ಸಾವಿರ ಗಿಡ ನೆಟ್ಟು ಟ್ಯಾಂಕರ್ ಮೂಲಕ ನೀರುಣಿಸುವಿಕೆ

ಮಸ್ಕಿ : ತಾಲೂಕಿನ ನಾಗಲದಿನ್ನಿಯ ತುಂಗಭದ್ರಾ ಕಾಲುವೆ ಯಿಂದ ಶಂಕರ್ ನಗರಕ್ಯಾಂಪ್ ಕ್ರಾಸ್ ವರೆಗೆ SFI ಸಂಘಟನೆ ಮಸ್ಕಿ ತಾಲೂಕು ಸಮಿತಿ ಮತ್ತು ಶ್ರೀ ಬಸವ ಸಂಸ್ಥೆ ವತಿಯಿಂದ 1000 ಗಿಡಗಳನ್ನು ನೆಟ್ಟು ಟ್ಯಾಂಕರ್ ಮೂಲಕ ನೀರುಣಿಸಲಾಯಿತು.

ನಾಗಲದಿನ್ನಿಯ ತುಂಗಭದ್ರಾ ಎಡದಂಡೆ ಉಪ ಕಾಲುವೆಯಿಂದ ಶಂಕರ್ ನಗರಕ್ಯಾಂಪ್ ಕ್ರಾಸ್ ವರೆಗೆ SFI ಸಂಘಟನೆ ಮಸ್ಕಿ ತಾಲೂಕು ಸಮಿತಿ ಮತ್ತು ಶ್ರೀ ಬಸವ ಸಂಸ್ಥೆ ವತಿಯಿಂದ 

ಬಿಸಿಲಿನ ನಾಡು ಕಲ್ಯಾಣ ಕರ್ನಾಟಕ ಭಾಗದಲ್ಲಿ ನೀರಿನ ಅಭಾವ ಹೆಚ್ಚು ಆದರೂ ಎದೆಗುಂದದೆ ಅರಣ್ಯ ಇಲಾಖೆಯ ಸಹಕಾರದಿಂದ 1000 ಸಸಿ ಗಿಡಗಳ್ಳನ್ನು ಹಚ್ಚಿ ಟ್ಯಾಂಕರ್ ಮೂಲಕ ಗಿಡಗಳಿಗೆ ನೀರುಣಿಸಿ ಪಾಲನೆ ಪೋಷಣೆ ಮಾಡಿದರು. ನಂತರ ಗಿಡ-ಮರಗಳನ್ನು ಸಂರಕ್ಷಣೆ ಮಾಡುವ ಮೂಲಕ ಪರಿಸರವನ್ನು ಉಳಿಸಿ ಎಂದು SFI ತಾಲೂಕು ಸಮಿತಿ ಅಧ್ಯಕ್ಷರು ಬಸವಂತ ಹಿರೇಕಡಬೂರು ಮತ್ತು ಶ್ರೀ ಬಸವ ಸಂಸ್ಥೆ ಅಧ್ಯಕ್ಷರಾದ ಯಂಕಪ್ಪ ಎಸ್ ಇಂಜಿನಿಯರ್ ಹಾಗೂ ಸಂಗಡಿಗರು ಪರಿಸರ ಪ್ರೇಮ ತೋರಿದ್ದಾರೆ.

ಇದೇ ಸಂದರ್ಭದಲ್ಲಿ ಎಸ್ ಎಫ್ ಐ ಸಂಘಟನೆಯ ಪದಾಧಿಕಾರಿಗಳು,ಶ್ರೀ ಬಸವ ಸಂಸ್ಥೆಯ ಸದಸ್ಯರು ಸೇರಿದಂತೆ ಕಾರ್ಮಿಕರು ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಕ್ರಿಕೆಟ್ ಬೆಟ್ಟಿಂಗ್ ದಂಧೆಕೋರರ ಎಡೆಮುರಿ ಕಟ್ಟಿದ : ಪಿಎಸ್ಐ ಗೀತಾಂಜಲಿ ಶಿಂಧೆ

ಮಲೆನಾಡಲ್ಲಿ ಮಳೆ:ಭದ್ರಾ ಒಳ ಹರಿವು ಹೆಚ್ಚಳ

ಕೊಟ್ಟೂರು ಪೊಲೀಸ್ ಠಾಣೆಗೆ ಮೊದಲ ಬಾರಿಗೆ ಮಹಿಳಾ ಪಿಎಸ್ಐ ಗೀತಾಂಜಲಿ ಶಿಂಧೆ