ಬಾಬಾ ಸಾಹೇಬರ ತತ್ವ ಆದರ್ಶಗಳನ್ನು ಪ್ರಾಮಾಣಿಕವಾಗಿ ಪಾಲಿಸಿದಾಗ ಮಾತ್ರ ಸಂವಿಧಾನ ಸುಭದ್ರವಾಗಿರಲು ಸಾಧ್ಯ - ಎಲ್ಲಪ್ಪ ಹಳೆಮನೆ
ವರದಿ - ಮಂಜುನಾಥ್ ಕೋಳೂರು ಕೊಪ್ಪಳ
ಕೊಪ್ಪಳ ಅ 16 : - ಸಂವಿಧಾನ ಶಿಲ್ಪಿ ಡಾ. ಬಿ. ಆರ್ ಅಂಬೇಡ್ಕರ್ ಅವರು ತಿಳಿಸಿದಂತೆ ನಾವೆಲ್ಲರೂ ಮೊದಲು ಶಿಕ್ಷಣವನ್ನು ಪಡೆಯಬೇಕು. ನಾವು ಆಸ್ತಿಗಳಿಸುವುದಕ್ಕಿಂತ ನಮ್ಮ ಮಕ್ಕಳನ್ನು ವಿದ್ಯಾವಂತರನ್ನಾಗಿ ಶಿಕ್ಷಣದ ಆಸ್ತಿಯನ್ನಾಗಿಮಾಡಬೇಕು ಎಂದು ಕರ್ನಾಟಕ ದಲಿತ ಸಂಘರ್ಥ ಸಮಿತಿಯ( ಭೀಮವಾದ )ರಾಜ್ಯ ಸಂಘಟನೆ ಸಂಚಾಲಕ ಎಲ್ಲಪ್ಪಹಳೆಮನೆ ಹೇಳಿದರು. ವಿಜಯಪುರ ನಗರದ ಕಾಕಾ ಕಾರ್ಖಾನೆ ಸಭಾಭವನದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಭೀಮ ವಾದ ಜಿಲ್ಲಾ ಸಮಿತಿಯ ರಚನೆಯ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಾ ಸಮಾಜದಲ್ಲಿ ನಡೆಯುವ ಆಗುಹೋಗುಗಳ ಬಗ್ಗೆ ನಾವು ಹಾಗೂ ನಮ್ಮ ಮಕ್ಕಳು ಚಿಂತನ ಮಾಡುವ ಶಕ್ತಿ ಶಿಕ್ಷಣದಲ್ಲಿದೆ. ನಮ್ಮ ಸಮುದಾಯಕ್ಕೆ ಆಗುವ ಅನ್ಯಾಯವನ್ನು ತಡೆಯಲು ಸಾಧ್ಯ. ಆದ್ದರಿಂದ ನಾವು ಮೊದಲು ಶಿಕ್ಷಣಕ್ಕೆ ಹೆಚ್ಚು ಒತ್ತುಕೊಟ್ಟು ಮುಂದೆ ವಿದ್ಯಾವಂತರಾಗಿ ಸಮಾಜದ ಆಗುವ ಹೂವುಗಳಗಗಳ ಬಗ್ಗೆ ನಾವೆಲ್ಲರೂ ಸಂಘಟರಾಗಿ ಜಾಗೃತವಾಗಬೇಕಾಗಿದೆ . ನಮ್ಮ ಸಮುದಾಯದ ಜನಾಂಗಕ್ಕೆ ದೌರ್ಜನ್ಯ ದಬ್ಬಾಳಿಕೆಯಾದಾಗ ನೊಂದವರ ಪರವಾಗಿ ನಾವೆಲ್ಲರೂ ಒಗ್ಗಟ್ಟಿನ ಪ್ರದರ್ಶನ ಮಾಡಬೇಕಾಗುತ್ತದೆ ಆಗ ನೊಂದವರಿಗೆ ನ್ಯಾಯ ಸಿಗಲು ಸಾಧ್ಯ .ಆದ್ದರಿಂದ ಬಾಬಾ ಸಾಹೇಬರ ಆಸೆಗಳನ್ನು ಅವರ ಅನುಯಾಯಿಗಳಾದ ನಾವು ಪ್ರಾಮಾಣಿಕವಾಗಿ ಕಾರ್ಯರೂಪಕ್ಕೆ ತರಲು ನಾವೆಲ್ಲರೂ ಸಂಘಟಿತರ ರಾಗಬೇಕಾಗಿದೆ. ದೇಶದಲ್ಲಿ ಸಂವಿಧಾನ ಉಳಿಯಬೇಕಾದರೆ ನಾವೆಲ್ಲರೂ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ತತ್ವ ಆದರ್ಶಗಳನ್ನು ಪ್ರಾಮಾಣಿಕವಾಗಿ ಪಾಲಿಸಿದಾಗ ಮಾತ್ರ ದೇಶದಲ್ಲಿ ಸಂವಿಧಾನ ಸುಭದ್ರವಾಗಿರಲು ಸಾಧ್ಯ ಎಂದು ಹೇಳಿದರು. ಕರ್ನಾಟಕ ದಲಿತ ಸಂಘರ್ಷ ಸಮಿತಿ (ಬೀಮವಾದ ) ಸಂಚಲಾಕರ ಏಮ್ ಸಿ ನಾರಾಯಣ್ ಸರ್ ರವರ ಆದೇಶ ಮೇರಿಗೆ ರಾಜ್ಯದ ಏಲ್ಲ ಸಂಘಟನ ಸಂಚಾಲಕರು ಭಾಗವಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ ) ವಿಜಯಪುರ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಜಿಲ್ಲಾ ಸಮಿತಿ ಸಂಚಾಲಕ ಮುತ್ತಪ್ಪ ವಾಲಿಕಾರ್, ಜಿಲ್ಲಾ ಸಂಘಟನಾ ಸಂಚಾಲಕರಗಳಾಗಿ ಯಲ್ಲು ಹಾದಿಮನಿ, ಯಮುನೇಶ್ ಹಳ್ಳದಕೇರಿ, ಮಾಂತೇಶ್ ಕಾಳೆ, ಶರಣು ಜಮಖಂಡಿ , ವಾಸು ಕಾಳೆ ಇವರುಗಳನ್ನು ರಾಜ್ಯ ಸಂಚಾಲಕ ಎಂ ಸಿ ನಾರಾಯಣ್ ರವರ ಹಾಗೂ ರಾಜ್ಯ ಸಂಸ್ಥಾಪಕ ಸಂಚಾಲಕ ಪರಶುರಾಮ್ ನೀಲ ನಾಯಕ್, ರಾಜ್ಯ ಸಂಘಟನಾ ಸಂಚಾಲಕ ಸಂಜು ಕಾಂಬಳೆ ಸಮ್ಮುಖದಲ್ಲಿ ಸಮಿತಿ ರಚಿಸಲಾಯಿತು. ಸಭೆಯಲ್ಲಿ ರಾಜ್ಯ ಸಂಘಟನಾ ಸಂಚಾಲಕ ಭೀಮರಾಯ ಸಿಂಧಗಿ, ರಾಜ್ಯ ಖಜಂಚಿ ಚಂದ್ರು ಕೋಲಾರ್ ಹಾಗೂ ಗುಲ್ಬರ್ಗ ವಿಭಾಗ ಸಂಘಟನಾ ಸಂಚಾಲಕ ಯಮನಪ್ಪ ಗುಣಕಿ ಹಾಗೂ ಸಮಾಜದ ಹಿರಿಯರು ಯುವ ಮುಖಂಡರು ಭಾಗವಹಿಸಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ