ವನ್ಯಜೀವಿ ಆವಾಸಸ್ಥಾನ ರಕ್ಷಣೆ ಪ್ರತಿಯೊಬ್ಬರ ಹೊಣೆ.!
ಕಾನ ಹೊಸಹಳ್ಳಿ: ತಾಲೂಕಿನ ಗುಡೆಕೋಟೆ ಕರಡಿ ದಾಮ ಹಾಗೂ ವಲಯ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ 69ನೇ ವನ್ಯಜೀವಿ ಸಪ್ತಾಹ-2023 ಮ್ಯಾರಥಾನ್ ಸ್ಪರ್ಧೆಗೆ ವಲಯ ಅರಣ್ಯ ಇಲಾಖೆ ಅಧಿಕಾರಿ ಬಿ.ಎಸ್. ಮಂಜುನಾಥ್ ಚಾಲನೆ ನೀಡಿ ಮಾತನಾಡಿ, ಪರಿಸರದಲ್ಲಿ ಸಮತೋಲನ ಕಾಯ್ದುಕೊಳ್ಳದಿದ್ದರೆ ಮನುಷ್ಯ ಕುಲಕ್ಕೆ ಕೇಡಾಗುವುದು ನಿಶ್ಚಿತ. ಅರಣ್ಯ ನಾಶವಾದರೆ ಪ್ರಾಣಿಗಳು ನಾಡಿಗೆ ಬರುತ್ತವೆ. ಇದರಿಂದ ಮನುಷ್ಯರಿಗೆ ಹಾಗೂ ಬೆಳೆಗಳಿಗೆ ತೊಂದರೆಯಾಗುತ್ತದೆ ಎಂದರು. ಭೂಮಿ ಮೇಲಿನ ಎಲ್ಲ ಜೀವಿಗಳಿಗೂ ಉತ್ತಮ ಪರಿಸರ ಅಗತ್ಯವಿದೆ. ಪರಿಸರ ಸಮತೋಲನವಾಗಿದ್ದರೆ ಶುದ್ಧ ಗಾಳಿ ಹಾಗೂ ನೀರು ಸಿಗುತ್ತದೆ. ವೈಜ್ಞಾನಿಕವಾಗಿ ನಮ್ಮ ದೇಶ ಮುಂದಿದೆ. ಈ ನಡುವೆ ಜನಸಂಖ್ಯೆ ನಿಯಂತ್ರಣ ಮಾಡುವುದನ್ನು ಮರೆತ್ತಿದ್ದೇವೆ. ಅತಿಯಾದ ನಗರೀಕರಣ, ಕೈಗಾರೀಕರಣದಿಂದ ವನ್ಯಜೀವಿ ಸಂಪತ್ತು ನಾಶವಾಗುತ್ತಿದೆ ಎಂದರು. ವನ್ಯಜೀವಿ ಸಪ್ತಾಹ ಹಿನ್ನೆಲೆಯಲ್ಲಿ ಮ್ಯಾರಥಾನ್ ಸ್ಪರ್ಧೆ ಏರ್ಪಡಿಸಲಾಗಿತ್ತು.
ಹೊಸಪೇಟೆ ವಿಭಾಗ, ಕೂಡ್ಲಿಗಿ ಉಪವಿಭಾಗ ಹಾಗೂ ಗುಡೇಕೋಟೆ ವಲಯ ಅರಣ್ಯ ಇಲಾಖೆಯ ಸಹಯೋಗದಲ್ಲಿ ತಾಲೂಕಿನ ರಾಮದುರ್ಗ ಕೆರೆಯಿಂದ ಗುಡೇಕೋಟೆ ಮಾರ್ಗವಾಗಿ ಸ್ಪರ್ಧಾಳುಗಳು ಅರಣ್ಯ ಇಲಾಖೆ ಕಚೇರಿ ಸೇರಿದರು. ಈ ಸ್ಪರ್ಧೆಯಲ್ಲಿ ಕೂಡ್ಲಿಗಿ ಮೈದಾನ ಗೆಳೆಯರ ಬಳಗ, ಶಿಕ್ಷಕರು, ಉಪನ್ಯಾಸಕರು, ತಾಲೂಕಿನ ಎಲ್ಲಾ ಪತ್ರಕರ್ತರು, ಯುವಕರು, ವಿದ್ಯಾರ್ಥಿಗಳು ಹಾಗೂ ಕೂಡ್ಲಿಗಿ, ಗುಡೆಕೋಟೆ ಅರಣ್ಯ ಇಲಾಖೆ ಸಿಬ್ಬಂದಿಗಳು ಸೇರಿದಂತೆ 70ಕ್ಕೂ ಹೆಚ್ಚು ಸ್ಪರ್ಧಾಳುಗಳು ಭಾಗವಹಿಸಿದ್ದರು. ಮ್ಯಾರಥಾನ್‌ನಲ್ಲಿ ಭಾಗವಹಿಸಿ ಪ್ರಥಮವಾಗಿ ರಾಜೇಶ್ ಗುಡೆಕೋಟೆ, ದ್ವಿತೀಯ ಸ್ಥಾನ ಕೊಟ್ರೇಶ್ ಕೂಡ್ಲಿಗಿ, ತೃತಿಯ ಸ್ಥಾನ ಉಮೇಶ್ ಕೂಡ್ಲಿಗಿ, ನಾಲ್ಕನೇ ಸ್ಥಾನ ಅಜಯ್, ಐದನೇ ಸ್ಥಾನ ಮಂಜು ಕೂಡ್ಲಿಗಿ, ಉಳಿದ ಎಲ್ಲ ಸ್ಪರ್ಧಾಳುಗಳಿಗೆ ಪ್ರಮಾಣ ಪತ್ರ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ವಲಯ ಅರಣ್ಯ ಇಲಾಖೆ ಅಧಿಕಾರಿ ಬಿ.ಎಸ್. ಮಂಜುನಾಥ್, ಪಿ. ಮಹೇಶ್ ಉಪ ವಲಯ ಅರಣ್ಯ ಅಧಿಕಾರಿ, ವೆಂಕಟೇಶ್ ನಾಯ್ಕ್, ಹೊನ್ನೂರ ಸ್ವಾಮಿ, ಗುರು ಬಸವರಾಜ್, ತಿಪ್ಪೇಸ್ವಾಮಿ ಗಸ್ತು ಅರಣ್ಯ ಪಾಲಕ, ರಾಮಲಿಂಗಪ್ಪ, ವೆಂಕಟೇಶ್, ನಾಗರಾಜ್, ಯೋಗನಂದ, ಶ್ರೀಧರ್ ಮತ್ತು ಎಲ್ಲಾ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ