ಅಭಿವೃದ್ದಿ ಕಾಣದ ಶಾಸನಕ್ಕೆ ಹೊಸ ಕಳೆ ಯಾವಾಗ ? : ಪತ್ರಿಕಾ ಹೇಳಿಕೆ
ಮಸ್ಕಿ : ಪಟ್ಟಣದ ಹೊರ ವಲಯದಲ್ಲಿರುವ ಐತಿಹಾಸಿಕ ಪ್ರಸಿದ್ಧ ಅಶೋಕ ಶಿಲಾಶಾಸನ ಸ್ಥಳ ಅಭಿವೃದ್ಧಿ ಕಾಣದೇ ಭಣಗುಡುತ್ತಿದೆ. ಪ್ರವಾಸೋದ್ಯಮ ಇಲಾಖೆ, ಪ್ರಾಚ್ಯವಸ್ತು ಇಲಾಖೆ ನಿರ್ಲಕ್ಷಿಸುತ್ತಿದ್ದು, ಶಾಸನ ಸ್ಥಳ ಹಾಳು ಕುಂಪೆಯಾಗಿದೆ.
ಅದನ್ನು ಆದಷ್ಟು ಬೇಗನೆ ಅಭಿವೃದ್ಧಿ ಪಡಿಸಬೇಕು ಎಂದು ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಒಕ್ಕೂಟ ಮಸ್ಕಿ ತಾಲೂಕ ಘಟಕದ ಅಧ್ಯಕ್ಷ ವೀರಭದ್ರ ಕೊಠಾರಿ ಯವರು ಪತ್ರಿಕಾ ಹೇಳಿಕೆ ಮೂಲಕ ಒತ್ತಾಯ ಮಾಡಿದರು.
ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಪ್ರವಾಸಿಗರಹಾಗೂ ಇತಿಹಾಸಕಾರರ ಆಕ್ರೋಶಕ್ಕೆ ಕಾರಣವಾಗಿದೆ. ಶಾಸನ ಸ್ಥಳ ಮುಂಭಾಗದಲ್ಲಿ ಅಭಿವೃದ್ಧಿಗೆ 3 ಎಕರೆ ಜಾಗದಲ್ಲಿ ಅಂದಾಜು 21,00,000/- ಲಕ್ಷ ರೂಪಾಯಿ ವೆಚ್ಚದಲ್ಲಿ
ವಸ್ತುಸಂಗ್ರಹಾಲಯ, ಹೈಟೆಕ್ ಶೌಚಾಲಯ, ಕಟ್ಟಡಗಳು ಕೆಲಸ ಪೂರ್ಣಗೊಂಡು 6 ವರ್ಷ ಕಳೆದರೂ ಕೂಡ ಉದ್ಘಾಟನೆ ಭಾಗ್ಯ ಕಂಡಿಲ್ಲ. ಇನ್ನು ಉದ್ಯಾನವನ ನಿರ್ಮಾಣ ಕೆಲಸ ವಿಳಂಬವಾದ ಕಾರಣ ಶಾಸನ ಫಲದ ಬಳಿಯ ಜಾಗ ಬಿಕೋ ಎನ್ನುತ್ತಿದೆ. ಪ್ರವಾಸಿಗರ ಬಹುವರ್ಷದ ಪ್ರಮುಖ ಬೇಡಿಕೆಯ ಹಿನ್ನೆಲೆಯಲ್ಲಿ ಶಾಸನ ಸ್ಥಳ ಅಭಿವೃದ್ಧಿಪಡಿಸಲು ಶಾಸನ ಸ್ಥಳ ಬಳಿಯ ಜಮೀನಿನಲ್ಲಿ ಉದ್ಯಾನವನ ನಿರ್ಮಾಣ ಇನ್ನಿತರೆ ಕಟ್ಟಡ ಕಟ್ಟಲು 3 ಎಕರೆ ಜಮೀನು ಖರೀದಿಸಲಾಗಿತ್ತು. ಆದರೆ ಶಾಸನ ಸ್ಥಳದ ಬಳಿ ವಸ್ತು ಸಂಗ್ರಹಾಲಯ ಶೌಚಾಲಯ ಕಟ್ಟಡ ನಿರ್ಮಾಣ ಮಡಿದ್ದು ಬಿಟ್ಟರೆ, ಉಳಿದ ಯಾವ ಕೆಲಸಗಳು ಆಗಿಲ್ಲ. ಅಲ್ಲದೇ ಸುಮಾರು ರೂ. 29,00,000/- ಲಕ್ಷ ವೆಚ್ಚದ ಅಭಿವೃದ್ಧಿ ಕಾಮಗಾರಿಗಳಿಗೆ 6 ವರ್ಷ ಗತಿಸಿದರೂ ಚಾಲನೆ ಸಿಕ್ಕಿಲ್ಲ. ಅಲ್ಲದೇ ಉದ್ಘಾಟನಾ ಭಾಗ್ಯ ಕಾಣದೇ ಇರುವ ವಸ್ತು ಸಂಗ್ರಹಾಲಯ ಶೌಚಾಲಯ ಕಟ್ಟಡಗಳು, ಕಿಟಕಿಗಳು ಹಾಗೂ ಗಾಜಿನ ಗ್ಲಾಸ್‌ಗಳು ಹಾಳಾಗಿ ಹೋಗಿವೆ. ಶಾಸನ ಸ್ಥಳ ನೋಡಲು ಬರುವ ಪ್ರವಾಸಿಗರಿಗೆ ಶಾಸನ ಸ್ಥಳ ಬಳಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ರಸ್ತೆ ಹದಗಟ್ಟಿವೆ. ಕೂಡಲು ಹಾಸನಗಳಿಲ್ಲ. ಈಗಾಗಿ ಶಾಸನ ಸ್ಥಳ ನೋಡಲು ಬರುವ ಪ್ರವಾಸಿಗರು ವಿದ್ಯಾರ್ಥಿಗಳು ಸಂಬಂಧಿಸಿದ ಅಧಿಕಾರಿಗಳಿಗೆ ಇಡೀ ಶಾಪ ಹಾಕುತ್ತಿದ್ದಾರೆ. ಬಹು ವರ್ಷಗಳ ಬೇಡಿಕೆಯಾಗಿರುವ ಐತಿಹಾಸಿಕ ಪ್ರಸಿದ್ಧ ಅಶೋಕ ಶಿಲಾಶಾಸನ ಸ್ಥಳದಲ್ಲಿ ಉದ್ಯಾನವನ, ಪ್ರವಾಸಿ ಮಂದಿರ, ಕುಡಿಯುವ ನೀರಿನ ವ್ಯವಸ್ಥೆ, ಪ್ರವಾಸಿಗರಿಗೆ ವಿಶ್ರಾಂತಿ ಗೃಹ ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿ ಪ್ರವಾಸಿಗರ ಆಕರ್ಷಣೆಯ ತಾಣವನ್ನಾಗಿಸಲು ಶಾಸಕರು ಮುಂದಾಗಬೇಕು ಹಾಗೂ
ಪಟ್ಟಣದ ನಾಲ್ಕು ರಸ್ತೆ ಕೊಡುವ ಜಾಗಕ್ಕೆ ಅಶೋಕ ಸರ್ಕಲ್ ಕೂಡಾ ಕರೆಯಲಾಗುತ್ತದೆ. ಈ ಅಶೋಕ ಸರ್ಕಲ್ ಹತ್ತಿರ ಸುಮಾರು 30 ವರ್ಷಗಳಿಂದ ಅಶೋಕ ಶಿಲಾಶಾಸನ ಸ೦ಪೂರ್ಣ ಮಾಹಿತಿ ಇರುವ ಪ್ರವಾಸೋದ್ಯಮ ಇಲಾಖೆಯ ಬಹುದೊಡ್ಡದಾದ ಫಲಕ ಇದ್ದು, ಅದನ್ನು ಕೆಲ ಕಿಡಿಗೇಡಿಗಳು ದಿನಾಂಕ : 27- 01-2022 ರಂದು ರಾತ್ರಿ ನಾಮಫಲಕವನ್ನು ಕಳವು ಮಾಡಿರುತ್ತಾರೆ. ಮಸ್ಕಿಯ ಸಂಘಟನೆಗಳು ತಾಲೂಕ ಮಟ್ಟದ ಅಧಿಕಾರಿಗಳಿಗೆ ಒತ್ತಾಯ ಮಾಡಿ ಮಸ್ಕಿ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ. ಆದರೆ ಇದುವರೆಗೂ ತಪ್ಪಿತಸ್ಥರೂ ಪತ್ತೆಯಾಗಿರುವುದಿಲ್ಲ. ಅದನ್ನು ಶೀಘ್ರವೇ ತಡಮಾಡದೇ ಸಂಪೂರ್ಣ ತನಿಖೆ ಮಾಡಿ, ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು.ಎಂದು ರಾಷ್ಟ್ರೀಯ ವಿದ್ಯಾರ್ಥಿಗಳ ಒಕ್ಕೂಟ ಒತ್ತಾಯಿಸುತ್ತದೆ. ಎಂದುರು.
ಈ ಸಂದರ್ಭದಲ್ಲಿ,ಮಂಜುನಾಥ ಕೊಠಾರಿ, ಮೌನೇಶ ವೈ ಮುರಾರಿ, ಆಂಜನೇಯ ಭಂಡಾರಿ,ಸಚಿನ್ ಮುರಾರಿ ಸೇರಿದಂತೆ ವಿದ್ಯಾರ್ಥಿ ಸಂಘದ ಸದಸ್ಯರು ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ