ನಾಗರಿಕರು ಪ್ಲಾಸ್ಟಿಕ್‌ ನ್ನು ಬಳಸಬಾರದು : ಡಾ. ಮಲ್ಲಿಕಾರ್ಜುನ ಇತ್ಲಿ ಮನವಿ

ಮಸ್ಕಿ: ಸ್ವಚ್ಛತಾ ಆಂದೋಲನ ಕಾರ್ಯಕ್ರಮ ನಿಮಿತ್ತ ಮಾತನಾಡಿ ನಾಗರೀಕರು ಪ್ಲಾಸ್ಟಿಕ್‌ ನ್ನು ಬಳಸಬಾರದು ಎಂದು ಡಾ. ಮಲ್ಲಿಕಾರ್ಜುನ ಇತ್ಲಿ ರವರು ನೆರೆದ ನಾಗರಿಕರಲ್ಲಿ ಮನವಿ ಮಾಡಿದರು.

ಇಂದು ಪಟ್ಟಣದ ಜನ ಶಿಕ್ಷಣ ಸಂಸ್ಥಾನ ರಾಯಚೂರು ಮತ್ತು ಹೈಟೆಕ್ ಕಂಪ್ಯೂಟರ್ ಶಿಕ್ಷಣ ತರಬೇತಿ ಕೇಂದ್ರ ಮಸ್ಕಿ, ಸಂಕಲ್ಪ ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ (ರಿ) ಮಸ್ಕಿ ವತಿಯಿಂದ ವಿಶೇಷ ಸ್ವಚ್ಛತೆ ಅಭಿಯಾನ 3.0 ಕಾರ್ಯಕ್ರಮ ನಡೆಯಿತು.ಮಸ್ಕಿಯ ಗಚ್ಚಿನ ಮಠದಿಂದ ಹಳೆ ಬಸ್ಟ್ಯಾಂಡ್ ವರೆಗೆ ಸ್ವಚ್ಛತೆ ಮತ್ತು ಹಳೆ ಬಸ್ ಸ್ಟ್ಯಾಂಡ್ ನಲ್ಲಿರುವ ಸಾರ್ವಜನಿಕ ಶೌಚಾಲಯವನ್ನು ಸ್ವಚ್ಛತ ಗೊಳಿಸಲಾಯಿತು.

ಈ ವೇಳೆ, ಡಾ. ಮಲ್ಲಿಕಾರ್ಜುನ ಇತ್ಲಿ ಅವರು ಮಾತನಾಡಿ 

ಮಸ್ಕಿಯಲ್ಲಿ ಸುಮಾರು ವರ್ಷಗಳಿಂದ ಸಂಕಲ್ಪ ಶಿಕ್ಷಣ ಮತ್ತು ಗ್ರಾಮೀಣಭಿವೃದ್ಧಿ ಸಂಸ್ಥೆ ಅಡಿಯಲ್ಲಿ ಸ್ಥಾಪಿತವಾದ ಹೈಟೆಕ್ ಕಂಪ್ಯೂಟರ್ ಶಿಕ್ಷಣ ತರಬೇತಿ ಕೇಂದ್ರ ಮಸ್ಕಿ ಸಂಸ್ಥೆಯು ಹಲವಾರು ಸಮಾಜ ಸೇವೆ ಕೆಲಸಗಳು ಮಾಡುತ್ತಿದ್ದು ಗಾಂಧಿಜಿ ಅವರ ಕನಸಿನಂತೆ ನಮ್ಮ ಭಾರತ ಸ್ವಚ್ಛವಾಗಿರಬೇಕು ಅವರ ಕನಸಿನಂತೆ ನಾವೆಲ್ಲರೂ ನಮ್ಮ ಮನೆ, ಊರು, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿ ಇಟ್ಟುಕೊಳ್ಳಬೇಕು ರಸ್ತೆ, ದೇವಸ್ಥಾನ, ಆಸ್ಪತ್ರೆ ಮತ್ತು ಶೌಚಾಲಯಗಳನ್ನ ಸ್ವಚ್ಛವಾಗಿಟ್ಟುಕೊಳ್ಳಬೇಕು ಜೊತೆಗೆ ಮಸ್ಕಿಯಲ್ಲಿ ಪ್ರಮುಖ ಬೀದಿಗಳಲ್ಲಿ ಕಸವನ್ನು ಹಾಕಲು ಕಸದ ಪುಟ್ಟಿಗಳನ್ನು ನಿರ್ಮಿಸಬೇಕೆಂದು ತಿಳಿಸಿದರು ಅದರ ಜೊತೆಗೆ ಪ್ಲಾಸ್ಟಿಕ್ ಅನ್ನು ಕಡಿಮೆ ಬಳಕೆ ಮಾಡಬೇಕು ಪ್ಲಾಸ್ಟಿಕ್ ನಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತದೆ ಎಂದು ತಿಳಿಸಿದರು.

ಈ ಸಂದರ್ಭದಲ್ಲಿ, ಸಂಸ್ಥೆಯ ವ್ಯವಸ್ಥಾಪಕರಾದ ಯಮನೂರ ಕನ್ನಾರಿ, ಲಯನ್ಸ್ ಕ್ಲಬ್ ಮಸ್ಕಿ, ಪುರಸಭೆ ಮಸ್ಕಿ, ಪದಾಧಿಕಾರಿಗಳು ಶರಣಬಸವ ಸೊಪ್ಪಿಮಠ,

ಲಕ್ಷ್ಮಿ ನಾರಾಯಣಶೆಟ್ಟಿ ಅಧ್ಯಕ್ಷ ಲಯನ್ಸ್ ಕ್ಲಬ್ ಮಸ್ಕಿ, ದೊಡ್ಡಪ್ಪ ಶಿಕ್ಷಕರು, ಶ್ರೀನಿವಾಸ್ ,ಅಭಿಷೇಕ್ ಇತ್ಲಿ ಅಶೋಕ ಲಾನ್ ಟೆನ್ನಿಸ್ ಅಸೋಸಿಯೇಷನ್ ಮಸ್ಕಿ ಸದಸ್ಯರು, ಬಸವರಾಜ (ಬುಕ್ಕಣ್ಣ) ಪುರಸಭೆ ಸದಸ್ಯರು ಮಸ್ಕಿ, ಆಂಜನೇಯ ಚಿಗರಿ, ಅಶೋಕ ಶಿಕ್ಷಕರು, ವೀರೇಶ ಮಡಿವಾಳ ಶಿಕ್ಷಕರು, ಶಿವರಾಜ್ ಮಡಿವಾಳ, ಅಕ್ಷಯ, ಅಮರೇಶ ಭೋವಿ, ಮಂಜುನಾಥ , ಸುಮಂತ ಮಾನ್ವಿ, ಸಂತೋಷ , ಕಿರಣ ಊರಿನ ಹಿರಿಯರು, ಯುವಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ