ವಿಶ್ವ ಅಯೋಡಿನ್ ಕೊರತೆ ನಿವಾರಣಾ ಸಪ್ತಾಹ

ಮಾನ್ವಿ: ತಾಲೂಕಿನ ನಕ್ಕುಂದಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹಾಗೂ ಆರೋಗ್ಯ ಇಲಾಖೆವತಿಯಿಂದ ನಡೆದ ವಿಶ್ವ ಅಯೋಡಿನ್ ಕೊರತೆ ನಿವಾರಣಾ ಸಪ್ತಾಹ ಅಂಗವಾಗಿ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ರಾಷ್ಟ್ರೀಯ ಬಾಲ ಸ್ವಾಸ್ಥ ಕಾರ್ಯಕ್ರಮದ ವೈದ್ಯಾಧಿಕಾರಿ ಡಾ. ಶ್ರೀಧರ ಇಲ್ಲೂರು ಮಾತನಾಡಿ ಅಯೋಡಿನ್ ನಮ್ಮ ದೇಹಕ್ಕೆ ಬೇಕಾಗುವ ಒಂದು ಸೂಕ್ಷ್ಮ ಪೋಷಕಾಂಶವಾಗಿದು ಅಯೋಡಿನ್ ಕೊರತೆಯಿಂದ ಹುಟ್ಟುವ ಮಕ್ಕಳಲ್ಲಿ ದೈಹಿಕ ಮತ್ತು ಮಾನಸಿಕ ವಿಕಲತೆ ಕಂಡುಬರುತ್ತದೆ ಮಕ್ಕಳಲ್ಲಿ ಕುಂಠಿತ ಬೆಳವಣಿಗೆ ಮತ್ತು ಕಲಿಕೆಯಲ್ಲಿ ಹಿಂದುಳಿಕೆ ಕಂಡುಬರುತ್ತದೆ ಗರ್ಭಣಿಯರಲ್ಲಿ ಅಯೋಡಿನ್ ಕೊರತೆ ಉಂಟಾದಲ್ಲಿ ನಿರ್ಜೀವ ಮಗು ಜನನವಾಗುವ ತೊಂದರೆ ಉಂಟಾಗುತ್ತದೆ ವಯಸ್ಕರಲ್ಲಿ ನಿಶಕ್ತಿ ಜಡತ್ವ ಗಳಗಂಡ ರೋಗ ಥೈರಾಯ್ಡ್ ಗ್ರಂಥಿಯ ಊತ ಕಂಡುಬರುತ್ತದೆ ಆದ್ದರಿಂದ ೦ ದಿಂದ ೦೧ ವರ್ಷದ ಮಕ್ಕಳಿಗೆ ೫೦ ಮೈಕ್ರೊ ಗ್ರಾಂ ೧೨ ರಿಂದ ೫೯ ತಿಂಗಳು ಮಕ್ಕಳಿಗೆ ೯೦ ಮೈಕ್ರೊ.ಗ್ರಾಂ. ಶಾಲಾ ವಯಸ್ಸಿನ ಮಕ್ಕಳಿಗೆ.೧೨೦ ಮೈಕ್ರೊ ಗ್ರಾಂ ಗರ್ಭಿಣಿಯರಿಗೆ ಹಾಗೂ ವಯಸ್ಕರಿಗೆ ೨೦೦ ಮೈಕ್ರೋ ಗ್ರಾಂ ನಷ್ಟು ಅಯೋಡಿನ್ ಸೇವನೆ ಅಗತ್ಯವಾಗಿರುತ್ತದೆ ಬೇಕಾಗಿರುತ್ತದೆ. ಅದ್ದರಿಂದ ನಾವು ಪ್ರತಿನಿತ್ಯ ಸೇವಿಸುವ ಉಪ್ಪಿನಲ್ಲಿ ಅಯೋಡಿನ್ ಸೇರಿಸಿರುವುದರಿಂದ ನೀವು ಅಯೋಡಿನ ಕೊರತೆಯನ್ನು ನಿಗಿಸಲು ಪ್ರತಿದಿನ ಆಹಾರದಲ್ಲಿ ಅಯೋಡಿನ್ ಇರುವ ಉಪುನ್ನೆ ಬಳಸಬೇಕು ಎಂದು ತಿಳಿಸಿದರು.

ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಾಲಪ್ಪ ನಾಯಕ ಅಯೋಡಿನ ಪೋಷಕಾಂಶದ ಬಗ್ಗೆ ಪಾಲಕರಲ್ಲಿ ಹಾಗೂ ಗರ್ಭಿಣಿ ಮಹಿಳೆಯರಿಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಅ.೨೭ ರವರೆಗೆ ವಿಶ್ವ ಅಯೋಡಿನ್ ಕೊರತೆ ನಿವಾರಣಾ ಸಪ್ತಾಹವನ್ನು ಅಚಾರಿಸಲಾಗುವುದು ಎಂದು ತಿಳಿಸಿದರು.

ಆರೋಗ್ಯ ಇಲಾಖೆಯಿಂದ ಅಂಗನವಾಡಿಯಲ್ಲಿನ ಮಕ್ಕಳ ಮತ್ತು ಗರ್ಭಿಣಿಯರ ಆರೋಗ್ಯ ತಪಾಸಣೆ ನಡೆಸಲಾಯಿತು.

 ಅಂಗನವಾಡಿ ಕಾರ್ಯಕರ್ತರಾದ ಲಲಿತಾ, ಗಂಗಮ್ಮ ಹಾಗೂ ಅಂಗನವಾಡಿ ಸಹಾಯಕಿಯರು ಹಾಗೂ ಗ್ರಾಮದ ಮಕ್ಕಳು, ತಾಯಂದಿರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ