ಬಿಜೆಪಿಗರು ಹೀನ ರಾಜಕಾರಣ ಮಾಡುತ್ತಿದ್ದಾರೆ
ಬಳ್ಳಾರಿ:ಅಭಿವೃದ್ದಿ, ಜನ ಉಪಯೋಗಿ, ದೇಶದ ಉನ್ನತಿ, ಆರ್ಥಿಕ ಪ್ರಗತಿ ಅಂತಹ ವಿಚಾರ ಕುರಿತು ರಾಜಕಾರಣ ಮಾಡಲು ಬಾರದ ಬಿಜೆಪಿ ನಾಯಕರು ಸಾಮಾಜಿಕ ಜಾಲತಾಣದ ಮೂಲಕ ಕೀಳು, ನೀಚ ರಾಜಕಾರಣ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಮಾಧ್ಯಮ ವಕ್ತಾರ ವೆಂಕಟೇಶ್ ಹೆಗಡೆ ಟೀಕಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಬರೀ ಸುಳ್ಳು, ಲೇವಡಿ, ಅವಮಾನ, ಅಪಮಾನದ ವಿಚಾರಗಳ ಮೂಲಕ ವಿಪಕ್ಷ ನಾಯಕರ ಟೀಕೆ ಮಾಡುತ್ತಿದ್ದಾರೆ. ತೀರಾ ರಾಷ್ಟ್ರ ನಾಯಕರು, ಮುಖ್ಯಮಂತ್ರಿ, ಸಚಿವ ಎನ್ನದೆ ಸಾಮಾಜಿಕ ಜಾಲತಾಣಗಳ ಮೂಲಕ ವಿಪಕ್ಷ ನಾಯಕರ ತೇಜೋವಧೆ ಮಾಡುತ್ತಿದ್ದಾರೆ.
ನಾಡು ಕಂಡ ಶ್ರೇಷ್ಠ ಮುಖ್ಯಮಂತ್ರಿಗಳ ಪೈಕಿ ಒಬ್ಬರಾದ ನಮ್ಮ ನಾಯಕ ಸಿದ್ದರಾಮಯ್ಯ ಅವರನ್ನು ಪದೇ ಪದೇ ಮುಸ್ಲಿಂ ಪರ ಎಂದು ಬಿಂಬಿಸುವ ರೀತಿಯ ಪೋಸ್ಟ್ ಗಳನ್ನ ಹಾಕುತ್ತಿದ್ದಾರೆ. ಬಡವರ ಪಾಲಿನ ಆಶಾಕಿರಣ ಆಗಿರುವ ಸಿದ್ದರಾಮಯ್ಯ ಅವರು ಉಚಿತ ಬಸ್ ಸಂಚಾರವನ್ನು ಬರೀ ಮುಸ್ಲಿಂ ಮಹಿಳೆಯರಿಗೆ ನೀಡಿಲ್ಲ. ಮಾಸಿಕ 2 ಸಾವಿರ ರೂಪಾಯಿ ಸಹಾಯ ಧನವನ್ನು ಬರೀ ಮುಸ್ಲಿಂ ಮಹಿಳೆಯರಿಗೆ ನೀಡಿಲ್ಲ. ಅನ್ನಭಾಗ್ಯ, ಯುವನಿಧಿ ಕೇವಲ ಮುಸ್ಲಿಮರಿಗೆ ನೀಡಿಲ್ಲ. ಎಲ್ಲರಿಗೂ ನೀಡಿದ್ದಾರೆ.
ಜಾಣರ ಮುಗ್ಧ ಮನಸ್ಸನ್ನು ತಪ್ಪು ದಾರಿಗೆ ಒಯ್ಯುವ ಆತುರದಲ್ಲಿ ನಮ್ಮದೇ ನಾಡಿನ ಧೀಮಂತ ನಾಯಕರನ್ನು ಈ ರೀತಿ ಹಿಯ್ಶಾಳಿಸಿ ಟೀಕೆ ಮಾಡುವುದು ಅತ್ಯಂತ ಕೆಟ್ಟ ರಾಜಕಾರಣ.
ಇನ್ನು ನಮ್ಮ ನಾಯಕ ರಾಹುಲ್ ಗಾಂಧಿ ಅವರನ್ನು ಪದೇ ಪದೇ ಬಾಲಿಶ ಶಬ್ದ ಬಳಸಿ ಅವನ ಮಾಡಲು ಯತ್ನಿಸಿದರು. ಆದರೆ, ಅದು ಏಕಾಏಕಿ ಈಗ ಅವರನ್ನೇ ನಗೆಪಾಟಲಿಗೆ ಈಡು ಮಾಡುವ ಹಾಗೆ ಮಾಡಿದೆ.
ಭಾರತ್ ಜೋಡೋ ಯಾತ್ರೆಯ ಬಳಿಕ ವಿಚಲಿತರಾದ ಬಿಜೆಪಿಗರು ಈಗ ರಾಹುಲ್, ಗಾಂಧಿ ಸೋನಿಯಾ ಗಾಂಧಿ ಅವರು ಚುನಾವಣೆ ಬಳಿಕ ದೇಶ ಬಿಡುವರು ಎಂದು ಅಪ ಪ್ರಚಾರ ಮಾಡುತ್ತಿದ್ದಾರೆ.
ಮೊನ್ನೆ ಬೆಂಗಳೂರಿನಲ್ಲಿ ಕ್ರಿಕೆಟ್ ಪಂದ್ಯ ನಡೆದಾಗ ಅದನ್ನು ನೋಡಲು ನಮ್ಮ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಹೋಗಿದ್ದನ್ನು ಸಹ ಮುಸ್ಲಿಂ ಪರ ಎಂದು ಬಿಂಬಿಸುವ ಯತ್ನ ಮಾಡುತ್ತಿದ್ದಾರೆ.
ನಕಲಿ ಖಾತೆ ಮೂಲಕ ಟೀಕೆ ಟಿಪ್ಪಣಿ ಮಾಡುವ ಈ ಜನ ಎಂದಿಗೂ ಅಭಿವೃದ್ಧಿ ವಿಷಯ ಮುಂದಿಟ್ಟುಕೊಂಡು ರಾಜಕಾರಣ ಮಾಡಲ್ಲ. ಜನರ ಭಾವನೆ, ಧರ್ಮ, ಬಣ್ಣ ಅಂತೆಲ್ಲ ವಿಚಾರ ಇಟ್ಟುಕೊಂಡು ಸಾಮಾಜಿಕ ಜಾಲತಾಣದಲ್ಲಿ ರಾಜಕಾರಣ ಮಾಡುವ ಈ ಜನರ ಬಗ್ಗೆ ಯುವ ಸಮೂಹ ಎಚ್ಚರ ವಹಿಸಬೇಕು. ಕರ್ನಾಟಕ ವಿಧಾನ ಸಭಾ ಚುನಾವಣೆ ವೇಳೆ ತೋರಿದ ಜಾಣ್ಮೆಯನ್ನು ಮುಂದಿನ ಲೋಕಸಭಾ ಚುನಾವಣೆ ವೇಳೆ ಸಹ ತೋರಬೇಕು.
ಧರ್ಮ, ಜಾತಿ, ಬಣ್ಣಕ್ಕಿಂತ ದೊಡ್ಡದು ಮಾನವೀಯತೆ ಎಂಬುದನ್ನು ಈ ಜನಕ್ಕೆ ಮನವರಿಕೆ ಮಾಡಿಕೊಡಲು ಹೀನಾಯ ಸೋಲು ಉಣಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ