ಕನ್ನಡ ರಾಜ್ಯೋತ್ಸವ ಆಚರಣೆಗೆ ಕನ್ನಡ ಪರ ಸಂಘಟನೆಗಳಿಂದ ಅಧಿಕಾರಿಗಳ ವಿರುದ್ಧ ಅಸಮಾಧಾನ..!
ಕೊಟ್ಟೂರು : 17.10.2023 ರಂದು ತಾಲೂಕು ಕಚೇರಿಯಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ಪೂರ್ವಭಾವಿ ಸಭೆ ಕರೆಯಲಾಗಿತ್ತು ಈ ಸಭೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡ ಸೇನೆ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರು, ಕನ್ನಡ ಮಾಧ್ಯಮದ ಮಿತ್ರರು ಬೆರಳೆಣಿಕೆ ಮಾತ್ರ ಜನರು ಭಾಗಿಯಾಗಿದ್ದು.
ಈ ಸಭೆಯಲ್ಲಿ ಹಲವಾರು ಸಂಘಟನೆಗಳ ಅಧ್ಯಕ್ಷರು ಮುಖಂಡರುಗಳು ಇರುವುದಿಲ್ಲ ಹಾಗಾಗಿ ಈ ಸಭೆಯನ್ನು ಇನ್ನೊಮ್ಮೆ ಕರೆಯಿರಿ ಎಂದು ಮಾಧ್ಯಮ ಮಿತ್ರರು ಸಲಹೆ ನೀಡಿದರು.
ರಾಷ್ಟ್ರೀಯ ಹಬ್ಬಗಳ ಆಚರಣೆ ಸಮಿತಿಯ ಅಧ್ಯಕ್ಷರಾಗಿರುವ ಮಾನ್ಯ ಕೊಟ್ಟೂರು ಪ್ರಭಾರಿ ತಾಸಿಲ್ದಾರ್ ಸಾಹೇಬರು, ಸಲಹೆಗಳಿಗೆ ಬೆಲೆ ಕೊಡದೆ ಹೊಸ ಹೊಸ ನಿಯಮಗಳನ್ನು ಮಾಡುತ್ತಿದ್ದಾರೆ.
ಕನ್ನಡ ರಾಜ್ಯೋತ್ಸವ ಪ್ರಯುಕ್ತ ಎಲ್ಲಾ ಕನ್ನಡಪರ ಸಂಘಟನೆ ಅಧ್ಯಕ್ಷರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡದೆ ಅವರಿಗೆ ತಿಳಿದಂತೆಯೇ ಮಾಡುತ್ತಿದ್ದಾರೆ ಎಂದು ಸಾರ್ವಜನಿಕರಲ್ಲಿ ಚರ್ಚೆಗೆ ಗ್ರಾಸವಾಗಿದೆ.
ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ವರಿಗೆ ಸನ್ಮಾನ ಮಾಡುವ ಕುರಿತು ಒಂದು ಕಮಿಟಿ ರಚನೆ ಮಾಡಿ ಅದಕ್ಕೆ ತಾಲೂಕು ಪಂಚಾಯಿತಿ ಇಓ ಸಾಹೇಬ್ರೆ ಅಧ್ಯಕ್ಷತೆಯಲ್ಲಿ, ಮತ್ತು ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿಗಳು,ಹಾಗೂ ಸಂಘಟನೆಯ ಮುಖಂಡರ ಒಮ್ಮತದ ಮೇರೆಗೆ ತೀರ್ಮಾನ ತೆಗೆದುಕೊಳ್ಳುತ್ತೇವೆ ಎಂದು ತಹಸಿಲ್ದಾರ್ ಹೇಳಿದ್ದರು.ಆದರೆ ಇಲ್ಲಿಯವರೆಗೂ ಕನ್ನಡಪರ ಯಾವ ಸಂಘಟನೆ ಅಧ್ಯಕ್ಷರನ್ನು ವಿಶ್ವಷಕ್ಕಾದರೂ, ಸೌಜನ್ಯಕ್ಕಾದರೂ ಕರೆಯದೆ ತಮಗೆ ತಿಳಿದಂತೆ ಮಾಡುತ್ತಿದ್ದಾರೆ. ಎಂದು ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷರು, ಅನೇಕ ಕನ್ನಡ ಪರ ಸಂಘಟನೆಯ ಮುಖಂಡರುಗಳು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ