ಅಡೆತಡೆ ಓಟದಲ್ಲಿ ರಾಮಲಿಂಗೇಶ್ವರ ಕಲ್ಯಾಣಪ್ಪ ರಾಜ್ಯ ಮಟ್ಟಕ್ಕೆ ಆಯ್ಕೆ

ಮಸ್ಕಿ : ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹಾಲಾಪೂರು ಶಾಲೆಯ ರಾಮಲಿಂಗೇಶ್ವರ ಕಲ್ಯಾಣಪ್ಪ ಎಂಬ ವಿದ್ಯಾರ್ಥಿ ಅಡೆತಡೆ ಓಟದ ಸ್ಪರ್ಧೆ ಜಿಲ್ಲಾ ಮಟ್ಟದ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆಯುವ ಮೂಲಕ ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿ ತಾಲೂಕಿನ ಹಾಗೂ ಶಾಲೆಯ ಕೀರ್ತಿ ತಂದು ಕೊಟ್ಟಿದ್ದಾನೆ ಎಂದು ಶಾಲಾ ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದ್ದಾರೆ.

೨೦೨೩-೨೪ ನೇ ಸಾಲಿನ ಮಾನವಿ ತಾಲೂಕಿನ ಸರ್ಕಾರಿ ಪ್ರೌಢಶಾಲೆ ಹಾಲಾಪೂರು ಶಾಲೆಯ ಕೀರ್ತಿ ಹೆಚ್ಚಿಸಿದ ರಾಮಲಿಂಗೇಶ್ವರ ಕಲ್ಯಾಣಪ್ಪ ಈ ವಿದ್ಯಾರ್ಥಿ ರಾಯಚೂರಿನ ಶಕ್ತಿ ನಗರದ ಡಿ.ಎ.ವಿ ಶಾಲೆಯಲ್ಲಿ ನಡೆದ ೧೭ ವರ್ಷ ವಯೋಮಿತಿ ಒಳಗಿನ ಬಾಲಕರ ಹಾಗೂ ಬಾಲಕಿಯರ ಅಡೆತಡೆ ಓಟದಲ್ಲಿ ಸತತ ಎರಡನೇ ಬಾರಿಗೆ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆ ಯಾಗಿದ್ದಾನೆ. ಈ ಸಾಧನೆ ಮಾಡಿದ ಕ್ರೀಡಾಪಟು ರಾಜ್ಯ ಮಟ್ಟದಿಂದ ಗೆದ್ದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಲಿ ಎಂದು ಎಸ್ ಡಿ ಎಂ ಸಿ ಅಧ್ಯಕ್ಷರಾದ ವೀರಭದ್ರ ತಾತ, ಸರ್ವ ಪದಾಧಿಕಾರಿಗಳು, ಮುಖ್ಯೋಪಾಧ್ಯಯರಾದ ಸುಭಾಸ್ ಸಿಂಗ್ ಹಜಾರಿ , ಶಿಕ್ಷಕ ವೃಂದ ,ಹಾಗೂ ತರಬೇತಿ ನೀಡಿದ ರವೀಂದ್ರ ,ಊರಿನ ಗಣ್ಯರು ,ಕ್ರೀಡಾ ಪ್ರೇಮಿಗಳು, ಹಿರಿಯ ವಿದ್ಯಾರ್ಥಿಗಳು ,ತುಂಬು ಹೃದಯದ ಅಭಿನಂದನೆಗಳನ್ನು ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪಡಿತರ ವಿತರಣೆಯಲ್ಲಿ ಸರ್ವರ್ ದೋಷ ಕಾದುಕುಳಿತ ಬಡ ಕುಟುಂಬಗಳು

ರಾಜ್ಯೋತ್ಸವ ಕಾರ್ಯಕ್ರಮಕ್ಕೆ ಆಹ್ವಾನ ನೀಡದ ಪಿಡಿಓ,ಕಾರ್ಯದರ್ಶಿ

*ಪ.ಪಂ. ಸದಸ್ಯರ ಅಧಿಕಾರಾವಧಿ ಅಂತ್ಯ : ಆಡಳಿತಾಧಿಕಾರಿಯಾಗಿ ಜಿ.ಕೆ. ಅಮರೇಶ್ ನೇಮಕ*