ವಿವಿಧ ಮೂಲಭೂತ ಸೌಕರ್ಯ ಒದಗಿಸುವಂತೆ : ಡಿ.ಎಸ್.ಎಸ್ ಪತ್ರಿಕಾ ಗೋಷ್ಠಿ

ಮಸ್ಕಿ : ತಾಲೂಕಿನಾದ್ಯಂತ ವಿವಿಧ ಗ್ರಾಮಗಳಲ್ಲಿರುವ ಮೂಲಭೂತ ಸಮಸ್ಯೆಗಳು ಹಾಗೂ ಭೂಮಿ, ವಸತಿ, ನಿವೇಶನರಹಿತ ಕುಟುಂಬಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಪಟ್ಟಣದ ಪತ್ರಿಕಾ ಭವನದಲ್ಲಿ ಪತ್ರಿಕಾ ಗೋಷ್ಠಿಯಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿಸಿದ ತಾಲೂಕು ಸಮಿತಿ) ಯಿಂದ ಒತ್ತಾಯಿಸಲಾಯಿತು.

ತಾಲೂಕಿನಲ್ಲಿರುವ ಸರ್ಕಾರಿ ಮತ್ತು ಖಾಸಗಿ ಜಮೀನಿನಲ್ಲಿ ವಾಸ ಮಾಡುವಂತಹ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ನೀಡಬೇಕೆಂದು ಈಗಾಗಲೇ ಹಲವಾರು ಬಾರಿ ತಾಲೂಕು ಆಡಳಿತಕ್ಕೆ ಮನವಿ ಸಲ್ಲಿಸಿದರೂ ಕೂಡ ಯಾವುದೇ ಬೇಡಿಕೆಗಳನ್ನು ಈಡೇರಿಸಿರುವುದಿಲ್ಲ, ಉದಾಹರಣೆ ತಾಲೂಕಿನ ಹಿರೇದಿನ್ನಿ ಸಿಮೆ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಸುಂಕನೂರು ಗ್ರಾಮದ ಸರ್ವೇ ನಂ. 51ರಲ್ಲಿ 10 ವರ್ಷಗಳಿಂದ ವಾಸ ಮಾಡುವಂತಹ 10 ದಲಿತ ಕುಟುಂಬಗಳಿಗೆ ಹಕ್ಕು ಪತ್ರ ಕೊಡಬೇಕೆಂದು ಮನವಿ ಕೊಟ್ಟಿದ್ದು, ಇನ್ನೂವರೆಗಾದರೂ ಇದರ ಬಗ್ಗೆ ತಹಶೀಲ್ದಾರರಾಗಲಿ, ಸಂಬಂಧಪಟ್ಟ ಅಧಿಕಾರಿಯಾಗಲೀ ಇದರ ಬಗ್ಗೆ ಗಮನ ಹರಿಸಿರುವುದಿಲ್ಲ. ಮತ್ತು ಮಲ್ಲದಗುಡ್ಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬಳಪಡುವ ಮರಕಂದಿನ್ನಿ ಗ್ರಾಮದ ಸರ್ವೇ ನಂ. 72 ರಲ್ಲಿನ 6 ಎಕರೆ ಗಾಯರಾಣಿ ಭೂಮಿಯಲ್ಲಿ ಗುರುತಿಸಿದ ಸ್ಮಶಾನವನ್ನು ಕೂಡ ಹದ್ದುಬಸ್ತು ಮಾಡಿ ಉಳಿದ ಭೂಮಿಯನ್ನು ಹುಲ್ಲುಗಾವಲು ಪದೇಶವನ್ನು ಮಾಡಿ ಎಂದು ಮನವಿ ಕೊಟ್ಟರೂ ಕೂಡ, ಇನ್ನೂವರೆಗಾದರೂ ಬೇಡಿಕೆಗಳನ್ನು ಈಡೇರಿಸಿರುವುದಿಲ್ಲ. ಮತ್ತು ಮರಕಲದಿನ್ನಿ ಗ್ರಾಮದ ಸ್ಥಳಾಂತರಗೊಂಡ ಪ್ರದೇಶದಲ್ಲಿ ನಿರ್ಮಾಣಗೊಂಡ ಮನೆಗಳನ್ನು ಹಂಚಿಕೆ ಮಾಡಿ ಹಕ್ಕುಪತ್ರ ನೀಡಿರುವುದಿಲ್ಲ ಹಾಗೂ ಸರ್ಕಾರಿ ಭೂಮಿಯಲ್ಲಿ ಸಾಗುವಳಿ ಮಾಡುವಂತಹ ಸಾಗುವಳಿದಾರರಿಗೆ ಅರ್ಜಿ ಹಾಕಿದರೂ ಕೂಡ ಇನ್ನೂ ಇದುವರೆಗಾದರೂ ಸಾಗುವಳಿ ಚೀಟಿ ಅಥವಾ ಹಕ್ಕು ಪತ್ರ ನೀಡಿರುವುದಿಲ್ಲ, ಆದ್ದರಿಂದ ಆದಷ್ಟು ಬೇಗನೆ ಸಮಸ್ಯೆಗಳನ್ನು ಈಡೇರಿಸಬೇಕು ಒಂದು ವೇಳೆ ಈಡೇರಿಸದಿದ್ದರೆ ತಾಲೂಕು ಆಡಳಿತದ ಮುಂದೆ ಬೃಹತ್ ಪ್ರತಿಭಟನಾ ಸತ್ಯಾಗ್ರಹ ಧರಣಿಯನ್ನು ಹಮ್ಮಿಕೊಳ್ಳಲಾಗುವುದು' ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪ್ರೋ.ಬಿ.ಕೃಷ್ಣಪ್ಪ ಸ್ಥಾಪಿಸಿದ ತಾಲೂಕು ಸಮಿತಿ) ಪತ್ರಿಕಾ ಗೋಷ್ಠಿಯ ಮೂಲಕ ತಾಲೂಕು ಆಡಳಿತಕ್ಕೆ ಎಚ್ಚರಿಸಿದ್ದಾರೆ.

ಈ ಸಂದರ್ಭದಲ್ಲಿ ತುರುಮಂದೆಪ್ಪ ಕಟ್ಟಿಮನಿ, ಕಾಸೀಮಪ್ಪ ಡಿ ಮುರಾರಿ ರಡ್ಡೆಪ್ಪ ಕುಣಿಕೆಲ್ಲೂರು,ಪರಸಪ್ಪ ದೀನಸಮುದ್ರ,ದ್ಯಾಮಣ್ಣ ಸಂತೆಕಲ್ಲೂರು,ಮೋಹನ್ ಎಮ್.ಮುರಾರಿ ಇದ್ದರು.

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಐತಿಹಾಸಿಕ ಚರಿತ್ರೆಯ ಚಿರಿಬಿ ಮೂಗಬಸವೇಶ್ವರ ಸ್ವಾಮಿ ದೇವಸ್ಥಾನ ಚಿರಿಬಿಗೆ ಸೇರಿದ್ದು!

" ಕೆಲಸದ ವೇಳೆ ಅಸಡ್ಯ ತೋರುತ್ತಿರುವ ಸಿಬ್ಬಂದಿ ಕಿರಣ್ ಕುಮಾರ್ ಕ್ರಮವಹಿಸುವಂತೆ ಆಗ್ರಹ"

*🪔ನಿಧನ ವಾರ್ತೆ : ತಳವಾರ ದುರುಗಪ್ಪ -ನಿಧನ 🪔*