*ಸರ್ಕಾರದ ಆದೇಶ ಗಾಳಿಗೆ ತೂರಿದ -ಸರಸ್ವತಿ*

ವಿಜಯನಗರ ಜಿಲ್ಲೆ, ಕೊಟ್ಟೂರು ತಾಲೂಕು ಕಂದಗಲ್ಲು ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಸರ್ಕಾರದ ಆದೇಶ ಗಾಳಿಗೆ ತೂರಿದ ಸರಸ್ವತಿ ಪ್ರಭಾರಿ ಪ್ರಾಂಶುಪಾಲರು ರಾಷ್ಟ್ರಕ್ಕಾಗಿ ಹೋರಾಟ ಮಾಡಿದ ಮಹಿಳೆ ಕಿತ್ತೂರಾಣಿ ಚೆನ್ನಮ್ಮ ಜಯಂತಿ ಸಮಯಕ್ಕೆ ತಕ್ಕಂತೆ ಮಾಡುವುದು ಬಿಟ್ಟು ಅವರಿಗೆ ಮನಸ್ಸಿಗೆ ಬಂದಂತೆ ಮಧ್ಯಾಹ್ನ 1:15 ಗಂಟೆಗೆ ಅವರ ಪೂಜೆ ತಡವಾಗಿ ಮಾಡಿದ್ದಾರೆ. 

ದೇಶಪ್ರೇಮದಿಂದ ಹೋರಾಡಿದ ಮಹಿಳೆ ಕಿತ್ತೂರ್ ರಾಣಿ ಚೆನ್ನಮ್ಮ ಜಯಂತಿಯನ್ನು ಮಾಡದೆ ಅವರಿಗೆ ಅಗೌರವ ತೋರಿದ ಸರ್ಕಾರಿ ಅಧಿಕಾರಿಗಳು ಇವರಿಗೆ ಕೇವಲ ಸರ್ಕಾರಿ ಸಂಬಳ ಮಾತ್ರ ಬೇಕು ಸರ್ಕಾರದ ಸುತ್ತೋಲೆಗಳು ಬೇಕಿಲ್ಲ ಎಂಬುದು ಒಂದು ಮಧ್ಯಾಹ್ನ ಗಂಟೆ ನಂತರ ಎರಡು ಗಂಟೆಗೆ ಪೂಜೆ ಸಲ್ಲಿಸಿದ್ದನ್ನು ನೋಡಿದರೆ ಸಾರ್ವಜನಿಕ ಕೆಲಸಗಳು ಹೇಗೆ ನಡೆಯಬಹುದು ಅದಲ್ಲದೆ ಮಕ್ಕಳಿಗೆ ಶಿಕ್ಷಣ ಹೇಗೆ ದೊರೆಯುತ್ತದೆ ಇವರ ಸೌಲಭ್ಯಗಳ ಬಗ್ಗೆ ಹೇಗಿರಬಹುದು ಎಂಬುದು ಮೇಲೆನೇ ತಿಳಿದು ಬರುತ್ತದೆ

ಸರ್ಕಾರದ ಆದೇಶದ ಪ್ರಕಾರ ಎಲ್ಲಾ ಶಾಲಾ ಕಾಲೇಜುಗಳಲ್ಲಿ ಸರ್ಕಾರಿ ಕಚೇರಿಗಳಲ್ಲಿ ಕಿತ್ತೂರು ರಾಣಿ ಚೆನ್ನಮ್ಮ ಜಯಂತಿ ಆಚರಣೆ ಮಾಡಬೇಕೆಂದು ಸರ್ಕಾರದ ಸುತ್ತೋಲೆಯನ್ನು ಗಾಳಿಗೆ ತೂರಿ ಮನಬಂದಂತೆ ನನಗೆ ಮನೆಯಲ್ಲಿ ಪೂಜೆ ಇತ್ತು ಅದು ಮುಗಿಸಿಕೊಂಡು ಬಂದು ಈಗ ಪೂಜೆ ಮಾಡಿದ್ದೀನಿ ನನ್ನಿಂದ ತಪ್ಪಾಗಿದೆ ಇನ್ನು ಮುಂದೆ ನಾನು ತಪ್ಪು ಮಾಡುವುದಿಲ್ಲ ಎಂದು ಸರಸ್ವತಿ ಪ್ರಾಂಶುಪಾಲರು ತಿಳಿಸಿದರು.

ಈ ಕಂದಗಲ್ಲು ಮುರಾರ್ಜಿ ವಸತಿ ಶಾಲೆಯಲ್ಲಿ ಇಂತಹದ್ದು ಹೊಸದೇನಲ್ಲ ಈ ಹಿಂದೆ ಎರಡು ಮೂರು ಬಾರಿ ಇದೇ ರೀತಿ ತಪ್ಪುಗಳು ಆಗಿದ್ದು ಸರಿಯಾಗಿ ಊಟ ತಿಂಡಿ ಕೊಡದೆ ಮಕ್ಕಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದೆ ಮಕ್ಕಳಿಗೆ ವಂಚನೆ ಮಾಡಿದ್ದಾರೆ ಎಂದು ಮತ್ತು ಇತರೆ ವಿಷಯಗಳ ಕುರಿತಾಗಿ ಹಿಂದೆ ಸುದ್ದಿ ಎಲ್ಲಿ ಬಂದರೂ ಇಲ್ಲಿನ ಅಧಿಕಾರಿಗಳಿಗೆ ಸಸ್ಪೆಂಡ್ ಮಾಡುವುದರ ಮೂಲಕ ಎಚ್ಚರಿಕೆ ಕೊಟ್ಟರು ಎಚ್ಚೆತ್ತುಕೊಳ್ಳದ ಶಿಕ್ಷಕರು ಹಾಗೂ ಸರ್ಕಾರಿ ಅಧಿಕಾರಿಗಳು ಇಂತಹ ಅಧಿಕಾರಿಗಳಿಗೆ ರಾಷ್ಟ್ರೀಯ ಹಬ್ಬಗಳ ತಾಲೂಕು ಅಧ್ಯಕ್ಷರಾದ ವಿ ಕಾರ್ತಿಕ್ ದಂಡಾಧಿಕಾರಿಗಳು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಪದ್ಮನಾಭಕರಣಂ ಹಾಗೂ ಕೆ ನೇಮಿರಾಜ್ ನಾಯ್ಕ್ ಶಾಸಕರು ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರ ಇವರು ಭಾರತ ಸ್ವತಂತ್ರದ ಪ್ರಪ್ರಥಮ ಮಹಿಳಾ ಹೋರಾಟಗಾರ್ತಿ ವೀರವನತೆ ಕಿತ್ತೂರು ರಾಣಿ ಚೆನ್ನಮ್ಮ ಇವರ ಮೇಲೆ ಯಾವ ರೀತಿ ಕಾಳಜಿ ಇದೆ ಎಂದು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಎಂಬುದು ಕಾದುನೋಡಬೇಕಾಗಿದೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ