ಕಲ್ಲು ಗಣಿಗಾರಿಕೆ ಪರವಾನಿಗೆ ನೀಡದಿರಲು ವಿರುದ್ಧ ದೊಡ್ಡ ಗೊಲ್ಲರಹಟ್ಟಿ ಗ್ರಾಮಸ್ಥರ ಹೋರಾಟಕ್ಕೆ ಸಿಗುತ್ತಾ ನ್ಯಾಯ!

ವಿಜಯ ನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕೂಡ್ಲಿಗಿ ಹೋಬಳಿ ಬಡೇಲಡಕು ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ದೊಡ್ಡ ಗೊಲ್ಲರಹಟ್ಟಿ ಗ್ರಾಮದ  

 ಗ್ರಾಮಸ್ಥರು ಆಂತಕದ. ಭೀತಿಯಲ್ಲಿ ಇದ್ದರೆ ಅದು ಏನೆಂದರೆ ದೊಡ್ಡ ಗೊಲ್ಲರಹಟ್ಟಿ ಗ್ರಾಮಕ್ಕೆ ಆಂಟಿಕೊಂಡಿರುವ ಬಂಡೆ ಆಂಜನೇಯ ದೇವಸ್ಥಾನ ವಿರುವವ ಬಂಡೆ ಮಟ್ಟೇಯಂತಿರುವ ಸಣ್ಣ ಕಲ್ಲು ಗುಡ್ಡ 

ಮಾಜಿ ಸಚಿವರಾದ ಎನ್.ಎಂ ನಭೀ ಸಾಬ್ ನವರ ಪುತ್ರ ಎನ್. ಎಂ. ನೂರ್ ಅಹಮದ್ ರವರು ಕಲ್ಲು ಗಣಿಗಾರಿಕೆ ಮಾಡಲು ಅವರ ಹೆಸರಿಗೆ ದೊಡ್ಡ ಗೊಲ್ಲರಹಟ್ಟಿಯ ಪಕ್ಕದಲ್ಲಿರುವ ಬಂಡೆ ಆಂಜನೇಯನ ಕಲ್ಲು ಗುಡ್ಡದ ಪರವಾನಿಗೆ ಪಡೆಯಲು ಅರ್ಜಿ ಸಲ್ಲಿಸಿರುತ್ತಾರೆ,

ಈ ಅರ್ಜಿಯನ್ನು ಯಾವುದೇ ಕಾರಣಕ್ಕೂ ಮಾನ್ಯ ಜಿಲ್ಲಾಧಿಕಾರಿಗಳು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಅಧಿಕಾರಿಗಳು ತಾವುಗಳು ಪರವಾನಿಗೆ ನೀಡದೆ ರದ್ದು ಗೊಳಿಸಬೇಕು ಎಂದು ಗ್ರಾಮಸ್ಥರ ಕೂಗಾಗಿದೆ.

 ಕಾರಣ ನಮ್ಮ ಗ್ರಾಮಕ್ಕೆ ಪ್ರಾಚ್ಚಿನ ಕಾಲದಿಂದಲೂ ನಮ್ಮ ಹಿರಿಯರು ಆ ಬಂಡೆಯ ಮೇಲೆ ಬಂಡೆ ಆಂಜನೇಯನ ಪಾದದ ಹೆಜ್ಜೆಯ ಗುರುತು ಇದೆ, ಅದನ್ನೇ ನಾವು ಕಾಲನೂ ಕಾಲದಿಂದಲೂ ಪೂಜೆ ಮಾಡಿ ದೇವರ ಆಶ್ರೀವಾದ ಪಡೆದುಕೊಂಡುವು ಎಂಬ ನಂಬಿಕೆಯಲ್ಲಿ ನಾವು ಈ ದಿನಕ್ಕೂ ನಂಬಿಕೆಯಿಂದ ಜೀವನ ಮಾಡುತ್ತಿದ್ದೇವೆ ಎಂದು ಅಲ್ಲಿನ ಮಹಿಳೆಯರು ಹೇಳುತ್ತಿದ್ದಾರೆ,

 ಗ್ರಾಮದ ಎಲ್ಲಾ ಜನರಿಗೆ ಆತಂಕದ ಭೀತಿಗಳು : ನಮ್ಮ ಗ್ರಾಮದಲ್ಲಿನ ಗರ್ಭಿಣಿ ಮಹಿಳೆಯರಿಗೆ ಗ್ರಾಮದ ಪಕ್ಕದಲ್ಲಿ ಕಲ್ಲು ಗಣಿಗಾರಿಕೆ ಮಾಡಿದರೆ ಕಲ್ಲು ಬ್ಲಾಸ್ಟಿಂಗ್ ಶಬ್ದ ದಿಂದ ಮನೆಯಲ್ಲೇ ಇದ್ದರೂ ಗರ್ಭಿಣಿ ಹೆಣ್ಣು ಮಕ್ಕಳಿಗೆ ತೊಂದರೆಗಳು ಉಂಟಾಗುವ ಸಂಭವವಿದೆ, ಹಾಗೂ ನಮ್ಮ ಗ್ರಾಮ ಚಿಕ್ಕ ಗ್ರಾಮ ಆಗಿರುವುದರಿಂದ ಕಲ್ಲು ಬಂಡೆ ಕೈಗೆ ಸಿಗುವಂತಹ ಅಂತರದಲ್ಲಿರುವುದರಿಂದ ಕಲ್ಲು ಗಣಿಗಾರಿಕೆ ಸ್ಪೋಟಕ ಮಾಡುವ ಸಂದರ್ಭದಲ್ಲಿ ಗ್ರಾಮಕ್ಕೆ ಅಂಟಿಕೊಂಡಿರುವ ಈ ಕಲ್ಲು ಬಂಡೆ ಸಣ್ಣ ಸಣ್ಣ ಕಲ್ಲುಗಳು ಮನೆಯ ಮೇಲೆ ಬೀಳುವವವು ಹಾಗೂ ಶಾಲೆಯ ಮೇಲೆ ಬೀಳುವ ಸಂಭವವಿದೆ , ಎಂದು ತಿಳಿಸುತ್ತಾರೆ

ಕಲ್ಲು ಗಣಿಗಾರಿಕೆ ಸ್ಫೋಟಕ ದಿಂದ ಮನೆಗಳು ಬಿರುಕು ಬಿಡುವ ಸಂಭವವಿದೆ ಮನೆಯಲ್ಲಿ ವಾಸಿಸುವಂತಹ ಜನರಿಗೆ ಕಲ್ಲು ಚೂರುಗಳು ಧನ ಕರಗಳು,ಕುರಿ, ಮೇಕೆ,ಕುರಿಗಳಿಗೆ,ಜನ ಜಾನುವಾರಗಳಿಗೆ ಸಿಡಿಯುವ ಕಲ್ಲುಗಳಿಂದ ಅಪಾಯ ಉಂಟಾಗುತ್ತದೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ

 ದೊಡ್ಡ ಗೊಲ್ಲರಟ್ಟಿ ಪಕ್ಕದಲ್ಲಿರುವ ಕಲ್ಲು ಬಂಡೆಗೆ ಗಣಿಗಾರಿಕೆ ಮಾಡಲು ಅವಕಾಶ ಕೊಟ್ಟರೆ ನಮ್ಮ ಗ್ರಾಮದ ಸುತ್ತಮುತ್ತಲಿರುವ ಫಲವತ್ತತೆಯ ಭೂಮಿಗಳಿಗೆ ವಿಪರಿತ ಧೂಳಿನಿಂದ ಹಾಗೂ ನೀರಾವರಿ ಬೋರ್ವೆಲ್ ಗಳು ಸ್ಪೋಟಕದಿಂದ ಬೋರ್ವೆಲ್ ಒಳಗಡೆ ಕದಲಿ ಬೀಳಲಿದೆ ಹಾಗೂ ಎಲ್ಲಾ ಬೋರ್ವೆಲ್ ಗಳು ನೀರಾವರಿಯಿಂದ ರೈತರು ಜೀವನೋಪಾಯಕ್ಕೆ ಆಧಾರವಾಗಿರುವ ಬೋರ್ವೆಲ್ ಗಳು ಅಂತರ್ ಜಲ ಬರುವ ಸ್ಥಳದಲ್ಲಿ ಕದಲಿ ಬಿದ್ದು ಪಂಪು ಮೋಟಾರ್ ಗಳು ಭೂಮಿಯಲ್ಲಿ ಮುಚ್ಚಿಹೋಗುವ ಸಂಭವವಿದೆ ಎಂದು ತಮ್ಮ ಹಳಲನ್ನು ಹೇಳಿಕೊಂಡಿದ್ದಾರೆ,

 ಈ ಕಲ್ಲು ಗಣಿಗಾರಿಕೆ ಪರವಾನಿಗೆ ನೀಡಿದ್ದಲ್ಲಿ ಹೆಚ್ಚು ಹೆಚ್ಚು ಸಮಸ್ಯೆಗಳು ಗ್ರಾಮಕ್ಕೆ ಉಂಟಾಗುತ್ತದೆ ಎಂದು ಸಣ್ಣ ಮಕ್ಕಳಿಂದ ಮುಪ್ಪಿನ ವಯಸ್ಸಿನ ಹಿರಿಯರವರೆಗೂ ಕುಪ್ಪನ ಕೇರಿ ಕಂದಾಯ ಗ್ರಾಮಕ್ಕೆ ಸೇರಿರುವ 340/ 4 ವಿಸ್ತೀರ್ಣ 6 ಎಕರೆ ಜಮೀನನ್ನು ಪರವಾನಿಗೆ ಪಡೆಯಲು ಯಾರೇ ಅರ್ಜಿ ಸಲ್ಲಿಸಿದರು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯವರು ಹಾಗೂ ಸಂಬಂಧಪಟ್ಟಂತ ತಾಲೂಕು ಮತ್ತು ಜಿಲ್ಲಾದ ಎಲ್ಲಾ ಇಲಾಖೆಯ ಅಧಿಕಾರಿ ವರ್ಗದವರು ಮೇಲೆ ಕಾಣಿಸಿದ ಸರ್ವೇ ನಂಬರ್ ನ ಅರ್ಜಿಗಳನ್ನು ರದ್ದುಗೊಳಿಸಿ ಜನರ ಜೀವವನ್ನು ಹಾಗೂ ದೊಡ್ಡ ಗೊಲ್ಲರಟ್ಟಿ ಗ್ರಾಮವನ್ನು ಉಳಿಸಿ ಎಂಬ ಹೋರಾಟದ ಮೂಲಕ ಗ್ರಾಮಸ್ಥರು ಕೊಟ್ಟೂರು ರಸ್ತೆಯ ಮೇಲ್ ಸೇತುವೆ ಸ್ಥಳದಿಂದ ಒರಟ ಹೋರಾಟಗಾರರು ದೊಡ್ಡ ಗೊಲ್ಲರಟ್ಟಿ ಗ್ರಾಮದ ಪ್ರತಿ ಮನೆ ಮನೆಯ ನಾಗರಿಕರು ನೂರಾರು ಸಂಖ್ಯೆಯಲ್ಲಿ ಸೇರಿ ರ್ಯಾಲಿ ಮೂಲಕ ತಾಲೂಕು ಆಡಳಿತ ಸೌಧಕ್ಕೆ ಬಂದು ಜಮಾಯಿಸಿ, ಮಾನ್ಯ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಕೊಟ್ಟರು. ಈ ಸಂದರ್ಭದಲ್ಲಿ ಕರವೇ ತಾಲೂಕು ಅಧ್ಯಕ್ಷರಾದ ಕಾಟೇರ್ ಹಾಲೇಶ್ ಹಾಗೂ ಊರಿನ ಮುಖಂಡರಾದ ಸಿದ್ದಪ್ಪ, ಬಾಲಪ್ಪ,ಕಾಳಪ್ಪ, ದೊಡ್ಡ ನಾಗಪ್ಪ,ಚಿತ್ತಮ್ಮ, ಮೀನಾಕ್ಷಿ,ಲಕ್ಷ್ಮಿ,ಮಲ್ಲಮ್ಮ, ದೊಡ್ಡಪ್ಪ,ಬಾಲರಾಜ, ನಿಂಗಪ್ಪ,ಲೋಕೇಶ, ಕಡ್ಲೆಮ್ಮ,ಬಸವರಾಜ, ಶಶಿಕುಮಾರ, ಗ್ರಾಮದ ಎಲ್ಲಾ ಮುಖಂಡರುಗಳು ಭಾಗಿಯಾಗಿದ್ದ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ