ಶ್ರೀ ದುರ್ಗಾ ದೇವಿಯ ಪ್ರತಿಷ್ಠಾಪನೆ ಕಾರ್ಯಕ್ರಮ ಯಶಸ್ಸು
ಕೊಪ್ಪಳ ನವಂಬರ್ 15 : -- ನಾಡಹಬ್ಬ ನವರಾತ್ರಿಯ ದಸರಾ ಹಬ್ಬದ ಅಂಗವಾಗಿ ನಗರದ 25 ನೇ ವಾರ್ಡಿನ ಫಿರ್ ದೋಸ್ ನಗರದ ಶ್ರೀ ಗೋವಿಂದರಾಜು ಗುಡಿ ಆವರಣದಲ್ಲಿ ಶ್ರೀ ದುರ್ಗಾದೇವಿ ಮಿತ್ರ ಮಂಡಳಿಯವರು ಪ್ರಥಮ ವರ್ಷದ ಶ್ರೀ ದುರ್ಗಾದೇವಿ ಪ್ರತಿಸ್ಥಾಪನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು.
ದೇವಿಯ ಮೂರ್ತಿಯನ್ನು ಈಶ್ವರ ದೇವಸ್ಥಾನದ -- ಈಶ್ವರ್ ಪಾರ್ಕ್ ದಿಂದ 25 ಮಂದಿ ಹೆಂಗಳೆಯರು ತಲೆಯ ಮೇಲೆ ಕುಂಭಮೇಳದೊಂದಿಗೆ ,
ಹಲಗೇರಿ ಗ್ರಾಮದ ಡೊಳ್ಳು ಕುಣಿತದ ಮುಖಂಡ ಗುಡದಪ್ಪ ಹಲಗೇರಿಯವರ ಡೊಳ್ಳುಕುಣಿತದ, ಬೂದಿಹಾಳಗ್ರಾಮದ ಸೀಮಣ್ಣ ಬಡಪ್ನವರ ನೇತೃತ್ವದ ಸೀಮೆ ಲಿಂಗೇಶ್ವರ ಡೊಳ್ಳಿನ ಮೇಳ ಹಾಗೂ ಡೊಳ್ಳಿನವರ ನೇತೃತ್ವದ ಹೀರೆ ಸಿಂದೋಗಿ ಗ್ರಾಮದ ಬೀರಲಿಂಗೇಶ್ವರ ಡೊಳ್ಳಿನ ವಾದ್ಯ-- ಮೇಳದ ಭವ್ಯ ಮೆರವಣಿಗೆಯೊಂದಿಗೆ ಹಿರಿಯರು , ಪುರುಷರು , ಚಿಕ್ಕ ಮಕ್ಕಳು ಎಲ್ಲರೂ ಹಬ್ಬದ ಸಂತೋಷ ಸಡಗರ ಸಂಭ್ರಮದಿಂದ ದುರ್ಗಾದೇವಿಯ ಮೂರ್ತಿಯನ್ನು ಬರಮಾಡಿಕೊಂಡು , ದೇವಿಯ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜೆ ಕಾರ್ಯಗಳನ್ನು ನೆರವೇರಿಸಲಾಯಿತು.
ಪೂಜೆಗೆ ಆಗಮಿಸಿದ ಎಲ್ಲ ಭಕ್ತ ವೃಂದದವರಿಗೆ ದುರ್ಗಾದೇವಿ ಮಿತ್ರ ಮಂಡಳಿಯವರಿಂದ ಅನ್ನಪ್ರಸಾದ ವ್ಯವಸ್ಥೆಯನ್ನು ಮಾಡಲಾಯಿತು. ಮೆರವಣಿಗೆಯ ಕುಂಭಮೇಳದಲ್ಲಿ ಮಹಿಳಾ ಮುಖಂಡರಾದ ಶಾಂತಾ ದಿಂಡೂರ್, ಕವಿತಾ ಸಂಗಯ್ಯ ಹಿರೇಮಠ, ಭವ್ಯ ಹೂಗಾರ್, ಶಕುಂತಲಾ ಹಾದಿಮನಿ , ಗಿರಿಜಮ್ಮ ಹೂಗಾರ್ , ಸರೋಜಮ್ಮ ಟೀಚರ್ ಹಲವಾರು ಮಹಿಳೆಯರು ಭಾಗವಹಿಸಿದ್ದರು. ಮೆರವಣಿಗೆ ನೇತೃತ್ವವನ್ನು ಶ್ರೀ ದುರ್ಗಾದೇವಿ ಮಿತ್ರ ಮಂಡಳಿಯ ಮುಖಂಡರಾದ ಈರಣ್ಣ ಹೂಗಾರ್ , ಶರಣಯ್ಯ ಸ್ವಾಮಿ ಹಿರೇಮಠ , ಸಂಗಪ್ಪ ದಿಂಡೂರ್, ಸಂಗಯ್ಯ ಸ್ವಾಮಿ ಹಿರೇಮಠ, ಶಿವಪ್ಪ ಲಂಗಟದ್, ರಮೇಶ್ ಬೊಮ್ಮನಾಳ್, ಅರುಣ್ ಕುಮಾರ್ ಕರ್ಲಿ, ಮಂಜುನಾಥ ಕೋಳೂರು, ಶರಣಬಸವಪ್ಪ ಜವಳಿ, ಅಮರೇಶ್ ಪಾಟೀಲ್, ವಿಜಯ್ ಜಿಗಜಿನಿ , ಅನಿಲ್ ಬೇಲೂರ್, ದಯಾನಂದ ಬಣಕಾರ , ಸುನಿಲ್ ಬೇಲೂರ್ ಹಾಗೂ ವಾರ್ಡಿನ ಗುರು ಹಿರಿಯರು , ವೃದ್ಧರು ,ಮಹಿಳೆಯರು, ಮಕ್ಕಳು ಮೆರವಣಿಗೆಯಲ್ಲಿ ಭಾಗವಹಿಸಿ ದೇವಿಯ ಪೂಜಾ ಪ್ರತಿಷ್ಠಾಪನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ