*DSS ಗ್ರಾಮ ಶಾಖೆ ಉದ್ಘಾಟನೆ,ಶಿಕ್ಷಣಕ್ಕೆ ಒತ್ತು ಕೊಡಿ ಮನೆ ಮನೆಗಳಲ್ಲಿ ಉನ್ನತ ಶಿಕ್ಷಣ ಕಲಿತು ಅಧಿಕಾರಿಗಳಾಗಲಿ. ಬಿ. ಮರಿಸ್ವಾಮಿ*
ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹೊಸಳ್ಳಿ ಹೋಬಳಿ ವ್ಯಾಪ್ತಿಯಲ್ಲಿ ಬರುವ ಸೂಲದಳ್ಳಿ ಗ್ರಾಮದಲ್ಲಿ ಸೋಮವಾರ ದಂದು ಕರ್ನಾಟಕ ರಾಜ್ಯ ದಲಿತ ಸಂಘ ಸಮಿತಿ ಸಂಘಟನೆಯನ್ನು ಸೂಲದಹಳ್ಳಿ ಗ್ರಾಮದಲ್ಲಿ ಗ್ರಾಮ ಘಟಕ ನಾಮಫಲಕ ಉದ್ಘಾಟನೆಯನ್ನು ವಿಜಯ ನಗರ ಜಿಲ್ಲೆಯ ಡಿಎಸ್ಎಸ್ ನಾ ಜಿಲ್ಲಾ ಸಂಚಲಕರಾದ ಮರಿಸ್ವಾಮಿಯವರು ಹಾಗೂ ಕೂಡ್ಲಿಗಿ ತಾಲೂಕು ಡಿ ಎಸ್ ಎಸ್ ಸಂಚಾಲಕರಾದ ಡಿ. ಎಚ್ ದುರ್ಗೇಶ್ ಮತ್ತು ಗ್ರಾಮ ಪಂಚಾಯತಿ ಸದಸ್ಯರಾದ ಕೆ.ಸಿದ್ದಪ್ಪ ವಿಎಸ್ಎಸ್ ಅಧ್ಯಕ್ಷರವರ ಹಾಗೂ ಗ್ರಾಮಸ್ಥರ ಸಮ್ಮುಖದಲ್ಲಿ ಉದ್ಘಾಟನೆ ಮಾಡಲಾಯಿತು.
ಈ ಸಂರ್ಭದಲ್ಲಿ ಜಿಲ್ಲಾ ಸಂಘಟನಾ ಸಂಚಲಕರಾದ ಮರಿಸ್ವಾಮಿ ಯವರು ಕೇರಿಯ ಎಲ್ಲಾ ಯುವಕರಿಗೆ ಮತ್ತು ಕೇರಿಯ ಎಲ್ಲಾ ಮಹಿಳೆಯರಿಗೂ ಮುಖಂಡರಗಳಿಗೂ ಡಾ. ಬಿ ಆರ್ ಅಂಬೇಡ್ಕರ್ ಆದರ್ಶಗಳನ್ನು ಎಲ್ಲರೂ ಅಳವಡಿಸಿಕೊಂಡು ಗ್ರಾಮದ ಎಲ್ಲಾ ಜಾತಿ ಜನಾಂಗದವರ ಜೊತೆಗೆ ಉತ್ತಮ ಬಾಂದವ್ಯ ವನ್ನು ಬೆಳಿಸಿಕೊಳ್ಳಬೇಕು ಎಂದು ತಿಳಿಸಿ, ಹಾಗೆ ಪ್ರತಿಯೊಬ್ಬರೂ ತಮ್ಮ ತಮ್ಮ ಮಕ್ಕಳನ್ನು ಉತ್ತಮವಾದ ಶಿಕ್ಷಣ ವನ್ನು ಕೊಡಿಸುವುದರೊಂದಿಗೆ ನಮ್ಮ ಕೇರಿಯ ಎಲ್ಲಾ ಮನೆ ಮನೆಗಳಲ್ಲಿ ದೊಡ್ಡ ದೊಡ್ಡ ಅಧಿಕಾರಿಗಳು ಆಗುವಂತೆ ಶಿಕ್ಷಣವನ್ನು ನಿಮ್ಮ ಮಕ್ಕಳಿಗೆ ಕೊಡಿಸಿ ಎಂದು ಕರೆ ನೀಡಿದರು.
ನಂತರ ಮಾತನಾಡಿದ ದುರುಗೇಶ್ ವಕೀಲರು ಇವರು ಸಂಘಟನೆ ಒಗ್ಗೂಡಿಸಿ ಎಲ್ಲಾ ಯುವಕರಗಳಿಗೆ ಡಿ ಎಸ್ ಎಸ್ ಸಂಘಟನೆ ಬಗ್ಗೆ ಸಂಘದ ನಿಯಮಗಳನ್ನು ಮಿರದೇ ಅಂಬೇಡ್ಕರ್ ರವರ ತತ್ವ ಸಿದ್ದಂತಗಳನ್ನು ಎಲ್ಲರೂ ಅಳವಡಿಕೊಳ್ಳಿ ಎಂದು ತಿಳಿಸಿದರು,
ವಿ ಎಸ್ ಎಸ್ ಎನ್ ಅಧ್ಯಕ್ಷರು ಕೆ. ಸಿದ್ದಪ್ಪ ಇವರು ಸಂಘದ ಬಗ್ಗೆ ಹಾಗೂ ಗ್ರಾಮದ ಕುರಿತು ಇವರು ಹಿತ ನುಡಿಗಳನ್ನು ನುಡಿದರು, ಈ ಸಂರ್ಭದಲ್ಲಿ ಪೆಟ್ರೋಲ್ ಬಂಕ್ ಮಾಲೀಕರದ ಬಂಡೆ ರಾಘವೇಂದ್ರ, ಹಾಗೂ
ತಾಲೂಕು ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬಿ. ನಾಗರಾಜ್. ತಾಲೂಕ್ ಸಂಘಟನೆ ಸಂಚಾಲಕರು ವೆಂಕಟೇಶ, ಹಿರಿಯರು ಯುವಕರು ನಮ್ಮ ಗ್ರಾಮ ಘಟಕದ ಪದಾಧಿಕಾರಿಗಳು ಗೌರವಾಧ್ಯಕ್ಷರು ಗುಡ್ಡದ ಹನುಮಂತಪ್ಪ, ಅಧ್ಯಕ್ಷರು ಡಿಎಲ್ ರಮೇಶ್ ಉಪಾಧ್ಯಕ್ಷರು ಪರಸಪ್ಪರ, ಹನುಮಂತಪ್ಪ ,ಶಾಂತವರ ಬರಮೇಶ್ . ನಾಗರಾಜ್. ಚಿರಬಿ ಸಾರಪ್ಪ . ಗುಡ್ಡದ ಅಂಜಿನಪ್ಪ . ಶಾಂತವರಂಜಿನಪ್ಪ. ಸಿದ್ದಪ್ಪ, ಸಿದ್ದೇಶ. ಶಾಂತವರ ಪರಶುರಾಮ. ಮಂಗಾಪುರ ಬಸವರಾಜ . ಮಲ್ಲೇಶ. ತುಪ್ಪನಹಳ್ಳಿ ಸುರೇಶ. ಚಿರವಿ ನಾಗರಾಜ. ಕೊಡಳ್ಳಿ ನಾಗಪ್ಪ. ಇನ್ನು ಮುಂತಾದವರು ಗ್ರಾಮದ ಕಾಲೋನಿಯ ಹಿರಿಯರು ಮಹಿಳೆಯರು ಯುವಕರು ಭಾಗವಹಿಸಿದರು
*ವರದಿ ರಾಘವೇಂದ್ರ ಸಾಲುಮನೆ ಕೂಡ್ಲಿಗಿ*
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ