ಮಹಿಳೆಯರಿಂದ ಭ್ರಮರಾಂಭ ದೇವಿಯ ರಥೋತ್ಸವ ಯಶಸ್ವಿ
ಮಸ್ಕಿ: ಇಂದು ಶೀಗೆ ಹುಣ್ಣಿಮೆಯ ನಿಮಿತ್ತ ಭ್ರಮರಾಂಭ ದೇವಿಯ ರಥೋತ್ಸವವನ್ನು ಸಕಲ ಸದ್ಭಕ್ತರ ಸಮ್ಮುಖದಲ್ಲಿ ಮಹಿಳೆಯರಿಂದ ಎಳೆಯುವ ಮೂಲಕ ಶಾಂತಿಯುತವಾಗಿ ನೆರವೇರಿತು.
ಪಟ್ಟಣದ ಭ್ರಮರಾಂಭ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಹುಣ್ಣಿಮೆಯ ಪ್ರಯುಕ್ತ ಮೈಸೂರು ದಸರಾ ಮಾದರಿಯಂತೆಯೇ ನಮ್ಮ ಭ್ರಮರಾಂಭ ದೇವಿಯ ರಥೋತ್ಸವನ್ನು ಮಹಿಳೆಯರು ಮಾತ್ರ ಎಳೆಯುವುದು ಇಲ್ಲಿಯ ವಿಶೇಷತೆ. ಸುಮಾರು ಹದಿಮೂರು ವರ್ಷಗಳಿಂದಲೂ ಮಹಿಳೆಯರೇ ರಥೋತ್ಸವನ್ನು ಎಳೆಯುತ್ತಾ ಬಂದಿರುತ್ತಾರೆ. ಸಾಯಂಕಾಲ ಸಮಯ 5.30 ನಿಮಿಷಕ್ಕೆ ಸರಿಯಾಗಿ ಪ್ರತೀ ವರ್ಷದಂತೆ ಈ ವರ್ಷದ ರಥೋತ್ಸವ ಯಶಸ್ವಿಯಾಗಿ ಜರುಗಿತು. ಈ ರಥೋತ್ಸವವು ಗಚ್ಚಿನಮಠದ ಶ್ರೀಶ್ರೀಶ್ರೀ ವರರುದ್ರಮುನಿ ಶಿವಾಚಾರ್ಯ ಮಹಾಸ್ವಾಮಿಗಳ ಅಧ್ಯಕ್ಷತೆಯಲ್ಲಿ ಹಾಗೂ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದ್ದರಿಂದ ಭ್ರಮರಾಂಭ ದೇವಿಯ ರಥೋತ್ಸವ ಶಾಂತಿಯುತವಾಗಿ ನಡೆಯಿತು.
ಈ ಸಂದರ್ಭದಲ್ಲಿ ಊರಿನ ಹಿರಿಯ ಮುಖಂಡರು,ವಿವಿಧ ಗ್ರಾಮದ ಸಕಲ ಸದ್ಭಕ್ತರು ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ