೋ ಖೋ ತಂಡ ಕಂಚಿನ ಪದಕ ಪಡೆಯುವ ಮೂಲಕ ರಾಯಚೂರು ಜಿಲ್ಲೆಯ ಇತಿಹಾಸದಲ್ಲೇ ಮೊದಲಬಾರಿಗೆ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಜಯ ಸಾಧಿಸಿ ಮುಖ್ಯಮಂತ್ರಿ ಕಪ್ ಗೆದ್ದು ಎಡದೊರೆ ನಾಡಿನ ಹುಡುಗರು ಮುಡಿಗೇರಿಕೊಂಡು ದಾಖಲೆ ಬರೆದಿದೆ ಎಂದು ರಾಯಚೂರು ಜಿಲ್ಲಾ ಅಮೆಚೂರ್ ಅಸೋಸಿಯೇಷನ್ ಪತ್ರಿಕೆಯ ಮೂಲಕ ಹರ್ಷ ವ್ಯಕ್ತಪಡಿಸಿದೆ.

ಮೈಸೂರಿನಲ್ಲಿ ದಸರಾ ಪ್ರಯುಕ್ತ ಅಕ್ಟೋಬರ್ 16 ರಿಂದ 21 ರವರೆಗೆ ಯುವ, ಸಬಲೀಕರಣ ಮತ್ತು ಕ್ರೀಡಾ ಇಲಾಖೆ,ಜಿಲ್ಲಾಡಳಿತ ಮೈಸೂರು ಹಾಗೂ ಬೆಂಗಳೂರಿನ ಕರ್ನಾಟಕ ಒಲಂಪಿಕ್ ಸಂಸ್ಥೆಯ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ದಸರಾ ಮುಖ್ಯಮಂತ್ರಿ ಕಪ್ ಕ್ರೀಡಾಕೂಟದಲ್ಲಿ ಎಡದೊರೆ ನಾಡು ಖ್ಯಾತಿಯ ರಾಯಚೂರು ಜಿಲ್ಲಾ ಪುರುಷರ ಖೋ ಖೋ ತಂಡ ಕಂಚಿನ ಪದಕ ಪಡೆಯುವ ಮೂಲಕ ರಾಯಚೂರು ಜಿಲ್ಲೆಯ ಇತಿಹಾಸದಲ್ಲೇ ಮೊದಲಬಾರಿಗೆ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಜಯ ಸಾಧಿಸಿ ಕಪ್ ಗೆದ್ದು ದಾಖಲೆ ಬರೆದಿದೆ ಹಾಗೂ ಈ ಕ್ರೀಡಾ ಕೂಟದಲ್ಲಿ ಮಸ್ಕಿ ತಾಲೂಕಿನ ವಿದ್ಯಾರ್ಥಿಗಳು ಭಾಗಿಯಾಗಿದ್ದು ವಿಶೇಷ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಹಾಗೇಯೇ ರಾಯಚೂರು ಜಿಲ್ಲೆಯ ಕೀರ್ತಿ ಹೆಚ್ಚಿಸಿದ ಖೋ ಖೋ ತಂಡಕ್ಕೆ ರಾಯಚೂರು ಜಿಲ್ಲಾ‌‌ ಖೋ ಖೋ ಅಮೆಚೂರ್ ಅಸೋಸಿಯೇಷನ್ ಅಧ್ಯಕ್ಷರಾದ,ಡಾ, ಮಲ್ಲಿಕಾರ್ಜುನ ಇತ್ಲಿ, ತಾಲೂಕು ಅಧ್ಯಕ್ಷರಾದ ಮೌನೇಶ ನಾಯಕ ಹಾಗೂ ಪದಾಧಿಕಾರಿಗಳಾದ ಅಮರೇಶ ಬ್ಯಾಳಿ, ಆನಂದ ದೇಶಮುಖ,ಮಸೂದ್ ಪಾಷಾ, ನಾಗರಾಜ್ ಯಂಬಲದ, ಶರಣಬಸವ ಸೊಪ್ಪಿಮಠ, ಮಹಾಂತೇಶ ಮಸ್ಕಿ, ಮಹಾಂತೇಶ ಗುಡದೂರು,ಆರ್,ಜೆ, ಪಾಟೀಲ್ ಶಿವರಾಜ್ ಇತ್ಲಿ, ವೀರೇಶ್ ಹಿರೇಮಠ್, ಮಲ್ಲಿಕಾರ್ಜುನ್ ಹಿರೇಮಠ್, ಭರತ್ ಕುಮಾರ್, ರಾಘವೇಂದ್ರ ಗುತ್ತೆದಾರ, ಹಾಗೂ ಸದಸ್ಯರು ಮಾರ್ಗದರ್ಶನ ಮಾಡಿದ ದೈಹಿಕ ಶಿಕ್ಷಣ ಶಿಕ್ಷಕರಾದ ಸಂಪತ್ ರವೀಂದ್ರ ಶಿವಪ್ಪ ಹಸಮಕಲ್ ಮೋಹನ್ ರಾಮಪ್ಪ,ಮಹೇಶ್ ಬಳಗಾನೂರು,ಬಸವರಾಜ ಸೇರಿದಂತೆ ಹಲವು ಕ್ರೀಡಾ ಪ್ರೇಮಿಗಳು ಸಾಧಕರಿಗೆ ಪತ್ರಿಕೆಯ ಮೂಲಕ ಅಭಿನಂದನೆಗಳನ್ನು ತಿಳಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ