*ದೇಶ ಸೇವೆಗೆ ಕಂಕಣಬದ್ಧರಾಗೋಣ*


ಕೊಟ್ಟೂರು ತಾಪಂ ಸಹಾಯಕ ನರ‍್ದೇಶಕರಾದ ಎಚ್.ವಿಜಯಕುಮಾರ್ ಅಭಿಮತ

ತಾಲೂಕು ಮಟ್ಟದ ನನ್ನ ಮಣ್ಣು ನನ್ನ ದೇಶ ಜಾಥಾಕ್ಕೆ ಚಾಲನೆ

ಕೊಟ್ಟೂರು: ಭಾರತಾಂಬೆಯ ಸೇವೆಗೆ ಪ್ರತಿಯೊಬ್ಬರೂ ಕಂಕಣಬದ್ಧರಾಗೋಣ ಎಂದು ತಾಲೂಕು ಪಂಚಾಯಿತಿಯ ಸಹಾಯಕ ನರ‍್ದೇಶಕರಾದ (ಗ್ರಾ.ಉ) ಎಚ್.ವಿಜಯಕುಮಾರ್ ಅವರು ಹೇಳಿದರು.

ತಾಲೂಕಿನ ಕೆ.ಅಯ್ಯನಹಳ್ಳಿ ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಹಾಗೂ ನೆಹರು ಯುವ ಕೇಂದ್ರ ಸೇರಿ ವಿವಿಧ ಇಲಾಖೆಗಳ ಆಶ್ರಯದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನನ್ನ ಮಣ್ಣು-ನನ್ನ ದೇಶ ಕರ‍್ಯಕ್ರಮದ ನಿಮಿತ್ತ ಮಣ್ಣು ಸಂಗ್ರಹ ಜಾಥಾಗೆ ಚಾಲನೆ ನೀಡಿ ಮಾತನಾಡಿದರು.

ಆಜಾದಿಕಾ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರದ ಮಂತ್ರಾಲಯದ ಆದೇಶದಂತೆ ತಾಲೂಕಿನ ಎಲ್ಲಡೆ ಆ.೧೫ ರಂದು ವೀರ ಯೋಧರಿಗೆ ಗೌರವ ಸಲ್ಲಿಸಲು ಶಿಲಾಫಲಕ ನರ‍್ಮಾಣ, ನಿವೃತ್ತ ಯೋಧರಿಗೆ ಸನ್ಮಾನ, ಅಮೃತ ಸರೋವರದ ಕಟ್ಟೆ ಮೇಲೆ ಧ್ವಜಾರೋಹಣ, ಅಮೃತ ವಾಟಿಕ, ನನ್ನ ಮಣ್ಣು-ನನ್ನ ದೇಶ ಕರ‍್ಯಕ್ರಮದ ನಿಮಿತ್ತ ಪ್ರತೀ ಗ್ರಾಪಂನಿಂದ ಮಣ್ಣು ಸಂಗ್ರಹಿಸುವುದು ಸೇರಿ ವಿವಿಧ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅದರಂತೆ ಎರಡನೇ ಹಂತದಲ್ಲಿ ತಾಲೂಕಿನೆಲ್ಲಡೆ ಸಂಗ್ರಹಿಸಿದ ಮಣ್ಣನ್ನು ತಾಲೂಕು ಮಟ್ಟದ ಕರ‍್ಯಕ್ರಮದ ಮೂಲಕ ನೆಹರು ಯುವ ಕೇಂದ್ರದವರಿಗೆ ಹಸ್ತಾಂತರ ಮಾಡಲಾಗುವುದು ಎಂದು ತಿಳಿಸಿದರು.

ಕೆ.ಅಯ್ಯನಹಳ್ಳಿ ಗ್ರಾಮದಲ್ಲಿ ತಾಲೂಕು ಮಟ್ಟದ ನನ್ನ ಮಣ್ಣು-ನನ್ನ ದೇಶ ಕರ‍್ಯಕ್ರಮ ಹಮ್ಮಿಕೊಳ್ಳಲಾಗಿದೆ. ಈ ನೆಲದ ಮಣ್ಣನ್ನು ಬಹಳ ಗೌರವಿತವಾಗಿ ಕಳಿಸಕೊಡಬೇಕಾಗಿ ಇರುವುದರಿಂದ ಜಾಥಾ ಕರ‍್ಯಕ್ರಮ ಹಮ್ಮಿಕೊಂಡು ನೆಹರು ಯುವ ಕೇಂದ್ರದವರಿಗೆ ನೀಡಲಾಗುವುದು. ಇಲ್ಲಿಂದ ಅವರು ಜಿಲ್ಲಾ ಮಟ್ಟದ ಕರ‍್ಯಕ್ರಮಕ್ಕೆ ಕಳಿಸಿಕೊಡುತ್ತಾರೆ ಎಂದು ತಿಳಿಸಿದರು.

ಮೆರುಗು ಹೆಚ್ಚಿಸಿದ ಜಾಥಾ: 

ಗ್ರಾಮದ ಗ್ರಾಮ ಪಂಚಾಯಿತಿ ಮುಂಭಾಗದಿಂದ ಆರಂಭಗೊಂಡ ಜಾಥಾ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಾಗಿ ಸಮುದಾಯ ಭವನದ ಮುಂಭಾಗದಲ್ಲಿನ ಮೈದಾನಕ್ಕೆ ತಲುಪಿ ಕೊನೆಗೊಂಡಿದೆ. ಈ ವೇಳೆ ಪಂಚಪ್ರಾಣ ಪ್ರತಿಜ್ಞೆ ಬೋಧಿಸಲಾಯಿತು. 

ಈ ಸಂರ‍್ಭದಲ್ಲಿ ಗ್ರಾಪಂ ಅಧ್ಯಕ್ಷೆ ಹೇಮಾಕ್ಷಿ ರೇಣುಕಪ್ಪ, ಉಪಾಕ್ಷೆ ಜೆ.ಸುಮಾ ನಿಜಲಿಂಗಪ್ಪ, ಮಾಜಿ ಉಪಾಧ್ಯಕ್ಷರಾದ ಕೆ.ಕೊಟ್ರೇಶ್, ಪಿಡಿಒ ರಾಘವೇಂದ್ರ ಅಣಜಿ, ತಾಂತ್ರಿಕ ಸಂಯೋಜಕ ಶ್ರೀಕಾಂತ,  ಐಇಸಿ ಸಂಯೋಜಕ ಪ್ರಭುಕುಮಾರ್ ಯು, ನೆಹರು ಯುವ ಕೇಂದ್ರದ ತಾಲೂಕು ಸಂಯೋಜಕರಾದ ವೀರೇಶ್, ಗ್ರಾಪಂ ಸದಸ್ಯರಾದ ವೃಷಭೇಂದ್ರ, ಕೊಟ್ರೇಶ್ ಕೆ, ತಾಂತ್ರಿಕ ಸಹಾಯಕರಾದ ಶ್ರೀಧರ್, ಚಂದ್ರಶೇಖರ್, ಬಿಲ್, ಕಲೆಕ್ಟರ್ ಪ್ರವೀಣ್, ಗ್ರಾಮದ ಮುಖಂಡರು, ಗ್ರಾಮಸ್ಥರು, ತಾಪಂ ಹಾಗೂ ಗ್ರಾಪಂ ಸಿಬ್ಬಂದಿ, ಬಿಎಫ್ ಟಿ, ಮೇಟಿಗಳು, ಕೂಲಿಕಾರರು  ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ